– ಅಧಿಕಾರಕ್ಕಾಗಿ ರಾಜಕೀಯ ಮಾಡಬಾರದು
ಕಲಬುರಗಿ: ಸಭೆ, ಸದನ ಬಿಟ್ಟರೆ ಯಾವುದೇ ಸಂದರ್ಭದಲ್ಲಿ ನಾನು ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿಲ್ಲ. ಉಳಿದ ಸಮಯದಲ್ಲಿ ನಾನು ಅವರನ್ನು ಭೇಟಿ ಮಾಡಿದ್ದು, ಸಾಬೀತು ಮಾಡಿದ್ದಾದರೆ ರಾಜಕೀಯ ಸನ್ಯಾಸ ತೆಗೆದುಕೊಳ್ಳುತ್ತೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸವಾಲು ಹಾಕಿದ್ದಾರೆ.
Advertisement
ಕಲಬುರಗಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ಹುಟ್ಟು ಹಬ್ಬದ ಸಂದರ್ಭದಲ್ಲಿ ಭೇಟಿ ಮಾಡಿದ್ದೆ, ನಂತರ ಅವರನ್ನು ಭೇಟಿ ಮಾಡಿಲ್ಲಾ. ಭೇಟಿ ಮಾಡೋದು ಅದೇ ಕುಮಾರಸ್ವಾಮಿ ಎಂದು ನೇರವಾಗಿ ಅರೋಪಿಸಿದ್ದಾರೆ. ಇದನ್ನೂ ಓದಿ: ಪರ್ಸಂಟೇಜ್ ಆರೋಪ – ನನಗೂ, ಪಕ್ಷಕ್ಕೂ ಸಂಬಂಧವಿಲ್ಲದ ವಿಚಾರ ಅಂದ್ರು ಡಿಕೆಶಿ
Advertisement
ಯಡಿಯೂರಪ್ಪ ಅವರ ಆಪ್ತರ ಮೇಲಿನ ಐಟಿ ದಾಳಿ ಬಗ್ಗೆ ಪ್ರತಿಕ್ರಿಯಿಸಿ, ಪ್ರಧಾನಮಂತ್ರಿಗಳು ಬಿಜೆಪಿಯವರು ಅವರು ನನ್ನ ಮಾತು ಕೇಳಿ ರೈಡ್ ಮಾಡ್ತಾರಾ? ಎಂದು ಮರುಪ್ರಶ್ನಿಸಿದರು. ಈ ಹಿಂದೆ ನಾನು ತಾಲೂಕು ಬೋರ್ಡ್ ಸದಸ್ಯ ಆಗಿದ್ದಾಗಲೇ ವಿರೋಧ ಪಕ್ಷದ ನಾಯಕನಾಗಿದ್ದೆ, ಆಗಲು ಕೂಡಾ ಅಧಿಕಾರದಲ್ಲಿದ್ದವರನ್ನು ಭೇಟಿ ಮಾಡುತ್ತಿರಲಿಲ್ಲ. ಇದು ರಾಜಕೀಯದಲ್ಲಿ ನನ್ನ ತತ್ವ ಸಿದ್ದಾಂತ ಎಂದಿದ್ದಾರೆ.
Advertisement
Advertisement
ಅಧಿಕಾರಕ್ಕಾಗಿ ರಾಜಕೀಯ ಮಾಡಬಾರದು. ಕುಮಾರಸ್ವಾಮಿ ಬಿಜೆಪಿ ಜೊತೆ ಹೋದ್ರಲ್ಲಾ ಅದು ಏನು ಆವಾಗ ಕುಮಾರಸ್ವಾಮಿ ಸನ್ಯಾಸಿ ಆಗಲಿಕ್ಕೆ ಹೋಗಿದ್ರಾ, ಪಕ್ಷದ ಹೆಸರು ಜೆಡಿಎಸ್, ಸರ್ಕಾರ ಮಾಡಿದ್ದು, ಕೋಮುವಾದಿ ಬಿಜೆಪಿ ಅವರ ಬಳಿ ಸನ್ಯಾಸತ್ವ ತೆಗೆದುಕೊಳ್ಳಲಿಕ್ಕೆ ಹೋಗಿದ್ರಾ ಎಂದ ಅವರು ಅಂತವರಿಂದ ಪಾಠ ಕಲಿಬೇಕಾಗಿ ಬಂದಿರೋದು ನಮ್ಮ ದುಸ್ಥಿತಿ ಎಂದು ಮರುಗಿದರು.