ಹಾವೇರಿ: ಸಿದ್ದರಾಮಯ್ಯ (Siddaramaiah) ವರುಣಾದಿಂದ ಸ್ಪರ್ಧೆ ಮಾಡುತ್ತಾರೆ ಎಂಬ ವಿಚಾರಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (C.T.Ravi) ಲೇವಡಿ ಮಾಡಿದ್ದಾರೆ.
ಹಾವೇರಿ (Haveri) ಜಿಲ್ಲೆ ಶಿಗ್ಗಾಂವಿ (Shiggaon) ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಅದರ ಬಗ್ಗೆ ಮಾಹಿತಿ ಇಲ್ಲ. ಈಗ ಅದರ ಬಗ್ಗೆ ಮಾತನಾಡಿದರೆ ವ್ಯಕ್ತಿಗತವಾಗಿ ತೆಗೆದುಕೊಳ್ಳುತ್ತಾರೆ. ಅದು ತಪ್ಪಾಗುತ್ತದೆ. ಆದರೆ ಒಂದಂತೂ ಸ್ಪಷ್ಟವಾಯಿತು. ಸಿದ್ದರಾಮಯ್ಯನವರಿಗೆ ಬಾದಾಮಿ (Badami), ಚಾಮುಂಡೇಶ್ವರಿ (Chamundeshwari), ಕೋಲಾರ (Kolar) ಯಾವುದೂ ಸ್ಪಷ್ಟತೆ ಇಲ್ಲ ಎನ್ನುವುದು ಗೊತ್ತಾಯಿತು ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಸಿದ್ದರಾಮಯ್ಯ ರಾಜ್ಯದ ಯಾವ ಕ್ಷೇತ್ರದಲ್ಲೂ ಗೆಲ್ಲುವುದಿಲ್ಲ: ಆರ್.ಅಶೋಕ್
ಮಾರ್ಚ್ 1ರಿಂದ ಆರಂಭವಾದ ರಥಯಾತ್ರೆ ಯಶಸ್ವಿಯಾಗಿ ಸಾಗುತ್ತಿದೆ. 150 ಕ್ಷೇತ್ರಗಳಲ್ಲಿ ಯಾತ್ರೆ ಪೂರ್ಣಗೊಂಡಿದೆ. ಮಾ.21ರೊಳಗೆ ಎಲ್ಲಾ ಕ್ಷೇತ್ರಗಳಲ್ಲಿ ಯಾತ್ರೆ ಹಾಯ್ದು ಬರುತ್ತದೆ. ಮಾರ್ಚ್ 25ರಂದು ದಾವಣಗೆರೆಯಲ್ಲಿ (Davanagere) ಪ್ರಧಾನಿ ಮೋದಿಯವರ (Narendra Modi) ನೇತೃತ್ವದಲ್ಲಿ ಮಹಾ ಸಂಗಮವಾಗಲಿದೆ. ದೇಶ ಮೊದಲು ಎನ್ನುವುದು ನಮ್ಮ ನೀತಿ. ದೇಶ ಮೊದಲು ಎನ್ನುವ ನಂಬಿಕೆ ಕಾಂಗ್ರೆಸ್‌ಗೆ (Congress) ಇಲ್ಲ. ಜಾತಿ ಮೊದಲು, ಕುಟುಂಬ ಮೊದಲು, ಮತ ಮೊದಲು ಎನ್ನುವ ತತ್ವ ಕಾಂಗ್ರೆಸ್‌ನದ್ದು. ವಿಭಜಿಸಿ ಆಳುವುದು ಕಾಂಗ್ರೆಸ್ ಪಕ್ಷದ ನೀತಿ. ಬಿಜೆಪಿ (BJP) ಯಾವುದೇ ಯೋಜನೆಗಳಲ್ಲಿ ಜಾತಿ ತಾರತಮ್ಯ ಮಾಡಲಿಲ್ಲ. ಎಲ್ಲಾ ಅರ್ಹರಿಗೆ ಯೋಜನೆ ಲಾಭವಾಗುವಂತೆ ಮಾಡಿದ್ದೇವೆ ಎಂದರು. ಇದನ್ನೂ ಓದಿ: ಚಾಲಕರ ಮುಷ್ಕರ – ರಾತ್ರಿಯಿಡೀ ನಡೆದುಕೊಂಡೇ ಹೋಗಿ ವಧು ಮನೆ ಸೇರಿದ ವರನ ಕುಟುಂಬ
ಅಂದಿನ ಕಾಂಗ್ರೆಸ್ ಸರ್ಕಾರಕ್ಕೆ ಜಿಲೇಬಿ ಕಂಡರೆ ಆಗುವುದಿಲ್ಲ ಎನ್ನುವ ಮಾತಿತ್ತು. ಜಿಲೇಬಿ ಕಂಡರೆ ಅವರಿಗೆ ಅಲರ್ಜಿ. ಜನಮನ್ನಣೆ ಪಡೆದ ನೇತೃತ್ವ ನಮ್ಮದು. ಬಡವರಿಗೆ ನಿಯತ್ತಿರುವ ಕಾರಣಕ್ಕೆ ಬಡವರಿಗೆ ಆದ್ಯತೆ ನೀಡಿದೆವು. ಹೀಗಾಗಿ ಕಿಸಾನ್ ಸಮ್ಮಾನ್ (Kisan Samman) ತಂದಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: `ಕೈ’ ಟಿಕೆಟ್ ಆಕಾಂಕ್ಷಿಯಿಂದ ಸೀರೆ, ತವಾ ವಿತರಣೆ- ಉಡುಗೊರೆ ಸಿಗದ ಮಹಿಳೆಯರು ಗರಂ