– ಅತ್ತ ಚಿಕ್ಕಬಳ್ಳಾಪುರದಲ್ಲೂ ಗಿಫ್ಟ್ ಗಿಫ್ಟ್
ಯಾದಗಿರಿ/ಚಿಕ್ಕಬಳ್ಳಾಪುರ: ರಾಜ್ಯ ವಿಧಾನಸಭಾ ಚುನಾವಣೆ (Vidhanasabha Election 2023) ಘೋಷಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಗಿಫ್ಟ್ ಪಾಲಿಟಿಕ್ಸ್ (Gift Politics) ಆರಂಭವಾಗಿದೆ. ಟಿಕೆಟ್ ಆಕಾಂಕ್ಷಿಗಳಿಂದ ಮತದಾರರ ಓಲೈಕೆ ಮುಂದುವರಿದಿದೆ. ಅದರಲ್ಲೂ ಮಹಿಳಾ ಮತದಾರರ ಸೆಳೆಯಲು ನಾನಾ ಕಸರತ್ತು ನಡೆದಿವೆ.
Advertisement
ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ದಿನಾಂಕ ಘೋಷಣೆಯಾಗಲಿದೆ. ಈಗಿನಿಂದಲೇ ಮತದಾರರ ಓಲೈಕೆ ಮಾಡ್ತಿರೋ ಟಿಕೆಟ್ ಆಕಾಂಕ್ಷಿಗಳು ನಾನಾ ಕಸರತ್ತು ಮಾಡ್ತಿದ್ದಾರೆ. ಮಹಿಳಾ ಮತದಾರರಿಗೆ ಆಮಿಷ ತೋರಿಸಿ, ಭರ್ಜರಿ ಗಿಫ್ಟ್ ಕೊಡೋದಕ್ಕೆ ಮುಂದಾಗಿದ್ದಾರೆ.
Advertisement
Advertisement
ಹೌದು, ಯಾದಗಿರಿಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಡಾ ಎಸ್.ಬಿ ಕಾಮರೆಡ್ಡಿ (Dr. S B Kamareddy) ಮಹಿಳಾ ದಿನಾಚರಣೆ ಹೆಸರಿನಲ್ಲಿ ಸಾವಿರಾರು ಮಹಿಳೆಯರನ್ನು ಸೇರಿಸಿ ಕಾರ್ಯಕ್ರಮ ಆಯೋಜನೆ ಮಾಡಿದ್ರು. ಕಾರ್ಯಕ್ರಮಕ್ಕೆ ಬಂದ ಪ್ರತೀ ಮಹಿಳೆಗೂ ಸೀರೆ, ತವ ನೀಡಿ ಸತ್ಕರಿಸಿದ್ರು. ಇನ್ನೂ ಕಾರ್ಯಕ್ರಮಕ್ಕೆ ಬಂದ ಮಹಿಳೆಯರು ಸೀರೆ, ತವ ಪಡೆಯಲು ನೂಕು ನುಗ್ಗಲು ಉಂಟಾಯ್ತು. ಇದನ್ನೂ ಓದಿ: ಬೆಳಗಾವಿಯಲ್ಲಿ ಬಾಡೂಟ ರಾಜಕೀಯಕ್ಕೆ ಬಿಸಿ- ನೀತಿ ಸಂಹಿತೆ ಉಲ್ಲಂಘನೆ ಅಡಿ ಕೇಸ್
Advertisement
ಯಾದಗಿರಿಯ ಕಾಂಗ್ರೆಸ್‍ನ ಪ್ರಭಲ ಟಿಕೆಟ್ ಆಕಾಂಕ್ಷಿ ಕಾಮರೆಡ್ಡಿ ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದಾರೆ. ಯಾದಗಿರಿ ವಿಧಾನಸಭಾ ಕ್ಷೇತ್ರ (Yadagiri Vidhanasabha Constituency) ವ್ಯಾಪ್ತಿಯ ಸಾವಿರಾರು ಮಹಿಳೆಯರಿಗೆ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. ಕೆಲವರಿಗೆ ಸೀರೆ, ತವ ಸಿಗದೇ ನಿರಾಸೆ ಅನುಭವಿಸಬೇಕಾಯ್ತು. ನಮ್ಮನ್ನ ಅಲ್ಲಿಂದ ಇಲ್ಲಿಗೆ ಕರೆಸಿದ್ರೂ ನಮಗೇನೂ ಕೊಡ್ಲಿಲ್ಲ ಅಂತಾ ಮಹಿಳೆಯರು ಸಪ್ಪೆ ಮೋರೆ ಹಾಕಿ ಮನೆ ಕಡೆ ಹೋಗೋದು ಕಂಡುಬಂತು.
ಇತ್ತ ಚಿಕ್ಕಬಳ್ಳಾಪುದಲ್ಲೂ ಮತದಾರರಿಗೆ ಆಮಿಷ ನೀಡಲಾಗ್ತಿದೆ. ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ರಾಮಲಿಂಗಪ್ಪ ಯುಗಾದಿ ಹಬ್ಬದ ಹೆಸರಲ್ಲಿ ಮನೆ ಮನೆಗೆ ತೆರಳಿ ಮತದಾರರಿಗೆ ಉಡುಗೊರೆಗಳನ್ನು ನೀಡಿದ್ದಾರೆ. ಸೀರೆ, ಪಂಚೆ, ಬೆಳ್ಳಿ ದೀಪಗಳು ಕಿಟ್ ವಿತರಸಿದ್ದಾರೆ. ಗಿಫ್ಟ್ ಪಾಲಿಟಿಕ್ಸ್ ಜೊತೆ ಜೊತೆಯಲ್ಲೇ ಟೂರ್ ಪಾಲಿಟಿಕ್ಸ್ ಸಹ ಬಲು ಜೋರಾಗಿದೆ. ಬಾಗೇಪಲ್ಲಿ ಮತದಾರರಿಗೆ ಧರ್ಮಸ್ಥಳ, ಕುಕ್ಕೆ, ಯಡಿಯೂರು ದೇವರ ದರ್ಶನಕ್ಕೂ ಬಸ್ ವ್ಯವಸ್ಥೆ ಮಾಡಿದ್ದಾರೆ. 15 ಕ್ಕೂ ಹೆಚ್ಚು ಬಸ್‍ಗಳಲ್ಲಿ ದೇವರ ದರ್ಶನಕ್ಕೆ ಕಳಿಸಲಾಗಿದೆ. ಈ ಮೂಲಕ ಮತದಾರರ ಓಲೈಕೆಗೆ ಕಸರತ್ತು ನಡೆಸಿದ್ದಾರೆ.
ಈ ಮಧ್ಯೆ ರಾಮನಗರದಲ್ಲಿ ಮತದಾರಿಗೆ ಹಂಚಲು ಸಂಗ್ರಹಿಸಿ ಇಟ್ಟಿದ್ದ 2,900 ಕುಕ್ಕರ್‍ಗಳನ್ನ ತಹಶೀಲ್ದಾರ್ ವಶಕ್ಕೆ ಪಡೆದಿದ್ದಾರೆ. ಸವದತ್ತಿ-ಯಲ್ಲಮ್ಮ ಮತಕ್ಷೇತ್ರದ ಮತದಾರಿಗೆ ಹಂಚಲು ತಯಾರಿಸಿದ ಕುಕ್ಕರ್ ಗಳು ಎಂದು ಹೇಳಲಾಗ್ತಿದ್ದು, ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.