ನವದೆಹಲಿ: ಕಾಂಗ್ರೆಸ್ ಹೈಕಮಾಂಡ್‍ನಿಂದ ಮಾಜಿ ಸಿಎಂ ಸಿದ್ದರಾಮಯ್ಯಗೆ ಉನ್ನತ ಸ್ಥಾನಗಳ ‘ಭಾಗ್ಯ’ ಸಿಗುತ್ತಿವೆ. ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಯ ಹೊಣೆಯ ಬೆನ್ನಲ್ಲೇ ಈಗ ಎಐಸಿಸಿ ಕಾರ್ಯಕಾರಿ ಸಮಿತಿಯಲ್ಲಿ ಅವರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದ 23 ಜನರ ಕಾರ್ಯಕಾರಿ ಸಮಿತಿ ರಚನೆಯಾಗಿದ್ದು, ಇದರಲ್ಲಿ ಕರ್ನಾಟಕದ ಸಿದ್ದರಾಮಯ್ಯ ಹಾಗೂ ಲೋಕಸಭೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಇದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫರ್ನಾಂಡಿಸ್ ಬದಲಿಗೆ ಸಿದ್ದರಾಮಯ್ಯ ಅವರಿಗೆ ಸ್ಥಾನ ನೀಡಲಾಗಿದ್ದು, ವಿಶೇಷ ಆಹ್ವಾನಿತರ ಪಟ್ಟಿಯಲ್ಲಿ ಸಂಸದ ಕೆ.ಎಚ್.ಮುನಿಯಪ್ಪಗೆ ಸ್ಥಾನ ಸಿಕ್ಕಿದೆ.
Advertisement
ಸಮಿತಿಯಲ್ಲಿ ಯಾರಿದ್ದಾರೆ?: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮೋತಿಲಾಲ್ ವೋರಾ, ಗುಲಾಬ್ ನಬಿ ಅಜಾದ್, ಎ.ಕೆ.ಆಂಟನಿ, ಅಹಮ್ಮದ್ ಪಟೇಲ್, ಅಂಬಿಕಾ ಸೋನಿ, ಉಮ್ಮನ್ ಚಾಂಡಿ, ತರುಣ್ ಗೋಗಾಯ್, ಆನಂದ್ ಶರ್ಮಾ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಹರೀಶ್ ರಾವತ್, ಕುಮಾರಿ ಸೆಲ್ಜಾ, ಮುಕುಲ್ ವಾಸ್ನಿಕ್, ಅರವಿಂದ್ ಪಾಂಡೆ, ಕೆ.ಸಿ.ವೇಣುಗೋಪಾಲ್, ದೀಪಕ್ ಬಾಬರಿಯಾ, ತರ್ಮದ್ವಾಜ್ ಸಾಹು, ರಘುವೀರ್ ಮೀನಾ, ಗೈಖಾಂಗಮ್, ಅಶೋಕ್ ಗೆಹ್ಲೋಟ್ ಇದ್ದಾರೆ.
Advertisement
INC COMMUNIQUE
Announcement of the constitution of the Congress Working Committee and the Permanent and Special invitees to the CWC. pic.twitter.com/x9uBsEOZa7
— Congress (@INCIndia) July 17, 2018
Advertisement
Thank you @RahulGandhi Ji for the opportunity to work with you in CWC and faith in me.@INCIndia @INCKarnataka pic.twitter.com/OVzYHU5GaR
— Siddaramaiah (@siddaramaiah) July 17, 2018