ರಾಯಚೂರು: ಸಿದ್ದರಾಮಯ್ಯ ಅವರ ಕಾರಿನ ಮೇಲಿನ ಮೊಟ್ಟೆ ಎಸೆದಿರುವುದು ಗೌರವ ತರುವಂತಹದ್ದಲ್ಲ, ಇದರಿಂದ ಯಾವುದೇ ಸಾಧನೆ ಮಾಡೋಕಾಗಲ್ಲ. ಶ್ರೀಕೃಷ್ಣ ಪರಮಾತ್ಮನ ಸಂದೇಶದ ಪ್ರಕಾರ ಧರ್ಮದ ಹಾದಿಯಲ್ಲಿ ನಾಡನ್ನು ಕಟ್ಟುವ ಕೆಲಸ ಆಗಬೇಕು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
Advertisement
ರಾಯಚೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ಘಟನೆ ಯಾರಿಗೂ ಗೌರವ ತರುವಂತಹದ್ದಲ್ಲ, ಇದರಿಂದ ಯಾವುದೇ ಸಾಧನೆ ಮಾಡೋಕಾಗಲ್ಲ. ಶ್ರೀಕೃಷ್ಣ ಪರಮಾತ್ಮನ ಸಂದೇಶದ ಪ್ರಕಾರ ಧರ್ಮ ಹಾದಿಯಲ್ಲಿ ನಾಡನ್ನು ಕಟ್ಟುವ ಕೆಲಸ ಆಗಬೇಕು. ಅಲ್ಲದೇ ಈ ಪ್ರಕರಣಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ `ಇಡೀ ನಾಡಿಗೆ ಬೆಂಕಿ ಹಚ್ಚುತ್ತೇನೆ’ ಅಂತಾರೆ ಇದೂ ಸರಿಯಲ್ಲ. ನಾಡಿನ ಸಮಸ್ಯೆಗಳ ಬಗ್ಗೆ ಸರ್ಕಾರ ಕೆಲಸ ಮಾಡುತ್ತಿಲ್ಲ. ಈ ರೀತಿ ವಿಷಯಗಳನ್ನು ಇಟ್ಟುಕೊಟ್ಟು ಜನರನ್ನ ಡೈವರ್ಟ್ ಮಾಡುತ್ತಿದ್ದಾರೆ, ಜನರೇ ಇದರಿಂದ ಎಚ್ಚೆತ್ತುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
Advertisement
Advertisement
ಸಾವರ್ಕರ್ ಫೋಟೋ ಬಳಕೆ ವಿವಾದ ಕುರಿತು ಮಾತನಾಡಿ, ನಮ್ಮ ಮುಂದೆ ಇಲ್ಲದವರ ಬಗ್ಗೆ, ನಾವು ಹುಟ್ಟದೇ ಇದ್ದ ಸಂದರ್ಭದಲ್ಲಿ ನಡೆದಿರುವ ಘಟನೆಯ ಬಗ್ಗೆ ಅವರವರ ದೃಷ್ಟಿಕೋನದಲ್ಲಿ ಇತಿಹಾಸ ಬರೆದಿರುತ್ತಾರೆ. ಆ ವಿಷಯಗಳನ್ನ ಕೆದಕಿ ಕೆದಕಿ ಅಶಾಂತಿ ವಾತಾವರಣ ತರಲಾಗಿದೆ. ಗಾಂಧಿ ಕೊಂದವರ ಫೋಟೋ ಹಾಕಿಕೊಂಡು ಓಡಾಡ್ತಾರೆ. ಆದ್ರೆ ದೇಶಕ್ಕಾಗಿ ಕೊಡುಗೆ ಕೊಟ್ಟ ವ್ಯಕ್ತಿಯ ಬಗ್ಗೆ ಮಾತನಾಡುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮೊಮ್ಮಗನಿಗೆ ಶ್ರೀಕೃಷ್ಣನ ವೇಷ ಹಾಕಿ ಮುಸ್ಲಿಂ ಕುಟುಂಬದಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ
Advertisement
ಹುದ್ದೆ ದೊಡ್ಡದಲ್ಲ: ಬಿಎಸ್‌ವೈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪಗೆ ಬಿಜೆಪಿ ಅದ್ಯಾವ ಮಹಾ ಹುದ್ದೆ ಕೊಟ್ಟಿದೆ. ದಕ್ಷಿಣ ಭಾರತದಲ್ಲಿ ಪಕ್ಷಕಟ್ಟುವುದಾಗಿ ಹೇಳುತ್ತಾರೆ. ಇಲ್ಲಿ ಮೊದಲು ಪಕ್ಷ ಉಳಿಸಿಕೊಳ್ಳಲಿ. ರಾಜ್ಯದಲ್ಲಿ ಬಿಜೆಪಿ ಪಕ್ಷ ನಾವು ಕೊಟ್ಟ ಜೀವ ಅದು. ರಾಜ್ಯದಲ್ಲಿ ಚುನಾವಣೆ ಸಂದರ್ಭವಿದೆ ಬಿಎಸ್‌ವೈ ರನ್ನ ಮಂಡಳಿಯಲ್ಲಿ ಹಾಕಿಕೊಂಡಿದ್ದಾರೆ. ಮುಂದೆ ಬೇರೆಡೆ ಚುನಾವಣೆ ಇದ್ದಾಗ ಅಲ್ಲಿಯವರನ್ನ ಹಾಕಿಕೊಂಡು ಇವರನ್ನ ಕೈ ಬಿಡುತ್ತಾರೆ, ಹಾಗಾಗಿ ಈ ಹುದ್ದೆಗೆ ಮಹತ್ವ ಕೊಡುವಂತದ್ದೇನಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪ್ರಿಯತಮೆಯ ಮುತ್ತು ತಂದ ಆಪತ್ತು – ಜೈಲಿನಲ್ಲೇ ಪ್ರಿಯಕರ ಸಾವು
ಕೆಸಿಆರ್ ಹೇಳಿಕೆಗೆ ಅಸಮಾಧಾನ: `ರಾಯಚೂರನ್ನ ತೆಲಂಗಾಣಕ್ಕೆ ಸೇರಿಸಿ’ ಎನ್ನುವ ತೆಲಂಗಾಣ ಸಿಎಂ ಕೆ.ಸಿ.ಚಂದ್ರಶೇಖರ ರಾವ್ ಹೇಳಿಕೆಗೆ ಹೆಚ್.ಡಿ.ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೆಸಿಆರ್ ನಮ್ಮ ಆತ್ಮೀಯರು ಹಾಗೆಂದ ಮಾತ್ರಕ್ಕೆ ರಾಯಚೂರಲ್ಲ ರಾಜ್ಯದ ಯಾವುದೇ ಭಾಗವನ್ನೂ ಬಿಟ್ಟು ಕೊಡುವ ಮಾತಿಲ್ಲ. ಆಂಧ್ರದ ವಲಸಿಗರನ್ನು ನಮ್ಮವರಂತೆಯೇ ಕಂಡು ಕೃಷಿ ಕ್ಷೇತ್ರದಲ್ಲಿ ಅವಕಾಶ ಮಾಡಿ ಕೊಟ್ಟಿದ್ದೇವೆ. ಸೌಹಾರ್ದತೆಗೆ ನೆರೆ ರಾಜ್ಯದ ಸಿಎಂ ಧಕ್ಕೆ ತರುವ ಕಾರ್ಯ ಮಾಡಬಾರದು. ಶಾಸಕ ಶಿವರಾಜ್ ಪಾಟೀಲ್ ಬಂದ ಅನುದಾನದಲ್ಲಿ ಭ್ರಷ್ಟಾಚಾರ ಮಾಡಿ ಅಭಿವೃದ್ಧಿಯಾಗಿಲ್ಲ ಅಂತಾರೆ. ಎರಡು ಬಾರಿ ಶಾಸಕರಾಗಿ ಯಡವಟ್ಟು ಹೇಳಿಕೆಯನ್ನ ನೀಡಿದ್ದಾರೆ ಅಂತ ಅಸಮಧಾನ ಹೊರಹಾಕಿದ್ದಾರೆ.