ಬೆಂಗಳೂರು: ಇಂದಿನಿಂದ ಹತ್ತು ದಿನಗಳ ಕಾಲ ವಿಧಾನ ಸಭೆ ಅಧಿವೇಶನ ನಡೆಯಲಿದ್ದು, ಬೆಲೆ ಏರಿಕೆ ಖಂಡಿಸಿ ಸಿದ್ದರಾಮಯ್ಯ, ಡಿಕೆಶಿ ವಿಧಾನಸೌಧಕ್ಕೆ ಎತ್ತಿನ ಗಾಡಿಯಲ್ಲಿ ತೆರಳುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ.
Advertisement
ಪ್ರತಿಭಟನೆಗೆ ನಾಲ್ಕುವರೆ ಲಕ್ಷ ರೂಪಾಯಿಯ ಹಳ್ಳಿಕಾರ್ ತಳಿಯ ಜೋಡಿ ರೇಸಿಂಗ್ ಎತ್ತುಗಳು ಬಂದಿದ್ದು, ಇನ್ನುಳಿದ ಎತ್ತುಗಳು ಒಂದೂವರೆ ಲಕ್ಷ ರೂಪಾಯಿ ಬೆಲೆಯುಳ್ಳದಾಗಿದೆ. ಒಟ್ಟು ಸುಮಾರು 8 ಎತ್ತುಗಳನ್ನು ಕಾಂಗ್ರೆಸ್ ಪ್ರತಿಭಟನೆಗೆಂದು ತರಲಾಗಿದೆ. ಸುಮಾರು ಮುನ್ನೂರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಇದನ್ನೂ ಓದಿ: ಇಂದಿನಿಂದ ಮಳೆಗಾಲದ ಅಧಿವೇಶನ ಆರಂಭ- ಕಾಂಗ್ರೆಸ್, ಬಿಜೆಪಿ ಮಧ್ಯೆ ಗದ್ದುಗೆ ಗುದ್ದಾಟ
Advertisement
ಕೇಂದ್ರದ ಬಿಜೆಪಿ ಸರ್ಕಾರದ ಬೆಲೆಯೇರಿಕೆ ನೀತಿಯನ್ನು ಖಂಡಿಸಿ ಇಂದು ನನ್ನ ನಿವಾಸದಿಂದ ವಿಧಾನಸೌಧದ ವರೆಗೆ ಎತ್ತಿನಗಾಡಿ ಮೂಲಕ ತೆರಳಿದೆ.
ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್ ಪಾಟೀಲ್ ಸೇರಿದಂತೆ ಹಲವು ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. pic.twitter.com/x5D4oTKV6Y
— Siddaramaiah (@siddaramaiah) September 13, 2021
Advertisement
ಪ್ರತಿಭಟನೆಯಲ್ಲಿ ಮುಂದೆ ಹೋಗುತ್ತಿದ್ದ ಸಿದ್ದರಾಮಯ್ಯನವರ ಎತ್ತಿನ ಗಾಡಿಯನ್ನು ನಿಲ್ಲಿಸಿ, ಹಿಂದಿನ ಎತ್ತಿನ ಗಾಡಿಯಲ್ಲಿ ಬಂದ ಡಿಕೆಶಿವಕುಮಾರ್, ಒಟ್ಟಿಗೆ ಒಂದೇ ಎತ್ತಿನ ಗಾಡಿಯಲ್ಲಿ ಸಾಗಿದರು. ಈ ವೇಳೆ ಪ್ರೆಸ್ಟಿಜ್ ಅಪಾರ್ಟ್‍ಮೆಂಟ್ ಬಳಿ ರ್ಯಾಲಿಯನ್ನು ಪೊಲೀಸರು ತಡೆದರು. ನಂತರ ನಾಯಕರು ಡಿಸಿಪಿ ಅನುಚೇತ್ ಜೊತೆ ಮಾತನಾಡಿ ಪ್ರತಿಭಟನೆ ಮುಂದುವರೆಸಿದ್ದಾರೆ. ಇದನ್ನೂ ಓದಿ: ಪೆಟ್ರೋಲ್ ಸುರಿದು ಪತಿಯನ್ನು ಹತ್ಯೆಗೈದು ಚರಂಡಿಗೆ ಶವ ಎಸೆದ್ಳು
Advertisement
Marched towards the Vidhana Soudha alongside CLP leader Sri @Siddaramaiah and LoP- Legislative Council Sri @SRPatilBagalkot and other Congress leaders, on a bullock cart to protest against the govt’s consistent price hikes and failing standards of law and order in the state. pic.twitter.com/u33JbBscQ2
— DK Shivakumar (@DKShivakumar) September 13, 2021
ಪ್ರತಿಭಟನೆ ತಡೆಯಲು ಪೊಲೀಸರು ಮುಂದಾದಾಗ ಕಾಂಗ್ರೆಸ್ ನಾಯಕರು ಬ್ಯಾರಿಕೇಡ್ ನುಗ್ಗಿ ಮುಂದೆ ನಡೆದರೆ, ಕಾಂಗ್ರೆಸ್ ಮಹಿಳಾ ಘಟಕದವರು ಸ್ಥಳದಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಕೊನೆಗೆ ತಳ್ಳಾಟ ನೂಕಾಟದಿಂದ ಪೊಲೀಸರು ಶಾಸಕರ ಗಾಡಿ ಬಿಟ್ಟು ಕಳಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ರವರು, ನಾನು ದೇಶದ ಧ್ವನಿಯಾಗಿ ಕೆಲಸ ಮಾಡುತ್ತಿದ್ದೇನೆ. ಪಿಕ್ ಪಾಕೆಟ್ ನಡೀತಾ ಇದೆ. ಸರ್ಕಾರ ಪಿಕ್ ಪಾಕೆಟ್ ಮಾಡುತ್ತಿದೆ. ಅಟಲ್ ಬಿಹಾರಿ ವಾಜಪೇಯಿ ಇದನ್ನು ಕ್ರಿಮಿನಲ್ ಆಕ್ಟ್ ಎಂದಿದ್ದರು ಎಂದು ವಾಗ್ದಾಳಿ ನಡೆಸಿದರು.