ತಾಲಿಬಾನ್‍ಗೂ, RSSಗೂ ವ್ಯತ್ಯಾಸ ಇದೆ: ಸಿದ್ದರಾಮಯ್ಯಗೆ ಆರಗ ಜ್ಞಾನೇಂದ್ರ ತಿರುಗೇಟು

Public TV
1 Min Read
araga jnanendra

ಮೈಸೂರು: ಆರ್‌ಎಸ್‌ಎಸ್‌ ನವರದ್ದು ತಾಲಿಬಾನ್ ಸಂಸ್ಕೃತಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಮೈಸೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಮಹಿಳಾ ಪೊಲೀಸ್ ಅಧಿಕಾರಿ ಸ್ನಾನದ ವೀಡಿಯೋ ರೆಕಾರ್ಡ್ – ಚಾಲಕನಿಂದಲೇ ಬ್ಲಾಕ್‍ಮೇಲ್

ಇಂದು ಮೈಸೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯರಂತ ಹಿರಿಯರು ಆಡಿದ ಮಾತಿಗೆ ನಾನು ಏನು ಹೇಳುವುದಿಲ್ಲ. ಸಿದ್ದರಾಮಯ್ಯ ಹೊಟ್ಟೆ ಕಿಚ್ಚು ಪಡಿಸುವಷ್ಟು ನಾವು ಕೆಲಸ ಮಾಡುತ್ತಿದ್ದೇವೆ. ತಾಲಿಬಾನ್‍ಗೂ ಆರ್‌ಎಸ್ಎಸ್‍ಗೆ ವ್ಯತ್ಯಾಸ ಏನು ಎಲ್ಲರಿಗೂ ಗೊತ್ತಿದೆ. ಹಿರಿಯರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಇದು ಸಿದ್ದರಾಮಯ್ಯ ಅವರಿಗೂ ಗೊತ್ತಿದೆ. ಆದರೆ, ಕೆಣಕಬೇಕು ಚುಚ್ಚಬೇಕು, ಅಪಹಾಸ್ಯ ಮಾಡಬೇಕು ಅದಕ್ಕಾಗಿ ಹೀಗೆ ಹೇಳುತ್ತಿದ್ದಾರೆ. ಆದರೆ ಜನರು ದಡ್ಡರಲ್ಲ ಇದನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದಿದ್ದಾರೆ.

siddaramaiah

ಆರ್‌ಎಸ್‌ಎಸ್‌ ದೇಶಕ್ಕಾಗಿ ಏನು ಕೆಲಸ ಮಾಡುತ್ತಿದೆ, ಹೇಗೆ ಕೆಲಸ ಮಾಡುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ರಾಷ್ಟ್ರಪತಿ, ಪ್ರಧಾನಿ, ಉಪ ರಾಷ್ಟ್ರಪತಿ, ರಾಜ್ಯದ ಗೃಹಮಂತ್ರಿ ಎಲ್ಲರೂ ಆರ್‌ಎಸ್‌ಎಸ್‍ನಿಂದ ಬಂದವರು. ಆರ್‌ಎಸ್‌ಎಸ್‌ ಒಳ್ಳೆಯದನ್ನು ಮಾಡು ಅನ್ನುತ್ತದೆ. ದೇಶದ ಹಿತಕ್ಕಾಗಿ ಕೆಲಸ ಮಾಡಲು ಕಲಿಸುತ್ತದೆ. ದೇಶದ ವಿಚಾರ ಬಂದಾಗ ವೈಯಕ್ತಿಕ ವಿಚಾರ ಬಲಿ ಕೊಟ್ಟು ರಾಷ್ಟ್ರದ ಸಂರಕ್ಷಣೆ ಮಾಡು ಅಂತ ಹೇಳುತ್ತದೆ. ಈ ರೀತಿ ಹೇಳುವುದು ಆರ್‌ಎಸ್‌ಎಸ್‌ ಮಾತ್ರ. ಹೀಗಾಗಿ ನಾವು ಅದನ್ನು ಪ್ರೀತಿಸುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕುರ್ಚಿಗಾಗಿ ಹಗಲುಗನಸು ಕಾಣ್ತಿದ್ದಾರೆ ಹೀಗಾಗಿ ಏನೇನೋ ಮಾತನಾಡುತ್ತಿದ್ದಾರೆ: ಶ್ರೀರಾಮುಲು

RSS medium

ಬಿಜೆಪಿಯವರಿಗೆ ಮನುಷ್ಯತ್ವ ಇಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೂ ಪ್ರತಿಕ್ರಿಯಿಸಿ, ಯಾರಿಗೆ ಮನುಷ್ಯತ್ವ ಇಲ್ಲ ಯಾರಿಗೆ ಮನುಷ್ಯತ್ವ ಇದೆ ಎಂಬುದು ಎಲ್ಲರಿಗೂ ಗೊತ್ತಿದೆ. ಸಿದ್ದರಾಮಯ್ಯ ಸಂಘಟನೆ ಎಲ್ಲಿದೆ ಅಂತಾ ಬ್ಯಾಟರಿ ಹಾಕಿ ಹುಡುಕಬೇಕಿದೆ ಎಂದು ವ್ಯಂಗ್ಯವಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *