ಬೆಂಗಳೂರು: ಗುಜರಾತ್ ಚುನಾವಣೆಯ(Gujarat Election) ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ. ಸೋಮವಾರ 2ನೇ ಹಂತದಲ್ಲಿ ಮತದಾನ ನಡೆಯಲಿದ್ದು, ಡಿಸೆಂಬರ್ 8ಕ್ಕೆ ಫಲಿತಾಂಶ ಹೊರಬರಲಿದೆ. ಬಳಿಕ ಕರ್ನಾಟಕದ ಎಲೆಕ್ಷನ್(Karnataka Election) ಆಟ ರಂಗೇರಲಿದೆ. ಈ ಬೆನ್ನಲ್ಲೇ ಹಳೇ ಆಟ ಹೊಸ ಖೆಡ್ಡಾ ರಾಜಕೀಯ ಶುರುವಾಗಿದೆ.
ಈ ಸಲದ ಎಲೆಕ್ಷನ್‍ನಲ್ಲೂ ಹಿಂದುತ್ವದ(Hindutva) ಅಜೆಂಡಾ ಜೋರಾಗಿ ಸದ್ದು ಮಾಡುವ ಸಾಧ್ಯತೆ ಇದೆ. ಬಿಜೆಪಿಯಿಂದ ಹಿಂದೂವಾದಿ ಅಸ್ತ್ರ ಆರಂಭವಾಗಿದ್ದು, ಮಾಜಿ ಸಿಎಂ ಸಿದ್ದರಾಮಯ್ಯರನ್ನು ಖೆಡ್ಡಾಕ್ಕೆ ಬೀಳಿಸುವ ತಂತ್ರ ಶುರುವಾಗಿದೆ ಎಂಬ ಚರ್ಚೆಗಳು ನಡೆದಿವೆ.
Advertisement
Advertisement
ಮೈಸೂರಿನಲ್ಲಿ ಸಿದ್ದರಾಮಯ್ಯ(Siddaramaiah) ಮಾತನಾಡಿ ಆರ್‍ಎಸ್‍ಎಸ್(RSS) ಕಮ್ಯುನಲ್ ಅಂದಿದ್ದರು. ಈ ಹೇಳಿಕೆಗೆ ಸಿ.ಟಿ.ರವಿ, ಕಮ್ಯೂನಲ್ ಯಾರು, ಸೆಕ್ಯುಲರ್ ಯಾರು? ಸಿದ್ದರಾಮಯ್ಯ ದೃಷ್ಟಿಯಲ್ಲಿ ಆರ್‍ಎಸ್‍ಎಸ್ ಕಮ್ಯೂನಲ್. ಬಾಂಬ್ ಹಾಕುವವರು ಸೆಕ್ಯುಲರ್. ಹಿಂದೂವಾದವೇ ಕಮ್ಯೂನಲ್ ಅಂದರೆ ನಾನೊಬ್ಬ ಹಿಂದೂವಾದಿ. ಆ ವಿಚಾರದ ಪ್ರತಿಪಾದಕ ನಾನು ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಮೈಸೂರು ರಿಂಗ್ ರಸ್ತೆ – ಬೀದಿ ದೀಪಗಳ MCBಯನ್ನೇ ಕದ್ದ ಕಳ್ಳರು
Advertisement
ಸಿದ್ದರಾಮಯ್ಯ ಜಾತ್ಯಾತೀತತೆ ಹಣೆಬರಹ ಎಲ್ಲರಿಗೂ ಗೊತ್ತಾಗಿದೆ. ತಾವು ಸಮಾಜವಾದಿ, ಜಾತ್ಯಾತೀತವಾದಿ ಅಂತಾರೆ. ಆದರೆ ಸಿದ್ದರಾಮಯ್ಯ ವಾಸ್ತವವಾಗಿ ಮಜಾವಾದಿ. ಬೇರೆಯವರನ್ನು ಮುಗಿಸಲು ಸಿದ್ದರಾಮಯ್ಯ ಜಾತಿ ಗುರಾಣಿ ಬಳಸಿಕೊಳ್ಳುತ್ತಾರೆ ಎಂದು ಸಿಟಿ ರವಿ(CT Ravi) ಆರೋಪಿಸಿದ್ದಾರೆ.
Advertisement
ಬಿಜೆಪಿ `ಹಿಂದೂವಾದಿ’ ಖೆಡ್ಡಾ?
2018ರ ಎಲೆಕ್ಷನ್‍ನಲ್ಲಿ ಸಿದ್ದರಾಮಯ್ಯ ಹಿಂದೂ ವಿರೋಧಿ ಎಂದು ಬಿಜೆಪಿ ಬಿಂಬಿಸಿತ್ತು. ಸಿದ್ದರಾಮಯ್ಯ ಕೆಂಪು, ಕೇಸರಿ, ನಾಮದ ವಿಚಾರವಾಗಿ ಮಾತನಾಡಿದ್ದನ್ನೇ ಟಾರ್ಗೆಟ್ ಮಾಡಿತ್ತು.
ಸಿದ್ದರಾಮಯ್ಯ ಹೇಳಿಕೆಯನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ಬಿಜೆಪಿ ಪ್ರಚಾರ ಮಾಡಿತ್ತು. ಈಗಲೂ ಸಿದ್ದರಾಮಯ್ಯರನ್ನು ಖೆಡ್ಡಾಕ್ಕೆ ಕೆಡವಲು ಬಿಜೆಪಿ ಕಾದು ಕುಳಿತಿದ್ಯಾ ಎಂಬ ಚರ್ಚೆ ಆರಂಭವಾಗಿದೆ. ಸಿ.ಟಿ.ರವಿಯಿಂದ ಈಗ ಕಮ್ಯುನಲ್ ವರ್ಸಸ್ ಸೆಕ್ಯುಲರ್ ಅಸ್ತ್ರಕ್ಕೆ ಸಿದ್ದರಾಮಯ್ಯ ಹೆಜ್ಜೆ ಏನು ಎಂಬ ಪ್ರಶ್ನೆ ಎದ್ದಿದೆ.