ಬೆಂಗಳೂರು: ವಿಧಾನಸಭೆಯಲ್ಲಿ ಬುಧವಾರ ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ನಡುವೆ ಕುಚುಕು ಕುಚುಕು ಎನ್ನುವಂತಹ ವಾತಾವರಣ ನಿರ್ಮಾಣವಾಗಿತ್ತು. ವಿಧಾನಸಭೆ ಕಲಾಪ ಆರಂಭವಾಗಿ ಪ್ರಶ್ನೋತ್ತರ ವೇಳೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಳಿ ಮಾಜಿ ಸಿಎಂ ಯಡಿಯೂರಪ್ಪ ಹೋಗಿ ಕುಳಿತಿದ್ದರು.
Advertisement
ಗುರುವಾರ ಮಧ್ಯಾಹ್ನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಶಾಸಕರು ಹಾಗೂ ಮಾಧ್ಯಮದವರಿಗೆ ಮಾಜಿ ಸಿಎಂ ಯಡಿಯೂರಪ್ಪ ಭೋಜನಕೂಟ ಏರ್ಪಡಿಸಿದ್ದಾರೆ. ಈ ಭೋಜನಕೂಟಕ್ಕೆ ಆಹ್ವಾನಿಸಲು ಯಡಿಯೂರಪ್ಪ ಸಿದ್ದರಾಮಯ್ಯ ಬಳಿ ತೆರಳಿದ್ದರು. ಈ ವೇಳೆ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಕೈ-ಕೈ ಹಿಡಿದು ಕೆಲಕಾಲ ಮಾತುಕತೆ ನಡೆಸಿದ್ದರು. ಇದನ್ನೂ ಓದಿ: ಹಿಂದೂ ಜಾತ್ರೆಗಳಲ್ಲಿ ಮುಸ್ಲಿಮ್ ವರ್ತಕರಿಗೆ ವ್ಯಾಪಾರ ನಿಷೇಧ ವಿಚಾರ: ಸಿಡಿದೆದ್ದ ಕರಾವಳಿ ಶಾಸಕರು
Advertisement
Advertisement
ಇಬ್ಬರ ನಡುವಿನ ಮಾತುಕತೆ ವಿಧಾನಸಭೆಯಲ್ಲಿದ್ದ ಎಲ್ಲರ ಗಮನ ಸೆಳೆಯಿತು. ನಗುನಗುತ್ತಾ ಇಬ್ಬರು ನಾಯಕರು ಉಭಯಕುಶಲೋಪರಿ ವಿಚಾರಿಸಿಕೊಂಡರು. ಸಿದ್ದರಾಮಯ್ಯ ಹೆಡ್‌ಫೋನ್ ಹಾಕಿಕೊಂಡಿದ್ದಾಗ ಹಿಂದಿನಿಂದ ಹೋಗಿ ಯಡಿಯೂರಪ್ಪ ಹೆಡ್‌ಫೋನ್ ತೆಗೆದಿದ್ದರು. ಹೆಡ್‌ಫೋನ್ ತೆಗೆದಿದ್ದು ಯಾರು ಎಂದು ಸಿದ್ದರಾಮಯ್ಯ ಗಾಬರಿಯಿಂದ ನೋಡಿದಾಗ ಅದು ಯಡಿಯೂರಪ್ಪ ಎಂಬುದು ತಿಳಿದು ನಕ್ಕಿದ್ದರು. ಇದನ್ನೂ ಓದಿ: ಚರಂಡಿಗಿಳಿದು ಕೊಳಚೆ ಶುಚಿಗೊಳಿಸಿದ ಆಪ್ ಕೌನ್ಸಿಲರ್‌ಗೆ ಹಾಲಿನ ಸ್ನಾನ..!
Advertisement
ಅಂದಹಾಗೆ ಯಡಿಯೂರಪ್ಪ, ಸಿದ್ದರಾಮಯ್ಯ ನಡುವಿನ ವೈಯಕ್ತಿಕ ಸಂಬಂಧ ಚೆನ್ನಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇತ್ತೀಚಿನ ದಿನಗಳಲ್ಲಿ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಒಟ್ಟಾಗಿ ಮಾತನಾಡುವ, ಕೆಲ ಕಡೆ ಒಟ್ಟಾಗಿ ಕಾಣಿಸಿಕೊಂಡಿರುವ ಹಲವು ನಿದರ್ಶನಗಳು ಇವೆ.
ಇದೇ ವೇಳೆ ಇಬ್ಬರು ನಾಯಕರ ಬಳಿ ಮಂಗಳೂರಿನಲ್ಲಿ ಮುಸ್ಲಿಂ ವರ್ತಕರಿಗೆ ಅವಕಾಶ ನೀಡದ ಬಗ್ಗೆ ಯುಟಿ ಖಾದರ್ ಪ್ರಸ್ತಾಪಿಸಿದ ಘಟನೆಯೂ ನಡೆಯಿತು.