ಬೆಂಗಳೂರು: ಕಳೆದ ವರ್ಷ ಬರದಿಂದ ಬೆಂದು ಹೋಗಿದ್ದ ರಾಜ್ಯಕ್ಕೆ ಈ ವರ್ಷ ಮಳೆರಾಯ ಕರುಣೆ ತೋರಿದ್ದಾನೆ. ಮುಂಗಾರು ಮಳೆ ಅಬ್ಬರದಿಂದಾಗಿ ರಾಜ್ಯದ ಜಲಾಶಯಗಳು ತುಂಬಿ ತುಳುಕುತ್ತಿವೆ. ಕಾವೇರಿ ನದಿ ಪಾತ್ರದ ಜಲಾಶಯಗಳು ಮೈದುಂಬಿಕೊಂಡಿದ್ದು, ಕಾವೇರಿ ಮಾತೆಗೆ ಬಾಗಿನ ಸಲ್ಲಿಕೆಗೆ ಸರ್ಕಾರ ತೀರ್ಮಾನಿಸಿದೆ. ಇದೇ ಜುಲೈ 29ರಂದು ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯಗಳಿಗೆ (KRS And Kabini Resorvoir) ಸಿಎಂ ಸಿದ್ದರಾಮಯ್ಯ ಬಾಗಿನ (Bagina) ಅರ್ಪಣೆ ಮಾಡಲಿದ್ದಾರೆ.
Advertisement
ಕಳೆದ ವರ್ಷ ಇಡೀ ರಾಜ್ಯವನ್ನು ಬರಗಾಲ ಕಾಡಿತ್ತು. ಇದರಿಂದ 2023ರಲ್ಲಿ ಕೆಆರ್‌ಎಸ್ ಕಟ್ಟೆ ಭರ್ತಿಯಾಗಿರಲಿಲ್ಲ. ಆದ್ರೆ ಈ ಬಾರಿ ಜತೆಗೆ ನಿರೀಕ್ಷೆಗೂ ಮೀರಿದ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ನಿರಂತರವಾಗಿ ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯಗಳಿಗೆ ನೀರಿನ ಒಳ ಹರಿವು ಹೆಚ್ಚಾಗಿದ್ದು ಜಲಾಶಯಗಳು ಭರ್ತಿಯಾಗಿವೆ. ಕಾವೇರಿ ನೀರಿಗಾಗಿ ಪ್ರತಿವರ್ಷ ತಮಿಳುನಾಡು ಮಾಡ್ತಿದ್ದ ಕಿರಿಕಿರಿ ಸದ್ಯಕ್ಕೆ ದೂರಾಗಿದೆ.
Advertisement
ಅಲ್ಲದೇ ಕರಾವಳಿ, ಮಲೆನಾಡು, ಪಶ್ಚಿಮ ಘಟ್ಟಗಳು ಮತ್ತು ಅವುಗಳಿಗೆ ಹೊಂದಿಕೊಂಡ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಶ್ರೀರಂಗಪಟ್ಟಣದಿಂದ ಹೊಗೇನಕಲ್‌ವರೆಗೆ ಕಾವೇರಿ ತಟದಲ್ಲಿ ಪ್ರವಾಹ ಭೀತಿ ಹೆಚ್ಚಾಗಿದೆ. ಪ್ರವಾಸಿ ತಾಣಗಳಲ್ಲಿ ನಿಷೇಧಾಜ್ಞೆ ಹೇರಲಾಗಿದೆ.
Advertisement
Advertisement
ಮಳೆಯಿಂದ ಹಲವೆಡೆ ಪ್ರವಾಹ ಪರಿಸ್ಥಿತಿ:
* ಕೆಆರ್‌ಎಸ್‌ನಿಂದ ನೀರು ರಿಲೀಸ್
ಕೆಆರ್‌ಎಸ್ ಡ್ಯಾಮ್‌ಗೆ 1.20 ಲಕ್ಷ ಕ್ಯೂಸೆಕ್ ಒಳಹರಿವಿದ್ದು, 1.30 ಲಕ್ಷ ಕ್ಯೂಸೆಕ್ ದಾಖಲೆ ಪ್ರಮಾಣದಲ್ಲಿ ನದಿಗೆ ನೀರು ಹರಿಸಲಾಗಿದೆ.
* ರಾಮಕೃಷ್ಣ ಆಶ್ರಮಕ್ಕೆ ಜಲದಿಗ್ಬಂಧನ
ಕಾವೇರಿ ಆರ್ಭಟಕ್ಕೆ ಶ್ರೀರಂಗಪಟ್ಟಣದ ರಾಮಕೃಷ್ಣ ವಿವೇಕಾನಂದರ ಆಶ್ರಮಕ್ಕೆ ನೀರು ನುಗ್ಗಿದೆ. ಸ್ವಲ್ಪ ಪ್ರಮಾಣದ ನೀರು ನುಗ್ಗುತ್ತಿರೋದನ್ನು ಗಮನಿಸಿ ಎಚ್ಚೆತ್ತ ಅಧಿಕಾರಿಗಳು ಆಶ್ರಮದ ಸ್ವಾಮೀಜಿ, ಸಿಬ್ಬಂದಿಯನ್ನ ಸ್ಥಳಾಂತರಿಸಿದ್ದಾರೆ. ಈದೀಗ ಭಾರೀ ಪ್ರಮಾಣದಲ್ಲಿ ನೀರು ನುಗ್ಗಿದೆ, ಸುತ್ತಮುತ್ತಲಿನ ರಸ್ತೆ, ತೋಟ ಜಲಾವೃತವಾಗಿದೆ.
* ವೆಲ್ಲೆಸ್ಲಿ ಬ್ರಿಡ್ಜ್
220 ವರ್ಷಗಳ ಇತಿಹಾಸವುಳ್ಳ ಶ್ರೀರಂಗಪಟ್ಟಣದ ವೆಲ್ಲೆಸ್ಲೀ ಬ್ರಿಡ್ಜ್ ಮುಳುಗಡೆ ಹಂತಕ್ಕೆ ಬಂದಿದೆ. ಈ ಬ್ರಿಡ್ಜ್ ಅನ್ನು 1804ರಲ್ಲಿ ಮೈಸೂರು-ಬೆಂಗಳೂರು ಸಂಚಾರಕ್ಕೆ ವೆಲ್ಲೆಸ್ಲೀ ಸೇತುವೆ ನಿರ್ಮಾಣ ಮಾಡಲಾಗಿತ್ತು. ಭಾನುವಾರ (ಜು.27) ಮತ್ತಷ್ಟು ಒಳಹರಿವು ಹೆಚ್ಚಿದರೆ ಐತಿಹಾಸಿಕ ವೆಲ್ಲೆಸ್ಲೀ ಬ್ರಿಡ್ಜ್ ಮುಳುಗಡೆಯಾಗುವ ಸಾಧ್ಯತೆ ಇದೆ. 2 ದಿನಗಳಿಂದ ಮಂಡ್ಯ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ವೆಲ್ಲೆಸ್ಲೀ ಸೇತುವೆ ಮೇಲೆ ವಾಹನ ಸಂಚಾರಕ್ಕೆ ನಿಷೇಧ ಏರಿದೆ.
* ಗೋಸಾಯ್ ಘಾಟ್ ಸಂಪೂರ್ಣ ಮುಳುಗಡೆ
ಪಿಂಡಪ್ರಧಾನ, ಹೋಮ ಹವನ ಇತರೆ ಪೂಜಾ ಕೈಂಕರ್ಯಗಳಿಗೆ ಪ್ರಸಿದ್ಧಿಯಾಗಿರುವ ಗೋಸಾಯ್ ಘಾಟ್ ಕಾವೇರಿ ಅಬ್ಬರಕ್ಕೆ ಮುಳುಗಿಹೋಗಿದ್ದು, ಸಾರ್ವಜನಿಕರಿಗೆ ನಿಷೇಧ ಹೇರಲಾಗಿದೆ. ಕಾಶಿ ವಿಶ್ವನಾಥ, ಶ್ರೀಕೃಷ್ಣ, ಶಿವ, ಆಂಜನೇಯ, ಗಣಪತಿ ದೇವಸ್ಥಾನಗಳು ಸಂಪೂರ್ಣ ಜಲಾವೃತಗೊಂಡಿವೆ.