ಬೆಂಗಳೂರು: ಜನರ ಒತ್ತಡಕ್ಕೆ ತಲೆಬಾಗಿ ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ರದ್ದು ಮಾಡಿದೆ. ಆದರೆ ನೈಟ್ ಕರ್ಫ್ಯೂ ವಿಚಾರದಲ್ಲಿ ಕಾಂಗ್ರೆಸ್‌ನಲ್ಲೇ ಭಿನ್ನ ಅಭಿಪ್ರಾಯ ವ್ಯಕ್ತವಾಗಿದೆ.
ಹೌದು. ವಿರೋಧ ಮಾಡಲೆಂದೇ ವಿರೋಧ ಪಕ್ಷ ಇದೆ ಎಂಬ ಬಿಜೆಪಿ ಆರೋಪಕ್ಕೆ ಪೂರಕ ಎಂಬಂತೆ ಈಗ ಇರುವ ಸಣ್ಣ ಪುಟ್ಟ ಕೋವಿಡ್ ರೂಲ್ಸ್‌ಗೂ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ತಗಾದೆ ತೆಗೆದಿದ್ದಾರೆ.
Advertisement
Advertisement
ಸರ್ಕಾರ ಪ್ರಾಕ್ಟಿಕಲ್ ಆಗಿಲ್ಲ. ಅವೈಜ್ಞಾನಿಕವಾಗಿ ರೂಲ್ಸ್ ಜಾರಿ ಮಾಡುತ್ತಿದೆ. ಲಂಡನ್‍ನಲ್ಲಿ ರೂಲ್ಸ್ ರಿಲೀಫ್ ನೀಡಲಾಗಿದೆ. ಆಂಧ್ರ, ತೆಲಂಗಾಣದಲ್ಲಿ ಕರ್ಫ್ಯೂ ಇಲ್ಲ. ನಮ್ಮಲ್ಲಿ ಮಾತ್ರ ಕರ್ಫ್ಯೂ ಹಾಕಿದ್ದಾರೆ. 50-50 ರೂಲ್ಸ್‌ನಿಂದ ಜನಕ್ಕೆ ತೊಂದರೆ ಆಗುತ್ತಿದೆ. ಬಸ್ಸು, ಮೆಟ್ರೋ, ರೈಲು, ವಿಮಾನದಲ್ಲೆಲ್ಲೂ 50-50 ರೂಲ್ಸ್ ಇಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಕೊರೊನಾ ಇಳಿಕೆ 17,266 ಕೇಸ್ – ಒಟ್ಟು 42,470 ಪಾಸಿಟಿವ್, 26 ಸಾವು
Advertisement
ದೊಡ್ಡವರಿಗೆ ಒಂದು ಬಡವರಿಗೆ ಒಂದು ರೂಲ್ಸ್ ಇದೆ. ಮೊದಲು ಇದನ್ನು ತೆಗೆಯಬೇಕು. ಪಾದಯಾತ್ರೆ ಕಾರಣಕ್ಕೆ ಕರ್ಫ್ಯೂ ಜಾರಿ ಮಾಡಿದ್ದು ಇದರಿಂದ ಜನರಿಗೆ ಬಹಳ ನಷ್ಟ ಉಂಟು ಮಾಡಿದ್ದಾರೆ ಎಂದು ಡಿಕೆಶಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಮೊದ್ಲು ಜನ್ರಿಗೆ ಆದಾಯ ಬರುವಂತೆ ಮಾಡಿ, ಆಮೇಲೆ ದರ ಏರಿಕೆ ಮಾಡಿ: ಡಿಕೆಶಿ
Advertisement
ನೈಟ್ ಕರ್ಫ್ಯೂ ವಿಚಾರದಲ್ಲಿ ಕಾಂಗ್ರೆಸ್ ದ್ವಂದ್ವದಲ್ಲಿದ್ದಂತೆ ಕಂಡು ಬರುತ್ತಿದೆ. ನಿನ್ನೆಯಷ್ಟೇ ಮಾತನಾಡಿದ್ದ ಸಿದ್ದರಾಮಯ್ಯ, ವೀಕೆಂಡ್ ಕರ್ಫ್ಯೂ ಬೇಡ. ಬೇಕಿದ್ದರೆ ನೈಟ್ ಕರ್ಫ್ಯೂ ಇರಲಿ ಎಂದಿದ್ದರು. ಇವತ್ತು ಡಿಕೆಶಿ ನೀಡಿದ ಹೇಳಿಕೆ ಇದಕ್ಕೆ ಸಂಪೂರ್ಣ ವ್ಯತಿರಿಕ್ತವಾಗಿದೆ. ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಸಿಎಂ ನಿರಾಕರಿಸಿದ್ದಾರೆ. ಆದರೆ ಗುರುವಾರ ನಡೆಯಲಿರುವ ಸಂಪುಟ ಸಭೆಯಲ್ಲಿ ನೈಟ್ ಕರ್ಫ್ಯೂ ಮತ್ತು 50-50 ರೂಲ್ಸ್ ಬಗ್ಗೆ ಪರಾಮರ್ಶೆ ನಡೆಸಲು ಸರ್ಕಾರ ಮುಂದಾಗಿದೆ.