ಚಿತ್ರದುರ್ಗ: ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ದೇವೇಗೌಡರಂತೆ ಸಿದ್ದರಾಮಯ್ಯ ಅವರು ಕೂಡ ಈ ರಾಜ್ಯದ ಆಸ್ತಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಬಣ್ಣಿಸಿದ್ದಾರೆ.
Advertisement
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು, ಸಿದ್ಧರಾಮಯ್ಯ ಇಬ್ಬರೂ ಕೋವಿಡ್ ಅನುಭವಿಸಿದ್ದೇವೆ. ಮೇಕೆದಾಟು ಹೋರಾಟ ಮಾಡಲಿ, ಆದರೆ ರಿಸ್ಕ್ ತೆಗೆದುಕೊಳ್ಳುವುದು ಬೇಡ. ಬಿಎಸ್‌ವೈ, ದೇವೇಗೌಡರಂತೆ ಸಿದ್ಧರಾಮಯ್ಯ ಸಹ ರಾಜ್ಯದ ಆಸ್ತಿ. ಕೊವಿಡ್‌ನಿಂದಾಗಿ ಏನಾದರು ಹೆಚ್ಚು ಕಡಿಮೆ ಆದರೆ ಯಾರು ಜವಾಬ್ದಾರಿ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಜನರೊಟ್ಟಿಗೆ ಪಾದಯಾತ್ರೆಗೆ ಅವಕಾಶ ನೀಡದಿದ್ರೆ ನಾನು, ಸಿದ್ದರಾಮಯ್ಯ ಇಬ್ಬರೇ ನಡೆಯುತ್ತೇವೆ: ಡಿಕೆಶಿ
Advertisement
ಇಂಧಿರಾಗಾಂಧಿ ಹತ್ಯೆ ಇರಬಹುದು, ಮೋದಿ ಭದ್ರತಾ ಲೋಪ ಇರಬಹುದು, ಇಂಥ ವಿಷಯದಲ್ಲಿ ರಾಜಕಾರಣ ಮಾಡಬಾರದು. ಇಂದಿರಾಗಾಂಧಿ ಸತ್ತರೆ ಸಾಯಲಿ ಬಿಡು, ಮೋದಿಗೆ ತೊಂದರೆ ಆಗಲಿ ಬಿಡು ಅನ್ನಬಾರದು. ಒಂದಷ್ಟು ಜನ, ಸಂಸ್ಥೆಗಳು ಅಭದ್ರತೆ ಸೃಷ್ಟಿಸಲೆಂದೇ ಇದ್ದಾರೆ. ಅಂಥವರನ್ನು ಹುಡುಕಿ ಬಿಗಿ ಮಾಡುವ ಕೆಲಸ ನಡೆದಿದೆ. ಪಾಕಿಸ್ತಾನದಿಂದ ಬಂದು ದುಷ್ಕೃತ್ಯ ಮೆರೆದವರಿಗೆ ತಕ್ಕ ಉತ್ತರ ನೀಡಲಾಗಿದೆ. ಅಭದ್ರತೆ ಮಾಡಿದರೂ ಮೋದಿಯ ಕೂದಲು ಅಲುಗಾಡಿಸಲಾಗಲ್ಲ. ಇಡೀ ಪ್ರಪಂಚ ಪ್ರಧಾನಿ ಮೋದಿ ಜೊತೆಗಿದೆ ಎಂದು ಹೇಳಿದ್ದಾರೆ.
Advertisement
Advertisement
ಸಚಿವ ಸಂಪುಟ ಪುನಾರಚನೆ ಬಗ್ಗೆ ಈಶ್ವರಪ್ಪ ಪ್ರತಿಕ್ರಿಯಿಸಿ, ಈ ಕುರಿತು ಸಿಎಂ ಮತ್ತು ಹೈಕಮಾಂಡ್ ತೀರ್ಮಾನಿಸುತ್ತದೆ. ಯಾರನ್ನು ಡ್ರಾಪ್ ಮಾಡಬೇಕು, ಯಾರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂದು ಅವರು ನಿರ್ಧರಿಸುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೋವಿಡ್ ಟಫ್ ರೂಲ್ಸ್ ಜಾರಿಯಾದ್ರೂ ಪಾದಯಾತ್ರೆ ಮಾಡೇ ಮಾಡ್ತೀವಿ: ಸಿದ್ದರಾಮಯ್ಯ