ತುಮಕೂರು: ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಶತಾಯುಷಿ ಶ್ರೀ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಆಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಇಂದು ಶ್ರೀಗಳನ್ನು ಚೆನ್ನೈಗೆ ಶಿಫ್ಟ್ ಮಾಡಲಾಗುತ್ತಿದೆ.
ಹೀಗಾಗಿ ಶ್ರೀಗಳನ್ನು ತುಮಕೂರಿನ ಸಿದ್ದಗಂಗಾ ಮಠದಿಂದ ರಸ್ತೆಮಾರ್ಗವಾಗಿ ಬೆಂಗಳೂರಿನ ಹೆಚ್‍ಎ ಎಲ್ ವಿಮಾನ ನಿಲ್ದಾಣಕ್ಕೆ ಕರೆತರಲಾಗುತ್ತಿದೆ. ಬೆಂಗಳೂರಿನಿಂದ ಏರ್ ಅಂಬುಲೆನ್ಸ್ ಮೂಲಕ ಚೆನ್ನೈಗೆ ಕರೆದೊಯ್ಯಲಾಗುತ್ತಿದೆ. ವಿಶೇಷ ಏರ್ ಅಂಬುಲೆನ್ಸ್ ಮೂಲಕ ಚೆನ್ನೈನಲ್ಲಿರುವ ಪ್ರತಿಷ್ಠಿತ ರೆಲಾ ವೈದ್ಯಕೀಯ ಸಂಸ್ಥೆಗೆ ಕರೆದೊಯ್ಯಲಾಗುತ್ತದೆ.
Advertisement
Advertisement
ಚೆನ್ನೈ ಏರ್ ಪೋರ್ಟ್ ನಿಂದ ಆಸ್ಪತ್ರೆಗೆ 10 ನಿಮಿಷವಿದೆ. ಐಸಿಎಟಿ ಸಂಸ್ಥೆಗೆ ಸೇರಿದ ಏರ್ ಅಂಬುಲೆನ್ಸ್ ನಲ್ಲಿ ಐಸಿಯು ಸೌಲಭ್ಯವಿದೆ. ಅಲ್ಲದೇ ಇದರಲ್ಲಿ ವೈದ್ಯರು ಸೇರಿ 7 ಮಂದಿ ಪ್ರಯಾಣಿಸಬಹುದಾಗಿದೆ.
Advertisement
ಸ್ವಾಮೀಜಿಗಳಿಗೆ ಈಗಾಗ್ಲೇ 5 ಸ್ಟಂಟ್ ಅಳವಡಿಸಲಾಗಿದ್ದು, ಮತ್ತೆ ಸ್ಟಂಟ್ ಅಳವಡಿಸಲು ಸಾಧ್ಯವಿಲ್ಲ. ಹೀಗಾಗಿ ಶಾಶ್ವತ ಪರಿಹಾರಕ್ಕಾಗಿ ಚೆನ್ನೈನಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತದೆ. ಶ್ರೀಗಳಿಗೆ ಭಾರತದ ಖ್ಯಾತ ಲಿವರ್ ಸ್ಪೆಷಲಿಸ್ಟ್ ಡಾ. ಮೊಹಮ್ಮದ್ ರೇಲಾ ಶಸ್ತ್ರಚಿಕಿತ್ಸೆ ನಡೆಸಲಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv