ತುಮಕೂರು: 30 ವರ್ಷಗಳ ಹಿಂದೆ ಕಾಶ್ಮೀರಿ ಪಂಡಿತರೊಂದಿಗೆ ನಡೆದ ಭೀಕರ ಸತ್ಯವನ್ನು ಬಿಚ್ಚಿಟ್ಟ ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಮಂಗಳವಾರ ಸಿದ್ದಗಂಗಾ ಶ್ರೀ, ಸಿದ್ದರಬೆಟ್ಟ ಶ್ರೀಗಳು ಸೇರಿ ಸುಮಾರು 8ಕ್ಕೂ ಹೆಚ್ಚು ಸ್ವಾಮೀಜಿಗಳೊಂದಿಗೆ ವೀಕ್ಷಿಸಿದರು.
ತುಮಕೂರು ನಗರದ ಎಸ್ ಮಾಲ್‌ನಲ್ಲಿರುವ ಐನಾಕ್ಸ್ ಚಿತ್ರ ಮಂದಿರದಲ್ಲಿ ಸಿದ್ದಗಂಗಾ ಶ್ರೀ ಸಿದ್ದಲಿಂಗ ಸ್ವಾಮಿಜಿ, ಸಿದ್ದರಬೆಟ್ಟ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಹಿರೇಮಠ ಸ್ವಾಮೀಜಿ ಸೇರಿದಂತೆ 8ಕ್ಕೂ ಹೆಚ್ಚು ಸ್ವಾಮೀಜಿಗಳು ಒಟ್ಟಾಗಿ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನೋಡಿದರು. ಇದನ್ನೂ ಓದಿ: ತಾಲಿಬಾನ್ ವಿರುದ್ಧ ಅಂತಾರಾಷ್ಟ್ರೀಯ ಕೋರ್ಟ್‌ಗೆ ದೂರು ಕೊಟ್ಟ ಫೋಟೋ ಜರ್ನಲಿಸ್ಟ್ ಡ್ಯಾನಿಶ್ ಸಿದ್ಧಿಕಿ ಪೋಷಕರು
Advertisement
Advertisement
ಕಳೆದ ಶನಿವಾರ ಉಡುಪಿಯ ಪೇಜಾವರ ಶ್ರೀಗಳು ದಿ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಸ್ಥಳೀಯ ಮಾಲ್‌ಗೆ ತೆರಳಿ ವೀಕ್ಷಿಸಿದ್ದರು. ಪರ-ವಿರೋಧ ಚರ್ಚೆಗಳ ನಡುವೆಯೂ ಸಿನಿಮಾ ಭಾರೀ ಪ್ರಶಂಸೆಯನ್ನು ಪಡೆದಿದೆ. ಇದನ್ನೂ ಓದಿ: ಮೇಕೆದಾಟು ವಿವಾದ – ತಮಿಳುನಾಡು ವಿಧಾನಸಭೆ ನಿರ್ಣಯಕ್ಕೆ ನಾಳೆ ರಾಜ್ಯದಿಂದ ಕೌಂಟರ್
Advertisement