ಕೋಲಾರದ ರಾಜಕೀಯ ವ್ಯಕ್ತಿಯಿಂದ ಥಾರ್‌ ಗಿಫ್ಟ್‌ – ʼಮೈಸೂರ್‌ಪಾಕ್‌ʼ ಖೆಡ್ಡಾಕ್ಕೆ ಕೆಡವಲು ಶ್ವೇತಾ ಪ್ಲ್ಯಾನ್‌!

Public TV
1 Min Read
Shwetha Gowda 1

ಬೆಂಗಳೂರು: ವಂಚನೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ವರ್ತೂರ್ ಪ್ರಕಾಶ್ (Varthur Prakash) ಅಪ್ತೆ ಶ್ವೇತಾ ಗೌಡಗೆ (Shwetha Gowda) ಕೋಲಾರದ ಪ್ರಮುಖ ರಾಜಕೀಯ ವ್ಯಕ್ತಿ ಜೊತೆ ಸಂಬಂಧ ಹೊಂದಿದ್ದ ವಿಚಾರ ಈಗ ತನಿಖೆಯಿಂದ ಬಯಲಾಗಿದೆ.

ಪೊಲೀಸರ ತನಿಖೆಯಲ್ಲಿ ಸ್ಫೋಟಕ ಮಾಹಿತಿಗಳು ಒಂದೊಂದಾಗಿ ಬಯಲಾಗುತ್ತಿದ್ದು ಕೋಲಾರ (Kolara) ರಾಜಕೀಯ ನಾಯಕನೊಬ್ಬನನ್ನು ಇತ್ತೀಚೆಗಷ್ಟೇ ಶ್ವೇತಾಗೌಡ ಪರಿಚಯ ಮಾಡಿಕೊಂಡಿದ್ದಳು. ಫೇಸ್‌ಬುಕ್‌ ಮೂಲಕ ಪರಿಚವಾಗಿ ಕೋಲಾರದಲ್ಲೇ ಶ್ವೇತಾಗೌಡ ಭೇಟಿಯಾಗಿದ್ದಳು.

 

ಈ ವೇಳೆ ಕೋಲಾರದ ವೆಂಕಟೇಶ್ವರ ಸ್ವೀಟ್‌ನಲ್ಲಿ ರಾಜಕೀಯ ಮುಖಂಡ ಮೈಸೂರು ಪಾಕ್ (Mysore Pak) ತಂದು ಕೊಟ್ಟಿದ್ದ. ಈ ಕಾರಣಕ್ಕೆ ಆ ಮುಖಂಡನ ಹೆಸರನ್ನು ಪೋನ್ ನಲ್ಲಿ ʼಮೈಸೂರು ಪಾಕ್ʼ ಎಂದು ಸೇವ್‌ ಮಾಡಿದ್ದಳು. ಇದನ್ನೂ ಓದಿ: ವಂಚನೆ ಕೇಸ್‌ಗೆ ಟ್ವಿಸ್ಟ್ ಕೊಟ್ಟ ವರ್ತೂರು ಪ್ರಕಾಶ್‌ – 12 ಲಕ್ಷ ನಗದು, 3 ಬ್ರಾಸ್‌ಲೆಟ್‌, ಚಿನ್ನದ ಉಂಗುರ ವಾಪಸ್

ವ್ಯವಹಾರದ ನೆಪದಲ್ಲಿ ಆ ಮುಖಂಡನಿಗೆ ಶ್ವೇತಾ ಗೌಡ ಅಪ್ತವಾಗಿದ್ದಳು. ಮಧುರ ಸ್ನೇಹದ ಕಾಣಿಕೆಯಾಗಿ ಶ್ವೇತಾಗೆ ಮುಖಂಡ ಹೊಸ ಥಾರ್‌ ಜೀಪ್‌ ಕೊಡಿಸಿದ್ದ. ಪೊಲೀಸರು ಬಂಧನದ ವೇಳೆ ಅದೇ ಜಿಪ್ ನಲ್ಲಿ ಮೈಸೂರಿನಲ್ಲಿ ಶ್ವೇತಾ ಸಿಕ್ಕಿಬಿದ್ದಿದ್ದಳು.

ಪೊಲೀಸರು ತನಿಖೆ ನಡೆಸಿದ ವೇಳೆ ಆ ಮುಖಂಡನನ್ನು ಖೆಡ್ಡಾಗೆ ಬೀಳಿಸಲು ಸಿದ್ದತೆ ನಡೆಸಿದ್ದ ವಿಚಾರ ಬೆಳಕಿಗೆ ಬಂದಿದೆ. ಖೆಡ್ಡಾಗಿ ಬೀಳಿಸಲು ಎಲ್ಲಾ ಎಲ್ಲಾ ಪ್ಲಾನ್‌ಗಳನ್ನು ಶ್ವೇತಾ ಮಾಡಿಕೊಂಡಿದ್ದಳು. ಇನ್ನೇನು ಕೆಲವೇ ದಿನಗಳಲ್ಲಿ ಆ ಮುಖಂಡನನ್ನು ಖೆಡ್ಡಾಗೆ ಬಿಳಿಸೋಕೆ ಅಂತಿಮ ಹಂತದ ಸಿದ್ದತೆ ನಡೆಸುತ್ತಿದ್ದಾಗ ಜ್ಯುವೆಲ್ಲರಿಯಿಂದ ಚಿನ್ನ ಪಡೆದು ವಂಚನೆ ಪ್ರಕರಣದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಳು.

 

Share This Article