ವಿಜಯ್ ದೇವರಕೊಂಡ (Vijay Devarakonda) ಅಕ್ಷರಶಃ ಹೊಂಡಕ್ಕೆ ಬಿದ್ದಿದ್ದಾರೆ. ಖುಷಿ (Kushi) ಸಿನಿಮಾ ಇನ್ನೆನು ಬಿಡುಗಡೆಯಾಗಲಿದೆ. ಈ ಹೊತ್ತಲ್ಲಿ ರಜನಿ, ದಳಪತಿ ವಿಜಯ್ ಹಾಗೂ ಚಿರು ಭಕ್ತಗಣವನ್ನು ಕೆರಳಿಸಿದ್ದಾರೆ. ಫ್ಲಾಪ್ ಹೀರೋಸ್ ಎಂದು ಇನ್‌ಡೈರೆಕ್ಟಾಗಿ ಈ ಸ್ಟಾರ್‌ಗಳನ್ನು ಕರೆದಿದ್ದಾರೆ. ಏನಿದು ಸುದ್ದಿ? ಏನಾಗಲಿದೆ ದೇವರಕೊಂಡ ಖುಷಿ ಸಿನಿಮಾ? ನೋಡಿ.
ಸುಮ್ಮನಿರಲಾದೆ ಇರುವೆ ಬಿಟ್ಟುಕೊಂಡರು ಅನ್ನೋದು ಇದಕ್ಕೇನೆ. ವಿಜಯ್ ಹಾಗೂ ಸಮಂತಾ ಅಭಿನಯದ ಖುಷಿ ಬಿಡುಗಡೆ ಹೊಸ್ತಿನಲ್ಲಿದೆ. ಸಿನಿಮಾ ಪ್ರಚಾರ ಮಾಡೋದು ಬಿಟ್ಟು. ಇನ್ಯಾರೋ ಹೀರೋಗಳನ್ನು ಎಳೆದು ತಂದರೆ ಅವರವರ ಫ್ಯಾನ್ಸ್ ಸುಮ್ಮನಿರುತ್ತಾರಾ? ಈ ಸ್ಟಾರ್‌ಗಳೆಲ್ಲ ಫ್ಲಾಪ್ ಸಿನಿಮಾ ಕೊಟ್ಟರೂ ನಾವು ಮುಚ್ಚಿಕೊಂಡು ನೋಡಬೇಕು ಎಂದಿರುವುದು ರಜನಿ, ವಿಜಯ್ ಹಾಗೂ ಚಿರು ಫ್ಯಾನ್ಸ್‌ಗೆ ಖಾರ ಕಲಿಸಿದಂತಾಗಿದೆ. ಏನಂದರು ವಿಜಯ್ ದೇವರಕೊಂಡ?
ರಜನಿ(Rajanikanth), ವಿಜಯ್ (Thalapathy Vijay) ಹಾಗೂ ಚಿರಂಜೀವಿ (Megastar Chiranjeevi) ಹಲವಾರು ಫ್ಲಾಪ್ ಕೊಟ್ಟಿದ್ದಾರೆ. ಆರಾರು ಸಿನಿಮಾ ಸೋತರೂ ಜೈಲರ್ ರೀತಿ ಮತ್ತೆ ಹಿಟ್ ಕೊಟ್ಟು ಎದ್ದು ಬರುತ್ತಾರೆ. ಸೋಲು ಅವರನ್ನು ಕಂಗೆಡಿಸುವುದಿಲ್ಲ. ಅವರು ಸೂಪರ್‌ಸ್ಟಾರ್ಸ್. ಅವರ ಸಿನಿಮಾಗಳನ್ನು ಮುಚ್ಚಿಕೊಂಡು ನೋಡಬೇಕು. ಇದನ್ನೂ ಓದಿ:ಚಂದ್ರಯಾನ ವ್ಯಂಗ್ಯ: ನಟ ಪ್ರಕಾಶ್ ರಾಜ್ ವಿರುದ್ಧ ದೂರು ದಾಖಲು
ವಿಜಯ್ ಸತ್ಯ ಹೇಳಿದ್ದಾರೆ. ಆದರದನ್ನು ವಿವರಿಸಿದ ರೀತಿ ಫ್ಯಾನ್ಸ್ ಅರಗಿಸಿಕೊಂಡಿಲ್ಲ. ರಜನಿ, ವಿಜಯ್, ಚಿರು ಭಕ್ತಗಣ ಈ ಕಾರಣಕ್ಕೆ ಕೊಂಡ ವಿರುದ್ಧ ಕೆಂಡ ಕಾರುತ್ತಿದೆ. ಯಾವಾಗ ಫ್ಯಾನ್ಸ್ ಆಕ್ರೋಶ ಹೆಚ್ಚಾಯಿತೊ. ವಿಜಯ್ ಕ್ಷಮೆ ಕೇಳಿಲ್ಲ. ಯಾರಿಗೂ ತಲೆ ಕೆಡಿಸಿಕೊಳ್ಳಲ್ಲ ಎಂದು ಗಹಗಹಿಸಿದ್ದಾರೆ. ಖುಷಿ ಚಿತ್ರಕ್ಕೆ ಗತಿ ಕಾಣಿಸುತ್ತೇವೆ ತೊಡೆ ತಟ್ಟಿದೆ ಮೂರೂ ಸ್ಟಾರ್ಸ್ ಬಳಗ. ಲೈಗರ್ ಸೋಲು ಪಾಠ ಕಲಿಸಿಲ್ಲ ಈ ವ್ಯಕ್ತಿಗೆ. ಎಣಿಸಿ ಎಣಿಸಿ ಮೊಂಬತ್ತಿ ಇಡಿಸಿಕೊಂಡಿದ್ದಾರೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]