ಟ್ರೆನಿಡಾಡ್: 2023ರ ಐಪಿಎಲ್ (IPL 2023) ಆವೃತ್ತಿಯಲ್ಲಿ ಬ್ಯಾಕ್ ಟು ಬ್ಯಾಕ್ ಸೆಂಚುರಿ ಸಿಡಿಸಿ ಗುಜರಾತ್ ಟೈಟಾನ್ಸ್ ತಂಡವನ್ನ ಫೈನಲ್‌ಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದ ಶುಭಮನ್ ಗಿಲ್ (Shubman Gill) ನಂತರ ನಡೆದ ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್‌ನಲ್ಲಿ (Test Cricket) ಬ್ಯಾಟಿಂಗ್ ಪ್ರದರ್ಶನ ಫ್ಲಾಪ್ ಆಗಿದೆ.
2023-25ರ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಟ್ರೋಫಿ ಅಭಿಯಾನ ಆರಂಭಗೊಂಡಿದ್ದು, ಅದರ ಭಾಗವಾಗಿ ಟೀಂ ಇಂಡಿಯಾ ವೆಸ್ಟ್ ಇಂಡೀಸ್ (West Indies) ವಿರುದ್ಧ 2ನೇ ಟೆಸ್ಟ್ ಆರಂಭಿಸಿದೆ. ಈ ಮೊದಲು ಆರಂಭಿಕನಾಗಿ ಕಣಕ್ಕಿಳಿಯುತ್ತಿದ್ದ ಶುಭಮನ್ ಗಿಲ್ ಇದೀಗ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಯುವತಾರೆ ಯಶಸ್ವಿ ಜೈಸ್ವಾಲ್‌ಗೆ (Yashasvi Jaiswal) ಭಾರತದ ಟೆಸ್ಟ್ ತಂಡದಲ್ಲಿ ಆರಂಭಿಕನ ಸ್ಥಾನ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಶುಭಮನ್ ಗಿಲ್ 3ನೇ ಕ್ರಮಾಂಕದ ಸ್ಥಾನ ಕಾಯ್ದುಕೊಂಡಿದ್ದಾರೆ.
ಹೊಸ ಸ್ಥಾನಕ್ಕೆ ಮರಳಿದ ನಂತರ ಶುಭಮನ್ ಗಿಲ್ ಬ್ಯಾಟಿಂಗ್ ಪ್ರದರ್ಶನ ಕಳೆದ ಎರಡೂ ಪಂದ್ಯಗಳಲ್ಲೂ ಫ್ಲಾಪ್ ಆಗಿದೆ. ಡೊಮಿನಿಕಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಕೇವಲ 6 ರನ್ ಗಳಿಸಿದ್ದ ಗಿಲ್, ಟ್ರಿನಿಡಾಡ್‌ನಲ್ಲಿ ನಡೆದ 2ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 10 ರನ್ ಗಳಿಸಿದ್ದಾರೆ. ಇದರಿಂದ ಅಭಿಮಾನಿಗಳಿಂದ ಟೀಕೆಗೆ ಗುರಿಯಾಗಿದ್ದಾರೆ. ಇದನ್ನೂ ಓದಿ: ಇಸ್ಲಾಂ ಧರ್ಮ ಹೇಳಿದಂತೆ ಬದುಕುತ್ತೇನೆ – ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಪಾಕ್ ಆಟಗಾರ್ತಿ
ಈ ನಡುವೆ ಟೀಂ ಇಂಡಿಯಾ ಮಾಜಿ ಆರಂಭಿಕ ಆಟಗಾರ ವಾಸಿಂ ಜಾಫರ್ ಮಾತನಾಡಿದ್ದು, ಗಿಲ್ 3ನೇ ಕ್ರಮಾಂಕದ ಬ್ಯಾಟಿಂಗ್ ಮಾಡಲು ಇನ್ನೂ ಕಲಿಯಬೇಕು. ಅದ್ರಲ್ಲೂ ಸ್ಪಿನ್ ಪಿಚ್‌ಗಳಲ್ಲಿ ಆಡುವಾಗ ತಿಳಿದುಕೊಳ್ಳಬೇಕಾಗುತ್ತದೆ. ಗಿಲ್ ಉತ್ತಮ ಪ್ರದರ್ಶನ ನೀಡಲೆಂದೇ ಆಟವಾಡ್ತಾರೆ. ಆದ್ರೆ ಅವರು ಬಯಸಿದ ರೀತಿಯಲ್ಲಿ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ವೈಟ್‌ಬಾಲ್ ಟೂರ್ನಿಗಳಲ್ಲಿ ಆಡುವ ವೇಗದಲ್ಲಿಯೇ ಆಡಲು ಬಯಸುತ್ತಿದ್ದಾರೆ. ಆದ್ದರಿಂದ ಪರಿಸ್ಥಿತಿಗಳನ್ನ ಮತ್ತು ಪಿಚ್ ರಿಪೋರ್ಟ್ ಅನ್ನು ಅರ್ಥಮಾಡಿಕೊಂಡು ಆಟವಾಡಬೇಕು ಎಂದು ಸಲಹೆ ನೀಡಿದ್ದಾರೆ.
ಐಪಿಎಲ್ ಬಳಿಕ ಯಶಸ್ವಿ ಜೈಸ್ವಾಲ್ ಉತ್ತಮ ಆರಂಭವನ್ನೇ ಮಾಡಿದ್ದಾರೆ. ಮೊದಲ ಮ್ಯಾಚ್‌ನಲ್ಲಿ 171 ರನ್ ಹಾಗೂ 2ನೇ ಮ್ಯಾಚ್‌ನಲ್ಲಿ 57 ರನ್ ಗಳಿಸಿದ್ದಾರೆ. ಅಲ್ಲದೇ ವೆಸ್ಟ್ ಇಂಡೀಸ್ ವಿರುದ್ಧ ಟಿ20 ಕ್ರಿಕೆಟ್‌ನಲ್ಲೂ ಸ್ಥಾನ ನೀಡಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಾಕ್ ಆಟಗಾರರು ಹುಲಿಗಳಂತೆ ಆಡ್ತಾರೆ, ಭಾರತವನ್ನ ಎಲ್ಲಿ ಬೇಕಾದ್ರೂ ಸೋಲಿಸ್ತಾರೆ – ಪಾಕ್ ಮಾಜಿ ಕ್ರಿಕೆಟಿಗ
ಈ ವರ್ಷ ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಕೊನೆಯ ಮ್ಯಾಚ್‌ನಲ್ಲಿ ಗಿಲ್ 235 ಎಸೆತಗಳಲ್ಲಿ 128 ರನ್ ಗಳಿಸಿದ್ದರು. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆ ನೀಡಿದ್ದ ಗಿಲ್ ವಿವಾದಾತ್ಮಕ ಕ್ಯಾಚ್‌ಗೆ ಔಟಾಗಿದ್ದರು.
Web Stories