ಹೈದರಾಬಾದ್: ಟೀಂ ಇಂಡಿಯಾದ (Team India) ಯುವ ಆಟಗಾರ ಶುಭಮನ್ ಗಿಲ್ (Shubman Gill) ನ್ಯೂಜಿಲೆಂಡ್ (New Zealand) ವಿರುದ್ಧದ ಏಕದಿನ (ODI) ಪಂದ್ಯದಲ್ಲಿ ಚೊಚ್ಚಲ ದ್ವಿಶತಕ ಸಿಡಿಸಿ (Double Century) ದಾಖಲೆ ಬರೆದಿದ್ದಾರೆ.
Advertisement
23 ವರ್ಷದ ಗಿಲ್ ಏಕದಿನ ಮಾದರಿ ದ್ವಿಶತಕ ಬಾರಿಸಿದ ಕಿರಿಯ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಇದರೊಂದಿಗೆ ಭಾರತದ ಪರ ದ್ವಿಶತಕ ಸಿಡಿಸಿದ 5ನೇ ಆಟಗಾರ ಎನಿಸಿಕೊಂಡಿದ್ದಾರೆ. ಈ ಮೊದಲು ರೋಹಿತ್ ಶರ್ಮಾ, ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಇಶಾನ್ ಕಿಶನ್ ದ್ವಿಶತಕದ ಸಾಧನೆ ಮಾಡಿದ್ದರು. ಇದನ್ನೂ ಓದಿ: `ಈ ಇಬ್ಬರು ವೀರರನ್ನು ಸ್ಮರಿಸಲೇಬೇಕು’ – ರಿಷಬ್ ಪಂತ್ ಮೊದಲ ರಿಯಾಕ್ಷನ್
Advertisement
2⃣0⃣0⃣ !???? ????
???????????????????????????????? ????????????????!????????
One mighty knock! ???? ????
The moment, the reactions & the celebrations ???? ????
Follow the match ???? https://t.co/IQq47h2W47 #TeamIndia | #INDvNZ | @ShubmanGill pic.twitter.com/sKAeLqd8QV
— BCCI (@BCCI) January 18, 2023
Advertisement
ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಗಿಲ್ ಆರಂಭದಿಂದಲೇ ಭರ್ಜರಿ ಬ್ಯಾಟಿಂಗ್‍ಗೆ ಮುಂದಾದರು. ಬೌಂಡರಿ, ಸಿಕ್ಸರ್ ಸಿಡಿಸುತ್ತಾ ಸಾಗಿದ ಗಿಲ್ ಹ್ಯಾಟ್ರಿಕ್ ಸಿಕ್ಸ್ ಸಿಡಿಸಿ 200 ರನ್ ಪೂರ್ತಿಗೊಳಿಸಿದರು. ಅಂತಿಮವಾಗಿ 208 ರನ್ (149 ಎಸೆತ, 19 ಬೌಂಡರಿ, 9 ಸಿಕ್ಸ್) ಸಿಡಿಸಿ ಕೊನೆಯ ಓವರ್‌ನಲ್ಲಿ ಔಟ್ ಆದರು. ಇದನ್ನೂ ಓದಿ: ಸಹ ಆಟಗಾರನ ಗೆಳತಿಯೊಂದಿಗೆ ಪಾಕ್ ನಾಯಕ ಚಾಟಿಂಗ್ – ಹನಿಟ್ರ್ಯಾಪ್‍ಗೆ ಸಿಲುಕಿದ್ರಾ ಬಾಬರ್ ಅಜಮ್?
Advertisement
ಗಿಲ್ ಏಕದಿನ ಮಾದರಿ ಕ್ರಿಕೆಟ್‍ನಲ್ಲಿ ವೇಗವಾಗಿ ಕೇವಲ 19 ಇನ್ನಿಂಗ್ಸ್‌ಗಳಿಂದ 1,000 ರನ್ ಪೂರ್ತಿಗೊಳಿಸಿದ ಆಟಗಾರ ಎಂಬ ದಾಖಲೆ ಬರೆದರು. ಈ ಮೊದಲು ವಿರಾಟ್ ಕೊಹ್ಲಿ 24 ಇನ್ನಿಂಗ್ಸ್‌ಗಳಿಂದ ಸಾವಿರ ರನ್ ಪೂರೈಸಿದ ದಾಖಲೆ ಬರೆದಿದ್ದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k