ಶುಭಾ ಪೂಂಜಾ ನ್ಯೂ ಹೇರ್ ಸ್ಟೈಲ್‍ಗೆ ದಿವ್ಯಾ ಕಾಮೆಂಟ್

Public TV
1 Min Read
Shubha Poonja

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಶುಭಾ ಪೂಂಜಾ ಡಿಸೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿತ್ತು. ಆದರೆ ಇದೇ ಬೆನ್ನಲ್ಲೆ ಮತ್ತೊಂದು ವಿಚಾರವಾಗಿ ಸುದ್ದಿಯಾಗಿದ್ದಾರೆ.

ಹೊಸ ಹೇರ್ ಕಟ್ ಮಾಡಿಸಿದ್ದೇನೆ ಎಂದು ಬರೆದುಕೊಂಡು ತಮ್ಮ ಕ್ಯೂಟ್ ಆಗಿರುವ ಫೋಟೋ ಮತ್ತು ಬಾರ್ಬಿ ಹೇರ್ ಸ್ಟೈಲ್ ಮಾಡಿಕೊಂಡಿರುವ ಖುಷಿಯಲ್ಲಿ ಕುಣಿದುಕುಪ್ಪಳಿಸಿರುವ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಅಭಿಮಾನಿಗಳು ಶುಭಾ ಅವರ ಹೊಸ ಲುಕ್‍ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ದಿವ್ಯಾ ಉರುಡುಗ ಕ್ಯೂಟಿ ಎಂದು ಬರೆದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:  ಡಿಸೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಶುಭಾ ಪೂಂಜಾ!

ಶುಭಾ ಪೂಂಜಾ ಅವರ ಹೊಸ ಹೇರ್ ಸ್ಟೈಲ್ ಫೋಟೋವನ್ನು ನಟಿ ನಿತ್ಯಾ ಶೆಟ್ಟಿ ಅವರು ಕ್ಲಿಕ್ ಮಾಡಿದ್ದಾರೆ. ಶುಭಾ, ನಿತ್ಯಾ ಇಬ್ಬರು ಜೊತೆಯಾಗಿ ಮಧ್ಯಾಹ್ನದ ಊಟವನ್ನು ಮಾಡುತ್ತಾ ಕೆಲವು ಸಮಯ ಜೊತೆಯಾಗಿ ಕಳೆದಿದ್ದಾರೆ. ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಶುಭಾ ಹಂಚಿಕೊಂಡಿದ್ದಾರೆ. ಗೀತಾ ಭಾರತೀ ಭಟ್, ದಿವ್ಯಾ ಸುರೇಶ್, ದಿವ್ಯಾ ಉರುಡುಗ ಕ್ಯೂಟ್ ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಮಂಜು ಪಾವಗಡ ಜೊತೆ ಶುಭಾ ಮತ್ತೊಮ್ಮೆ ಟ್ರಿಪ್

ಶುಭಾ ಪೂಂಜಾ ಅವರು ತಮ್ಮ ಗೆಳೆಯ ಸುಮಂತ್ ಮಹಾಬಲ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇವರಿಬ್ಬರು ಕಳೆದ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಕಳೆದ ವರ್ಷವೇ ಇವರ ಮದುವೆ ನಡೆಯಬೇಕಾಗಿತ್ತು. ಆದರೆ ಶುಭಾ ನನಗೆ ಈಗ ಮದುವೆ ಬೇಡ, ನಾನು ಬಿಗ್ ಬಾಸ್ ಶೋಗೆ ಸ್ಪರ್ಧಿಯಾಗಿ ಹೋಗಬೇಕು ಎಂದು ಹಠಕ್ಕೆ ಬಿದ್ದು ಕೊನೆಗೆ ಸ್ಪರ್ಧಿಯಾಗಿ ತೆರಳಿದ್ದರು ಎಂದು ಇತ್ತೀಚೆಗೆ ಶುಭಾ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

Share This Article