ಸೆಟ್ಟೇರಿದಾಗಿನಿಂದಲೂ ಸ್ಯಾಂಡಲ್‌ವುಡ್ (Sandalwood) ಅಂಗಳದಲ್ಲಿ ಸೌಂಡ್ ಮಾಡ್ತಿರುವ ಸಿನಿಮಾಗಳ ಪೈಕಿ ‘ಅಂಬುಜ’ ಕೂಡ ಒಂದು. ಶ್ರೀನಿ ಹನುಮಂತರಾಜು ನಿರ್ದೇಶನದ, ಕಾಶಿನಾಥ್ ಡಿ ಮಡಿವಾಳರ್ ನಿರ್ಮಾಣದ ಈ ಚಿತ್ರ, ಟೀಸರ್ ನಿಂದ ಕುತೂಹಲ ಕೆರಳಿಸಿತ್ತು. ಅನ್‌ಟೋಲ್ಡ್ ಕ್ರೈಮ್ ಸ್ಟೋರಿ ಅಂತ ಟ್ಯಾಗ್‌ಲೈನೇ ಹೇಳಿದ್ದರಿಂದ ಸಹಜವಾಗಿ ‘ಅಂಬುಜ’ (Ambuja) ಮೇಲೆ ನಿರೀಕ್ಷೆ ಹೆಚ್ಚಾಗಿತ್ತು. ಇದೀಗ ಈ ಚಿತ್ರದ ಟ್ರೈಲರ್ ಹೊರಬಿದ್ದಿದ್ದು ನಿರೀಕ್ಷೆ ಡಬಲ್ ಆಗಿದೆ. ಮೆಡಿಕಲ್ ಸ್ಕ್ಯಾಮ್‌ನ ಬಟಾ ಬಯಲು ಮಾಡಲು ‘ಅಂಬುಜ’ ಅಖಾಡಕ್ಕೆ ಇಳಿಯುತ್ತಿದ್ದಾರಾ ಎನ್ನುವ ಪ್ರಶ್ನೆ ಕೂಡ ಮೂಡಿದೆ.
Advertisement
ನೀವೆಂದು ಕಂಡು ಕೇಳರಿಯದ ವಿಚಿತ್ರ ಕಥಾಹಂದರದ ಜೊತೆ ನಿಮ್ಮನ್ನೆಲ್ಲಾ ಬೆಚ್ಚಿಬೀಳಿಸಲು ‘ಅಂಬುಜ’ (Ambuja Film) ಬರುತ್ತಿದ್ದಾರೆ ಅಂತ ಚಿತ್ರದ ನಿರ್ದೇಶಕರು ಹೇಳಿಕೊಂಡಿದ್ದರು. ಅದರ ಝಲಕ್ ಈಗ ನೀವು ಟ್ರೈಲರ್‌ನಲ್ಲೇ ನೋಡಬಹುದು. ಸರಣಿ ಕೊಲೆ, ಆ ಕೊಲೆ ಹಿಂದಿರುವುದು ಮೆಡಿಕಲ್ ಮಾಫಿಯಾನ ಅಥವಾ ಸೈಕಲಾಜಿಕಲ್ ಡಿಸಾರ್ಡರ್ ಇರುವ ವ್ಯಕ್ತಿಯಾ ಎನ್ನುವ ಕುತೂಹಲ. ಇದರ ಜೊತೆಗೆ ಕಾಳಿ ಅವತಾರವೆತ್ತಿ ರಿವೇಂಜ್ ತೆಗೆದುಕೊಳ್ಳಲು ಸಜ್ಜಾಗುವ ನಾಯಕಿ. ನಡುವೆ ಕಾವಿತೊಟ್ಟಿರುವ ವ್ಯಕ್ತಿಯ ದರ್ಶನ ಬೇರೆ ಆಗೋದ್ರಿಂದ ‘ಅಂಬುಜ’ ನೂರೆಂಟು ಅನುಮಾನಗಳನ್ನು ಹುಟ್ಟುಹಾಕ್ತಾಳೆ. ಕೊನೆಯಲ್ಲಿ ವೈದ್ಯೋ ಯಮಹ ಸಹೋದರ ಎಂಬ ಡೈಲಾಗ್ ಕೇಳಿಬರೋದ್ರಿಂದ ಮರ್ಡರ್ ಮಿಸ್ಟ್ರಿಯ ಹಿಂದೆ ಮೆಡಿಕಲ್ ಮಾಫಿಯಾ ಅಡಗಿರೋದು ಸತ್ಯವಾ? ಹೀಗೊಂದು ಸಂಶಯ ಮೂಡುತ್ತೆ.
Advertisement
Advertisement
ವೈದ್ಯೋ ನಾರಾಯಣೋ ಹರಿಃ ಅಂತಾರೇ. ಆದರೆ, ಅಂಬುಜ ವೈದ್ಯೋ ಯಮಹ ಸಹೋದರ ಅಂತಿದ್ದಾಳೆ. ಇದಕ್ಕೆ ಕಾರಣ ಏನು ಎಂಬುದು ಸಿನಿಮಾ ರಿಲೀಸ್ ಆದ್ಮೇಲೆ ತಿಳಿಯಲಿದೆ. ಇದೊಂದು ಮಹಿಳಾ ಪ್ರಧಾನ ಸಿನಿಮಾ ಆಗಿದ್ದು, ನಟಿ ಶುಭಾ ಪೂಂಜಾ, ಅಮೃತವರ್ಷಿಣಿ ಖ್ಯಾತಿಯ ರಜಿನಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಲಂಬಾಣಿ ಹೆಣ್ಣುಮಗಳ ಪಾತ್ರದಲ್ಲಿ ರಜನಿ (Rajani) ಮಿಂಚಿದರೆ ಆಕೆಯ ಮಗಳ ಪಾತ್ರದಲ್ಲಿ ಬೇಬಿ ಆಕಾಂಕ್ಷ ನಟಿಸಿದ್ದಾರೆ. ಶುಭಾ ಪೂಂಜಾ (Shubha Poonja) ಅವರು ಕ್ರೈಂ ಜರ್ನ್‌ಲಿಸ್ಟ್ ಪಾತ್ರಕ್ಕೆ ಜೀವತುಂಬಿದ್ದಾರೆ. ದೀಪಕ್ ಸುಬ್ರಹ್ಮಣ್ಯ, ಪದ್ಮಜರಾವ್, ಶರಣಯ್ಯ, ಜಗದೀಶ್ ಹಲ್ಕುಡೆ, ನಿಶಾ ಹೆಗ್ಡೆ, ಗುರುದೇವ ನಾಗರಾಜ್, ಸಂದೇಶ್ ಶೆಟ್ಟಿ ಅಜ್ರಿ ಪಾತ್ರವರ್ಗದಲ್ಲಿದ್ದಾರೆ. ಇದನ್ನೂ ಓದಿ:ಕಮಲ್ ಹಾಸನ್ ನಿರ್ಮಾಣದ ಸಿನಿಮಾದಲ್ಲಿ ನಟಿ ಜಾನ್ವಿ
Advertisement
ಇವ್ರನ್ನೆಲ್ಲಾ ಒಟ್ಟುಗೂಡಿಸಿರುವ ನಿರ್ದೇಶಕ ಶ್ರೀನಿ ಹನುಮಂತರಾಜು, ಲವ್ವು, ಸೆಂಟಿಮೆಂಟ್, ಹಾರರ್, ಥ್ರಿಲ್ಲರ್, ಮರ್ಡರ್ ಮಿಸ್ಟ್ರಿ ಹೀಗೆ ಎಲ್ಲಾ ಒಟ್ಟಿಗೆ ಸೇರಿಸಿ ಕಮರ್ಷಿಯಲ್ಲಾಗೇ ಕಥೆನಾ ಕಟ್ಟಿಕೊಟ್ಟಿದ್ದಾರೆ. ಬೆಂಗಳೂರು, ಗದಗ್, ಚಿಕ್ಕಮಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದ್ದು, ಓ ಮೈ ಲವ್, ಸುಮ್ಮನೇ ಪ್ರೀತಿಸು ಹಾಡುಗಳು ಪ್ರೇಕ್ಷಕರಿಗೆ ಗುಂಗು ಹಿಡಿಸಿವೆ. ಅದ್ರಲ್ಲೂ ಮಗಳು ಅಮ್ಮನಿಗಾಗಿ ಹಾಡುವ ಲಾಲಿ ಹಾಡಂತೂ ಹೆತ್ತಕರುಳಿಗೆ ಪ್ರಿಯವಾಗಿ ಹೊಸ ಇತಿಹಾಸವನ್ನೇ ನಿರ್ಮಿಸಿದೆ.
ಈ ಹಿಂದೆ ‘ಕೆಲವು ದಿನಗಳ ನಂತರ’ ಎಂಬ ಸಿನಿಮಾ ಮಾಡಿದ್ದರು. ಅಲ್ಲೂ ಹಾರರ್ ಎಲಿಮೆಂಟ್ಸ್ ಇಟ್ಟು ಪ್ರೇಕ್ಷಕರನ್ನು ಬೆಚ್ಚಿಬೀಳಿಸಿದ್ದರು. ಈಗ ನಿರ್ಮಾಪಕ ಕಾಶಿನಾಥ್ ಡಿ ಮಡಿವಾಳರ್ ಅವರು ಬರೆದಿರುವ ಅನ್‌ಟೋಲ್ಡ್ ಕ್ರೈಮ್ ಸ್ಟೋರಿಗೆ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಾಹಿತ್ಯ ಒದಗಿಸಿರುವ ಕಾಶಿನಾಥ್ ಕೋಟಿ ಲೆಕ್ಕದಲ್ಲಿ ಬಂಡವಾಳ ಹಾಕಿದ್ದಾರೆ. ಇವರಿಗೆ ಲೋಕೇಶ್ ಭೈರವ, ಶಿವಪ್ರಕಾಶ್.ಎನ್ ಎಂಬುವವರು ಕೈ ಜೋಡಿಸಿದ್ದಾರೆ. ಈ ಚಿತ್ರಕ್ಕೆ ಮುರುಲೀಧರ್ ಎನ್. ಕ್ಯಾಮೆರಾ ಕೈಚಳಕ ತೋರಿದ್ದು, ವಿಜಯ್ ಎಂ ಕುಮಾರ್ ಸಂಕಲನ ಮಾಡಿದ್ದಾರೆ. ಪ್ರಸನ್ನ ಕುಮಾರ್ ಮ್ಯೂಸಿಕ್ ಕಂಪೋಸ್ ಮಾಡಿದ್ದು, ತ್ಯಾಗರಾಜ್ ಹಿನ್ನಲೆ ಸಂಗೀತ ಒದಗಿಸಿದ್ದಾರೆ. ಲೈಟಿಂಗ್ ಅಂಡ್ ಕಲರ್ ಗ್ರೇಡಿಂಗ್‌ನಲ್ಲಿ ಹೊಸ ಪ್ರಯೋಗ ಮಾಡಿರುವ ಅಂಬುಜ ಟೀಮ್, ಬೆಳ್ಳಿಪರದೆ ಮೇಲೆ ಬರಲು ಮುಹೂರ್ತ ಫಿಕ್ಸ್ ಮಾಡಿದೆ. ಮಾರ್ಸ್ ಸುರೇಶ್ ಅವರು ಡಿಸ್ಟ್ರಿಬ್ರೂಷನ್ ಜವಾಬ್ದಾರಿ ಹೊತ್ತಿದ್ದು, ಇದೇ ಜುಲೈ 21ರಂದು ʼಅಂಬುಜ’ ಚಿತ್ರ ರಾಜ್ಯಾದ್ಯಂತ ತೆರೆಕಾಣಲಿದೆ.