Connect with us

Cinema

ಅರ್ಜುನ್ ಸರ್ಜಾ ವಿರುದ್ಧ ಮತ್ತೊಂದು ಬಾಂಬ್ ಸಿಡಿಸಿದ ಶೃತಿ ಹರಿಹರನ್

Published

on

ಬೆಂಗಳೂರು: ನಟಿ ಶೃತಿ ಹರಿಹರನ್ ಈಗಾಗಲೇ ನಟ ಅರ್ಜುನ್ ಸರ್ಜಾ ಅವರ ಮೇಲೆ ಮೀಟೂ ಆರೋಪವನ್ನು ಮಾಡಿದ್ದರು. ಆದರೆ ಈಗ ಶೃತಿ ಅರ್ಜುನ್ ವಿರುದ್ಧ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

ಶೃತಿ ಹರಿಹರನ್ ತನ್ನ ಟ್ವಿಟ್ಟರಿನಲ್ಲಿ ನಟಿಯೊಬ್ಬರು ಅರ್ಜುನ್ ಸರ್ಜಾ ವಿರುದ್ಧ ಆರೋಪ ಮಾಡಿದ್ದಾರೆ. ಆದರೆ ಅವರು ನನ್ನ ಜೊತೆ ಹೆಸರನ್ನು ಬಹಿರಂಗ ಪಡಿಸಬಾರದು ಎಂದು ಕೇಳಿಕೊಂಡ ಹಿನ್ನೆಲೆಯಲ್ಲಿ ಅವರ ಹೆಸರನ್ನು ಬಹಿರಂಗ ಪಡಿಸದೇ ಆರೋಪವನ್ನು ಇಲ್ಲಿ ನೀಡಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರೂಂ ನಂಬರ್ ನೀಡಿ ರೂಂಗೆ ಬನ್ನಿ ಎಂದಿದ್ರು – ಅರ್ಜುನ್ ಸರ್ಜಾ ವಿರುದ್ಧ ಬೆಂಗ್ಳೂರು ಗೃಹಿಣಿ ಆರೋಪ

ಶೃತಿ ಟ್ವೀಟ್ ನಲ್ಲಿ ಏನಿದೆ?
“ವೈಯಕ್ತಿಕ ಕಾರಣದಿಂದ ನನ್ನನ್ನು ಅನಾಮಧೇಯವಾಗಿರಿಸಬೇಕು. ನಾನು ಅರ್ಜುನ್ ಸರ್ಜಾ ಜೊತೆ ಸಿನಿಮಾದಲ್ಲಿ ನಟಿಸಿದ್ದೇನೆ. ಅವರು ಸಹಾಯಕ ನಿರ್ದೇಶಕನ ಹತ್ತಿರ ನನ್ನ ಫೋನ್ ನಂಬರ್ ಪಡೆದು ನನಗೆ ಕರೆ ಮಾಡಿದ್ದರು. ನನ್ನ ಮುಂದಿನ ಚಿತ್ರದಲ್ಲೂ ನಟಿಸಲು ಇಷ್ಟವಿದ್ದರೆ, ಈ ವಿಷಯದ ಬಗ್ಗೆ ಚರ್ಚಿಸೋಣ ಎಂದು ಹೇಳಿದ್ದರು. ಅರ್ಜುನ್ ನನಗೆ ಮೆಸೇಜ್ ಹಾಗೂ ಫೋನ್ ಮಾಡುತ್ತಿದ್ದರು. ಅಲ್ಲದೇ ನನಗೆ ಸರಿಯಾದ ಸಮಯಕ್ಕೆ ಬರಲು ಹೇಳಿ ನನಗೆ ಇರಿಸು ಮುರಿಸು ಮಾಡುತ್ತಿದ್ದರು. ಅವರ ಮೆಸೇಜ್ ಹಾಗೂ ಫೋನ್‍ಗೆ ನಾನು ಪ್ರತಿಕ್ರಿಯಿಸುತ್ತಿರಲಿಲ್ಲ. ನಾನು ನಿಮ್ಮ ಹಿರಿಯ ಮಗಳ ತರಹ ಎಂದು ಜೋರಾಗಿ ಹೇಳೋಣ ಎಂದು ಅನ್ನಿಸುತಿತ್ತು. ಆದರೆ ಈ ಪರಿಸ್ಥಿತಿಯನ್ನು ಹೇಗೆ ನಿರ್ವಹಿಸುವುದು ಎಂದು ನನಗೆ ಗೊತ್ತಿರಲಿಲ್ಲ. ಸದ್ಯ ಈ ವಿವಾದದಲ್ಲಿ ಶೃತಿ ಹರಿಹರನ್‍ನನ್ನು ನಂಬಿ. `ಜೆಂಟಲ್‍ಮೆನ್’ ಎಂದು ಎನ್ನಿಸಿಕೊಂಡಿರುವ ಅರ್ಜುನ್ ಸರ್ಜಾ ಈ ರೀತಿ ಮಾಡುವುದನ್ನು ನಿಲ್ಲಿಸಬೇಕು”. ಇದನ್ನೂ ಓದಿ: #MeeToo- ನಟಿ ಶೃತಿ ಹರಿಹರನ್ ಬೆನ್ನಿಗೆ ನಿಂತ ಶ್ರದ್ಧಾ ಶ್ರೀನಾಥ್!

ಶೃತಿ ಹರಿಹರನ್ ಆರೋಪವೇನು?:
ಮ್ಯಾಗಜಿನ್‍ವೊಂದರ ಸಂದರ್ಶನದ ವೇಳೆ ನಟ ಅರ್ಜುನ್ ವಿರುದ್ಧ ಆರೋಪ ಮಾಡಿದ ಶೃತಿ ಹರಿಹರನ್, ವಿಸ್ಮಯ ಚಿತ್ರೀಕರಣದ ವೇಳೆ ತನ್ನ ಮೇಲಾದ ಲೈಂಗಿಕ ಕಿರುಕುಳವಾದ ಅನುಭವವನ್ನು ಬಿಚ್ಚಿಟ್ಟಿದ್ದರು. ಕಳೆದ ವರ್ಷ `ವಿಸ್ಮಯ’ ಹೆಸರಿನ ಸಿನಿಮಾವೊಂದನ್ನು ನಾನು ಮಾಡಿದ್ದೆ. ಚಿತ್ರದಲ್ಲಿ ಅರ್ಜುನ್ ಅರ್ಜಾ ಅವರು ನನ್ನ ಸಹನಟನಾಗಿ ಅಭಿನಯಿಸಿದ್ದರು. ಚಿತ್ರದಲ್ಲಿ ನಾನು ಅವರ ಹೆಂಡತಿಯಾಗಿ ನಟಿಸುತ್ತಿದ್ದೆ, ಅದರ ರಿಹರ್ಸಲ್ ಮಾಡುತ್ತಿದ್ದೆವು. ಆಗ ಸರ್ಜಾ `ಇನ್ನೊಂಚೂರು ಹೀಗೆ ಪ್ರಾಕ್ಟೀಸ್ ಮಾಡಬಹುದಲ್ವಾ?’ ಅಂತ ಹೇಳಿ ಅವರು ನನ್ನನ್ನು ಜೋರಾಗಿ ತಬ್ಬಿಕೊಂಡರು. ಅವರ ಆ ಅಪ್ಪುಗೆಯಿಂದ ಒಮ್ಮೆಲೆ ನಾನು ತಬ್ಬಿಬ್ಬಾಗಿದ್ದು, ಆ ವರ್ತನೆ ತುಂಬಾನೇ ಅಸಹ್ಯವಾಗಿತ್ತು. ಇದರಿಂದ ನನಗೆ ಇರಿಸು ಮುರುಸು ಉಂಟಾಗಿದ್ದು, ಕೂಡಲೇ ನಿರ್ದೇಶಕರ ಬಳಿ ತೆರಳಿ `ಇನ್ನು ಮುಂದೆ ನಾನು ರಿಹರ್ಸಲ್ ಗೆ ಬರಲ್ಲ, ಬರೀ ಶೂಟಿಂಗ್‍ಗೆ ಮಾತ್ರ ಕರೆಯಿರಿ’ ಅಂತ ಹೇಳಿ ಬಂದುಬಿಟ್ಟೆ. ಆ ಬಳಿಕ ನಾನು ಬರೀ ಶೂಟಿಂಗ್ ಗೆ ಮಾತ್ರ ಹೋಗಿ ಬರುತ್ತಿದ್ದೆ ಅಂತ ಶೃತಿ ಹೇಳಿದರು. ಇದನ್ನೂ ಓದಿ:  ಪಬ್ಲಿಕ್ ಟಿವಿಯಲ್ಲಿ ಶೃತಿ V/S ಅರ್ಜುನ್: ಇಬ್ಬರ ಮಾತುಕತೆಯ ಪೂರ್ಣ ಸಂಭಾಷಣೆ ಓದಿ

ಇಷ್ಟೆಲ್ಲಾ ಆದ್ರೂ ಅರ್ಜುನ್ ಸರ್ಜಾ ಮಾತ್ರ ವಿಚಲಿತನಾದಂತೆ ಕಾಣಲಿಲ್ಲ. ಯಾಕಂದ್ರೆ ಅದಾದ ಬಳಿಕ ಅವರು ನನ್ನ ಜೊತೆ ಮಾತನಾಡುವಾಗಲೂ ಬಳಸಿದ ಭಾಷೆ ಸಭ್ಯವಾಗಿರಲಿಲ್ಲ. ಪದೇ ಪದೇ ಡಿನ್ನರ್ ಗೆ ಕರೆಯುತ್ತಿದ್ದರು. `ರೆಸಾರ್ಟ್ ಗೆ ಹೋಗೋಣ ಬಾ’ ಎಂದು ಕರೆಯಲು ಆರಂಭಿಸಿದ್ರು. ಹೀಗೆ ಕರೆಯುವಾಗ ನಾನು ನೇರವಾಗಿ `ಇಲ್ಲ, ನಾನು ಬರಲ್ಲ’ ಅಂತ ಹೇಳುತ್ತಿದ್ದೆನು. ನನ್ನ ಈ ಮಾತುಗಳನ್ನೂ ಅವರು ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ. `ನೋ ಅಂದ್ರೆ ನೋ’ ಎಂಬುದರ ಅರ್ಥವೇ ಅವರಿಗೆ ಆಗುತ್ತಿಲ್ಲವಲ್ಲ ಅಂತ ನನಗೆ ನಿಜವಾಗಿಯೂ ಅಚ್ಚರಿಯಾಗುತ್ತಿತ್ತು. ಯಾಕಂದ್ರೆ ಅವರಿಗೆ ಹೀಗೆ ಕರೆದಾಗ ಯಾರೂ `ನೋ’ ಅಂತ ಹೇಳಿರಲಿಲ್ಲವೋ ಏನೋ, ಅದಕ್ಕೆ ಅವರು ನನ್ನ ನೇರ ಮಾತುಗಳನ್ನು ಕಡೆಗಣಿಸುತ್ತಿದ್ದರು ಅಂತ ಅವರು ತನಗಾದ ಅನುಭವವನ್ನು ಬಿಚ್ಚಿಟ್ಟರು. ಇದನ್ನೂ ಓದಿ: ಘಟನೆ ನಡೆದಾಗಲೇ ಚಲನಚಿತ್ರ ಮಂಡಳಿಗೆ ದೂರು ನೀಡಬೇಕಿತ್ತು: ಫಿಲ್ಮಂ ಚೇಂಬರ್ ಅಧ್ಯಕ್ಷ ಚೆನ್ನೇಗೌಡ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=VJ3BO-m7Y5Q

https://www.youtube.com/watch?v=OT35pZGgGtY

https://www.youtube.com/watch?v=mbR4z3LEx00

Click to comment

Leave a Reply

Your email address will not be published. Required fields are marked *