Saturday, 25th May 2019

ಪಬ್ಲಿಕ್ ಟಿವಿಯಲ್ಲಿ ಶೃತಿ V/S ಅರ್ಜುನ್: ಇಬ್ಬರ ಮಾತುಕತೆಯ ಪೂರ್ಣ ಸಂಭಾಷಣೆ ಓದಿ

– ದೌರ್ಜನ್ಯ ಎಸಗಿದ್ದಕ್ಕೆ ಸಾಕ್ಷಿ ಇದೆಯಾ ಅರ್ಜುನ್ ಪ್ರಶ್ನೆ
– ಕೋರ್ಟ್ ಪರಿಗಣಿಸಬಹುದಾದ ಸಾಕ್ಷ್ಯ ನನ್ನ ಬಳಿ ಇದೆ – ಶೃತಿ

ಬೆಂಗಳೂರು: ಪಬ್ಲಿಕ್ ಟಿವಿಯಲ್ಲಿ ನಟಿ ಶೃತಿ ಹರಿಹರನ್ ಮತ್ತು ಅರ್ಜುನ್ ಸರ್ಜಾ ಇಬ್ಬರು ಎದುರಾಗಿದ್ದು, ಒಬ್ಬರಿಗೊಬ್ಬರ ಆರೋಪ-ಪ್ರತ್ಯಾರೋಪಗಳನ್ನು ಮಾಡಿದ್ದಾರೆ.

 ಅರ್ಜುನ್ ಸರ್ಜಾ, ಶೃತಿ ಹರಿಹರನ್ ಮತ್ತು ಪಬ್ಲಿಕ್ ಟಿವಿ ನಿರೂಪಕಿ ದಿವ್ಯಜ್ಯೋತಿ ನಡುವೆ ನಡೆದ ಸಂಭಾಷಣೆ ಇಲ್ಲಿದೆ.

ಅರ್ಜುನ್ ಸರ್ಜಾ: ಒಂದೂವರೆ ವರ್ಷದ ಮೇಲೆ ಯಾಕೆ ಈ ಆರೋಪ?
ಶೃತಿ ಹರಿಹರನ್: ಇವಾಗ ಯಾಕೆ ಪ್ರಶ್ನೆ ಮಾಡೋದು ತಪ್ಪು. ಪ್ರತಿಯೊಂದು ರಂಗದಲ್ಲಿಯೂ ಈ ಕಿರುಕುಳ ನಡೆಯುತ್ತಿರುತ್ತದೆ. ಈಗ ನಮ್ಮ ನೋವು ತೋಡಿಕೊಳ್ಳಲು ಮೀಟೂ ಎಂಬ ವೇದಿಕೆ ಸಿಕ್ಕಿದೆ. ನಾನು ಮಾಡಿರುವ ಆರೋಪಗಳಿಗೆ ಎಲ್ಲ ಸಾಕ್ಷ್ಯಾಧಾರಗಳು ನನ್ನ ಬಳಿ ಇವೆ. ಇದನ್ನೂ ಓದಿ:  ಶೃತಿ ಹರಿಹರನ್ ಆರೋಪಕ್ಕೆ ಅರ್ಜುನ್ ಸರ್ಜಾ ತಿರುಗೇಟು

ನಿರೂಪಕಿ: ಯಾವ ರೀತಿಯ ಸಾಕ್ಷಿಗಳು ನಿಮ್ಮ ಬಳಿ ಇವೆ?
ಶೃತಿ: ನ್ಯಾಯಾಲಯ ಒಪ್ಪಿಕೊಳ್ಳುವಂತಹ ಸಾಕ್ಷಿಗಳು ಇವೆ.

ಅರ್ಜುನ್ ಸರ್ಜಾ: ನಾನು ತಬ್ಬಿಕೊಂಡಿದ್ದೇಕೆ ಪ್ರೂಫ್ ಇದೆಯಾ?
ಶೃತಿ: ತಬ್ಬಿಕೊ0ಡಿರುವ ಪ್ರೂಫ್ ಸಿನಿಮಾದಲ್ಲಿದೆ. ಅದಕ್ಕೂ ಹೊರತಾಗಿಯೂ ನನ್ನ ಬಳಿ ಬೇರೆ ದಾಖಲೆಗಳಿದ್ದು, ಅಗತ್ಯವಿದ್ದಾಗ ಎಲ್ಲವನ್ನು ಬಿಡುಗಡೆ ಮಾಡುತ್ತೇನೆ. ತಮ್ಮ ಮೇಲಿರುವ ಆರೋಪಗಳನ್ನು ಸುಳ್ಳು ಎಂದು ಸಾಬೀತು ಮಾಡುವ ಅರ್ಜುನ್ ಸರ್ಜಾರ ಮೇಲಿದೆ. ಇದನ್ನೂ ಓದಿ: ಬೆಡ್ ರೂಂ, ಕ್ಲೋಸ್ ಅಪ್ ಸೀನ್ ಇದ್ದ ಚಿತ್ರವನ್ನ ಯಾಕೆ ಮಾಡ್ಬೇಕು – ಶ್ರುತಿ ವಿರುದ್ಧ ಅರ್ಜುನ್ ಸರ್ಜಾ ಅತ್ತೆ ಕಿಡಿ

ನಿರೂಪಕಿ: ಅಂದು ಯಾಕೆ ನಿರ್ದೇಶಕರಿಗೆ ಹೇಳಲಿಲ್ಲ?
ಶೃತಿ: ಅಂದು ಸಿನಿಮಾ ರಿಹರ್ಸಲ್ ಮಾಡುವಾಗ ಅರ್ಜುನ್ ಸರ್ ತಬ್ಬಿಕೊಂಡು ನನಗೆ ಇರುಸು-ಮುರುಸು ಉಂಟಾಯಿತು. ಅಂದೇ ನಾನು ನಿರ್ದೇಶಕರಿಗೆ ಮುಂದೆ ರಿಹರ್ಸಲ್ ಗೆ ಬರಲ್ಲ ಅಂತಾ ಹೇಳಿ ಶೂಟಿಂಗ್ ದಿನ ಮಾತ್ರ ಬಂದಿದ್ದೇನೆ.

ಅರ್ಜುನ್ ಸರ್ಜಾ: ಅವರ ಬಳಿಯಿರುವ ಪ್ರೂಫ್‍ಗಳನ್ನು ಬೇಕಾದ್ರೆ ತೋರಿಸಲಿ. ಮೀಟೂ ಎಂಬ ದೊಡ್ಡ ವೇದಿಕೆಯನ್ನು ಒಳ್ಳೆಯದಕ್ಕೆ ಬಳಕೆ ಮಾಡಿಕೊಳ್ಳಲಿ. ಯಾರೋ ನನ್ನ ಮೇಲೆ ಆರೋಪ ಮಾಡ್ತಾರೆ, ಇಲ್ಲಿ ನಾನು ಇಲ್ಲ ಅನ್ನಬೇಕು, ಅವರು ಸುಳ್ಳು ಅಂತಾ ಹೇಳಬೇಕು. ಇದೊಂದು ಮಕ್ಕಳ ಆಟ ರೀತಿ ಮಾಡಿಕೊಂಡಂತೆ ನನಗೆ ಅನ್ನಿಸುತ್ತಿದೆ. ದಯವಿಟ್ಟು ಈ ವೇದಿಕೆಯನ್ನು ಚೀಪ್ ಆಗಿ ಬಳಕೆ ಮಾಡಿಕೊಳ್ಳಬೇಡಿ. ನಮಸ್ಕಾರ (ಫೋನ್ ಕಟ್)

ನಿರೂಪಕಿ: ನಿರ್ದೇಶಕರು ನಿಮಗೆ ಇಂಟಿಮೇಟ್ ಸೀನ್ ಇದೇ ಅಂತಾ ಹೇಳಿಲ್ವಾ ಶೃತಿ ಅವ್ರೆ?
ಶೃತಿ: ನಿರ್ದೇಶಕರು ಸಿನಿಮಾದ ಕಥೆ ಹೇಳುವಾಗ ಕ್ಲೋಸ್ ಸೀನ್ ಇರುತ್ತೆ ಅಂತಾ ಹೇಳಿದ್ದರು. ಆದ್ರೆ ಇದೂವರೆಗೂ ನಾನು ಹಲವು ನಟರೊಂದಿಗೆ ನಟಿಸಿದ್ದೇನೆ. ಆದ್ರೆ ಯಾರೊಂದಿಗೂ ನನಗೆ ಅನ್ ಕಂಫರ್ಟ್ ಫೀಲ್ ಆಗಿಲ್ಲ. ಗುಡ್ ಟಚ್ ಮತ್ತು ಬ್ಯಾಡ್ ಟಚ್ ಅನ್ನೋದು ಇರುತ್ತೆ. ಇದನ್ನೂ ಓದಿ:  #MeToo ಅನ್ನೋದು ದೊಡ್ಡ ರೋಗ-ಶೃತಿ ಹರಿಹರನ್ ವಿರುದ್ಧ ಹಿರಿಯ ನಟ ರಾಜೇಶ್ ಕಿಡಿ

ನಿರೂಪಕಿ: ಅಂದೇ ಸಿನಿಮಾದಿಂದ ಹೊರ ಬರಲಿಲ್ಲ ಯಾಕೆ?
ಶೃತಿ: ಅದು ಒಂದು ದೊಡ್ಡ ಸಿನಿಮಾ. ಅಲ್ಲಿ 150ಕ್ಕೂ ಹೆಚ್ಚು ಕಲಾವಿದರು, ತಂತ್ರಜ್ಞರು ಇರುತ್ತಾರೆ. ನನ್ನದು ಕೇವಲ 15 ದಿನದ ಶೂಟಿಂಗ್ ಮಾತ್ರ ಇತ್ತು. 5 ದಿನ ಅಲ್ರೆಡೆ ಶೂಟಿಂಗ್ ಮುಗಿದಿತ್ತು. ನನ್ನಿಂದಾಗಿ ಎಲ್ಲರ ಹೊಟ್ಟೆ ಮೇಲೆ ಹೊಡೆದಂತೆ ಆಗುತ್ತೆ ಎಂದು ನಿರ್ದೇಶಕರ ಬಳಿ ಹೇಳಿ ಶೂಟಿಂಗ್ ದಿನ ಮಾತ್ರ ಹೋಗಿ ಚಿತ್ರ ಮುಗಿಸಿದೆ. (ಫೋನ್ ಕಟ್)

ಇದಕ್ಕೂ ಮೊದಲು ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಅರ್ಜುನ್ ಸರ್ಜಾ, ಶೃತಿ ಆರೋಪದಿಂದ ನನಗೆ ತುಂಬಾ ನೋವಾಗಿದೆ. ಇದೂವರೆಗೂ ನಾನು 60 ರಿಂದ 70 ನಟಿಯರ ಜೊತೆ ನಟಿಸಿದ್ದೇನೆ. ಯಾರೂ ಸಹ ಈ ರೀತಿಯ ಆರೋಪ ಮಾಡಿಲ್ಲ. ಜೊತೆಯಲ್ಲಿಯೂ ಕೂರಿಸಿಕೊಂಡು ದೃಶ್ಯದಲ್ಲಿ ಹೇಗೆ ನಟಿಸಬೇಕು? ಡೈಲಾಗ್ ನಲ್ಲಿ ಏನಾದರೂ ಬದಲಾವಣೆ ಮಾಡಬೇಕು ಎಂಬುದರ ಕುರಿತು ಚರ್ಚಿಸುತ್ತೇವೆ. ನಮ್ಮ ವೃತ್ತಿಯನ್ನು ಮುಂದಿಟ್ಟುಕೊಂಡು ಇಂತಹ ಕೆಳಮಟ್ಟದಲ್ಲಿ ನಾನು ಎಂದೂ ಇಳಿದಿಲ್ಲ. ನಮ್ಮ ಪ್ರೊಫೆಶನ್ ಮುಂದೆ ಇಟ್ಟುಕೊಂಡು ಒಂದು ಹೆಣ್ಣಿನ ಮೈ ಮುಟ್ಟಬೇಕು ಎಂಬ ಚೀಪ್ ಮೆಂಟಾಲಿಟಿ ನನ್ನಲ್ಲಿ ಇಲ್ಲ. ನಾನು ಮೀಟೂ ವೇದಿಕೆ ಬಗ್ಗೆ ತುಂಬಾ ಗೌರವ ಹೊಂದಿದ್ದೇನೆ. ಈ ದೊಡ್ಡ ಅಭಿಯಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಶೃತಿ ಮಾತನಾಡುವ ಮಾತುಗಳಿಗೆ ಯಾವುದಾದರೂ ಆಧಾರವಿದೆಯಾ? ಶೃತಿ ಆರೋಪದ ವಿರುದ್ಧ ನಾನು ಮಾನನಷ್ಟ ಮೊಕದ್ದಮೆ ಹಾಕುತ್ತೇನೆ. ಇದನ್ನೂ ಓದಿ: #MeToo ಅಭಿಯಾನವನ್ನು ಸಮರ್ಥಿಸಿಕೊಂಡ್ರು ಶೃತಿ ಹರಿಹರನ್

ನಾನು ಪ್ರತಿಕ್ರಿಯಿಸಬಾರದು ಅಂತಾ ನಿರ್ಧರಿಸಿದ್ದೆ. ಆದ್ರೆ ‘ಮೌನಂ ಸಮ್ಮತಿ ಲಕ್ಷ್ಮಣಂ’ ಎಂದು ಅರ್ಥವಾಗುತ್ತದೆ ಎಂದು ಪಬ್ಲಿಕ್ ಟಿವಿ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದೇನೆ. ಒಂದೂವರೆ ವರ್ಷದ ಹಿಂದೆ ನಡೆದ ಸಿನಿಮಾ ಮುಗಿದಿದೆ. ಅಂದೇ ನಿರ್ದೇಶಕರಿಗೆ ಅಥವಾ ಚಲನಚಿತ್ರ ಮಂಡಳಿಗೆ ದೂರು ಕೊಡಬೇಕಿತ್ತು. ಇಷ್ಟು ದಿನ ಸುಮ್ಮನಿದ್ದು ಈವಾಗ ಯಾಕೆ ಹೇಳುತ್ತಿದ್ದಾರೆಂದು ಗೊತ್ತಿಲ್ಲ ಎಂದು ತಿಳಿಸಿದ್ದರು.  ಇದನ್ನೂ ಓದಿ: ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು #MeToo- ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಆರೋಪ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *