Connect with us

ಮಾರ್ಚ್ ನಲ್ಲಿ ರಷ್ಯಾದ ಗೆಳೆಯನ ಜೊತೆ ಶ್ರೇಯಾ ಸರಣ್ ಮದ್ವೆ!

ಮಾರ್ಚ್ ನಲ್ಲಿ ರಷ್ಯಾದ ಗೆಳೆಯನ ಜೊತೆ ಶ್ರೇಯಾ ಸರಣ್ ಮದ್ವೆ!

ಮುಂಬೈ: ಸ್ಯಾಂಡಲ್‍ವುಡ್ ನಟಿ ಭಾವನಾ ಅವರು ತನ್ನ ದೀರ್ಘಕಾಲದ ಗೆಳೆಯ ನವೀನ್ ಅವರನ್ನು ಕೆಲ ದಿನಗಳ ಹಿಂದೆ ವರಿಸಿದ್ದರು. ಈಗ ದಕ್ಷಿಣ ಭಾರತದ ಖ್ಯಾತ ನಟಿ ಶ್ರೇಯಾ ಸರಣ್ ಅವರ ಸಮಯ, ತನ್ನ ಬಹು ಕಾಲದ ರಷ್ಯಾದ ಗೆಳೆಯನ ಜೊತೆ ಮಾರ್ಚ್ ತಿಂಗಳಲ್ಲಿ ಸಪ್ತಪದಿ ತುಳಿಯಲಿದ್ದಾರೆ.

ಶ್ರೇಯಾ ಸರಣ್ ಈಗಾಗಲೇ ರಷ್ಯಾದಲ್ಲಿ ಬೀಡು ಬಿಟ್ಟಿದ್ದು, ತನ್ನ ಭಾವಿ ಪತಿಯ ತಂದೆ ತಾಯಿಯ ಜೊತೆ ಮದುವೆಯ ವಿಚಾರವಾಗಿ ಮಾತನಾಡಲು ಹೋಗಿದ್ದಾರೆಂದು ಮಾಧ್ಯಮವೊಂದು ವರದಿ ಮಾಡಿದೆ.

ಈಗಾಗಲೇ ರಾಜಸ್ಥಾನವನ್ನು ಮದುವೆಯ ತಾಣವನ್ನಾಗಿ ಆಯ್ಕೆ ಮಾಡಿರುವ ಶ್ರೇಯಾ ಅವರು ಮದುವೆಯ ಆ ಸುಂದರ ಘಳಿಗೆಗೆ ಕಾಯುತ್ತಿದ್ದಾರೆ ಎಂದು ಹೇಳಲಾಗಿದೆ.

ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿರುವ ಶ್ರೇಯಾ ಸರಣ್ , 2001ರ ತೆಲುಗಿನ ಇಷ್ಟಂ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ವೃತ್ತಿಯಲ್ಲಿ ನೃತ್ಯಗಾರ್ತಿ ಆಗಿದ್ದ ಶ್ರೇಯಾ ನಿಧಾನವಾಗಿ ತಮ್ಮ ಪ್ರತಿಭೆಯನ್ನು ಹೊರಹಾಕಿದರು. ದಕ್ಷಿಣ ಭಾರತವಲ್ಲದೇ ಉತ್ತರದಲ್ಲಿಯೂ ಹೆಸರು ಮಾಡಿರುವ ಶ್ರೇಯಾ ತಮ್ಮ ಸುಂದರ ಮತ್ತು ಆಕರ್ಷಕ ನೃತ್ಯ ಶೈಲಿಯಿಂದ ಜನಪ್ರಿಯರಾದರು.

ಹಿಂದಿಯ ‘ದೀಪಾ ಮೆಹ್ತಾಸ್ ಮಿಡ್‍ನೈಟ್ ಚಿಲ್ಡ್ರನ್’ ಸಿನಿಮಾದಲ್ಲಿ ನಟಿಸಿದ ಶ್ರೇಯಾಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು. ತೆಲುಗಿನಲ್ಲಿ ನಂದಮೂರಿ ಬಾಲಕೃಷ್ಣ ಅವರ ಜೊತೆ ನಟಿಸಿದ ಪೈಸಾ ವಸೂಲ್ ನಲ್ಲಿ ಅವರು ಕೊನೆಯದಾಗಿ ನಟಿಸಿದ್ದ ಚಿತ್ರವಾಗಿತ್ತು.

ಪ್ರಸ್ತುತ ಶ್ರೀಯಾ ಅವರು ತೆಲುಗಿನ ಮೋಹನ್ ಬಾಬು ಮತ್ತು ವಿಷ್ಣು ಮಂಚು ಅವರ ಜೊತೆ ನಟಿಸುತ್ತಿದ್ದಾರೆ. ಮಲೆಯಾಳಂ ಸಿನಿಮಾ ಸಾಲ್ಟ್ ಆಂಡ್ ಪೆಪ್ಪರ್ ನ ಹಿಂದಿ ರಿಮೇಕ್ ತಡ್ಕಾದಲ್ಲಿ ಶ್ರೇಯಾ ನಟಿಸುತ್ತಿದ್ದಾರೆ. ಇದಲ್ಲೇ ತೆಲುಗಿನ ವೀರ ಭೋಗ ವಸಂತ ರಾಯಲು ಎಂಬ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

Advertisement
Advertisement