ಬಾಗಲಕೋಟೆ: ನಟ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡುವಂತೆ ಶ್ರೀರಾಮ ಸೇನೆ ಆಗ್ರಹಿಸಿದೆ.
ಬಾಗಲಕೋಟೆಯಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ಒತ್ತಾಯ ಮಾಡಿದ್ದಾರೆ. ಪುನೀತ್ ರಾಜ್‍ಕುಮಾರ್ ನಟನೆ ಅತ್ಯಂತ ಅದ್ಭುತ. ರಾಜ್ ಕುಮಾರ್ ಅವರ ಮಗ, ತದ್ರೂಪಿಯಾಗಿ ಯೋಗ್ಯವಾದ ನಟನೆ. ಅವರ ಸಿನಿಮಾದಲ್ಲಿ ಒಂದು ಮೆಸೇಜ್ ಇರ್ತಿತ್ತು. ಅವರ ಸಿನಿಮಾದಲ್ಲಿ ಸುಮ್ಮನೆ ಇರ್ತಿರಲಿಲ್ಲ ಎಂದರು. ಇದನ್ನೂ ಓದಿ: ಖುದ್ದು ರಕ್ತದಾನ ಮಾಡಿ ಮಾದರಿಯಾದ ನಟ ಶಿವರಾಜ್ ಕುಮಾರ್
ಸಮಾಜಕ್ಕೆ ಒಳ್ಳೆಯ ಮೆಸೇಜ್ ಇರುತ್ತಿತ್ತು. ಗಣಿ ಲೂಟಿ ಆಗುತ್ತಿರುವ ಸಮಯದಲ್ಲಿ ಅದಕ್ಕೆ ಸಂಬಂಧಿಸಿದ ಸಿನಿಮಾ ತೆಗೆದ್ರು. ಇತ್ತೀಚಿಗೆ ಯುವರತ್ನ ಮೂಲಕ ಕಾಲೇಜ್ ನಲ್ಲಿ ನಡೆಯುವ ಡ್ರಗ್ ಮಾಫಿಯಾಗೆ ಸಂಬಂಧಿಸಿದ ಸಂದೇಶ ಇತ್ತು. ಹೀಗಾಗಿ ಅವರಿಗೆ ಪ್ರಶಸ್ತಿ ಕೊಡುವುದರಲ್ಲಿ ಏನೇನು ತಪ್ಪಿಲ್ಲ. ಪುನೀತ್ ಗೆ ಪ್ರಶಸ್ತಿ ಕೊಡಬೇಕು ಎಂದು ಆಗ್ರಹ ಮಾಡುವುದಾಗಿ ತಿಳಿಸಿದರು. ಇದನ್ನೂ ಓದಿ: ಅನ್ನ ಸಂತರ್ಪಣೆ ವೇಳೆ ಪುನೀತ್ ನೆನೆದು ಕಣ್ಣೀರಿಟ್ಟ ಅಶ್ವಿನಿ
ಇದೇ ವೇಳೆ ನವಂಬರ್ 12ರಂದು ನಾನು ಅಪ್ಪು ಅವರ ಮನೆ ಹಾಗೂ ಅವರ ಸಮಾಧಿಗೆ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಲಿರುವುದಾಗಿ ಮುತಾಲಿಕ್ ಹೇಳಿದರು. ಇದನ್ನೂ ಓದಿ: ಅಭಿಮಾನಿಗಳ ಊರು ದೂರ ಇದ್ರೂ ಮನಸ್ಸು ಹತ್ತಿರವಿದೆ: ರಾಘವೇಂದ್ರ ರಾಜ್‍ಕುಮಾರ್