ಸುಮಾರು ಎಂಟು ಸಾವಿರ ವಿದ್ಯಾರ್ಥಿಗಳ ಬದುಕಿಗೆ ವಿದ್ಯಾಧಾರೆ ಎರೆಯುತ್ತಿರುವ ಶ್ರೀಮಠದಲ್ಲಿ ಸಿದ್ದಗಂಗಾ ಶ್ರೀಗಳು ಮಠಾಧೀಶಾರಾಗಿ ಧರ್ಮಸ್ವೀಕಾರ ಮಾಡಿದಾಗ ಇದ್ದಿದ್ದು ಕೇವಲ ಆರುವತ್ತು ವಿದ್ಯಾರ್ಥಿಗಳು ಮಾತ್ರ. ಕಾಯಕ ಕಷ್ಟದಿಂದ ಧೀರ ಸಂಕಲ್ಪದಿಂದ ವಿಶಾಲ ಚಿಂತನೆಯಿಂದ ಅದ್ಭುತ ಸಾಧನೆಗಳ ಮೇರು ಶಿಖರವೇರಿದ ಶ್ರೀಗಳು ಆರುವತ್ತು ವಿದ್ಯಾರ್ಥಿಗಳಿಂದ ಎಂಟು ಸಾವಿರ ವಿದ್ಯಾರ್ಥಿಗಳಿಗೆ ಸರಸ್ವತಿ ದೇಗುಲದಲ್ಲಿ ಆಶ್ರಯ ನೀಡಿದರು.
ಹಳ್ಳಿ ಹಳ್ಳಿಗಳಲ್ಲಿ ವಿದ್ಯಾಕೇಂದ್ರವನ್ನು ತೆರೆದ್ರು. ಬಡ ವಿದ್ಯಾರ್ಥಿಗಳಿಗೆ ವಿದ್ಯೆ ಮರಿಚೀಕೆ ಅಂದುಕೊಳ್ಳುತ್ತಿರುವಾಗಲೆಲ್ಲ ವಿದ್ಯಾಭಿಕ್ಷೆಯನ್ನಿತ್ತು ಆಸರೆ ಕೊಟ್ಟರು. ಜಗತ್ತಿನ ದೇವರು. ಶ್ರೀ ಮಠದಲ್ಲಿ ಆಶ್ರಯ ಪಡೆದು ಓದಿದವರು ಬಹುತೇಕ ಉನ್ನತ ಹುದ್ದೆಯಲ್ಲಿದ್ದಾರೆ. ವಿದೇಶದಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಇದನ್ನೂ ಓದಿ: ಶ್ರೀಗಳ 50 ಶ್ರೀವಾಣಿಗಳು – ಕರ್ತನೆಂಬ ಅಹಂಕಾರ ಬಿಡು. ಕಿಂಕರನೆಂಬ ಭಾವ ಬೆಳೆಸಿಕೋ
ಮಠದಲ್ಲಿ ವಿದ್ಯೆಯ ಪಡೆಯಲು ಆಶ್ರಯ ಪಡೆಯಲು ಕೇವಲ ಬಡತನವೆಂಬ ಸರ್ಟಿಫಿಕೇಟ್ ಮಾತ್ರ ಸಾಕು. ಅಬ್ಬಾಬ್ಬ. ಶ್ರೀಗಳ ಅಮೋಘ ಶಕ್ತಿಗೆ ಇದಕ್ಕಿಂತ ಅದ್ವಿತೀಯ ಸಾಕ್ಷಿ ಬೇಕಿಲ್ಲ ಬಿಡಿ. ಮಠದ ಏಳ್ಗೆಗಾಗಿ ಮಠದಿಂದ ಕೋಟಿ ಕೋಟಿ ಜನರ ಬದುಕನ್ನು ಕಟ್ಟಿಕೊಟ್ಟ ಕೀರ್ತಿ ನಡೆದಾಡುವ ದೇವರಿಗೆ ಸಲ್ಲಬೇಕು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv