ವಿಜಯಪುರ: ಈ ಹಿಂದೆ ಸಂಘ ಪರಿವಾರ ಮಾನಸಿಕ, ದೈಹಿಕ, ಆರ್ಥಿಕವಾಗಿ ನನಗೆ ಸಾಕಷ್ಟು ಹಿಂಸೆ ನೀಡಿದೆ. ನಾನು ಸಂಘ ಪರಿವಾರದ ಮೂಲಕ ಚಿತ್ರಹಿಂಸೆ ಅನುಭವಿಸಿದ್ದೆನೆಂದು ಸಂಘ ಪರಿವಾರದ ವಿರುದ್ಧ ಶ್ರೀರಾಮ ಸೇನಾ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಸೇನೆಯಿಂದ ಕರ್ನಾಟಕದಲ್ಲಿ ಕನ್ನಡಕ್ಕೆ ಏಟಾಗಿಲ್ಲ. ಭಾಷೆಗೆ ಯಾವುದೇ ಧಕ್ಕೆಯಾಗಿಲ್ಲ. ಕರ್ನಾಟಕದ ಶಿವಸೇನೆ ಕನ್ನಡಕ್ಕೆ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ರು. ಕನ್ನಡ ಪರ ಸಂಘಟನೆಗಳ ವಿರೋಧ ತಪ್ಪಲ್ಲ. ಅವರನ್ನ ಕನ್ವಿನ್ಸ್ ಮಾಡ್ತೀವಿ. ಅಲ್ಲದೆ ರಾಜ್ಯದಲ್ಲಿ 50 ಕ್ಷೇತ್ರಗಳಲ್ಲಿ ಶಿವಸೇನೆ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದು, ನಾನು ಶೃಂಗೇರಿ, ವಿಜಯಪುರ, ತೇರದಾಳ ಕ್ಷೇತ್ರಗಳಲ್ಲಿ ಯಾವುದಾದರು ಒಂದರಲ್ಲಿ ಸ್ಪರ್ಧೆ ಮಾಡ್ತೀನಿ ಎಂದರು. ಇದನ್ನೂ ಓದಿ: ಮೋದಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿ ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟ ತೊಗಾಡಿಯಾ
Advertisement
Advertisement
ಇದೇ ವೇಳೆ ವಿಹೆಚ್‍ಪಿ ಮುಖಂಡ ಪ್ರವೀಣ್ ಭಾಯ್ ತೊಗಾಡಿಯಾ ಅವರ ಘಟನೆಯನ್ನು ಮುತಾಲಿಕ್ ಖಂಡಸಿದ್ದು, ಇವತ್ತು ಸಂಘ ಪರಿವಾರದ ಒಳಗಡೆಯೇ ಇದ್ದು ಎನ್ ಕೌಂಟರ್ ಮಾಡುವ ಸ್ಥಿತಿಗೆ ಬಂದಿದ್ದು ಆಘಾತಕಾರಿ ವಿಷಯ ಎಂದರು. ಪರಿವಾರದ ಒಳಗಡೆ ಇದ್ದುಕೊಂಡೇ ಅವರ ಮೇಲೆ ಷಡ್ಯಂತ್ರ ನಡೆಸಲಾಗುತ್ತಿದೆ. ಕಳೆದ 14 ವರ್ಷಗಳಲ್ಲಿ ಅವರು ಸಾಕಷ್ಟು ನೋವು, ಕಿರುಕುಳ ಅನುಭವಿಸಿದ್ದಾರೆ. ಅಲ್ಲದೆ ಅಂತರಾಷ್ಟ್ರೀಯ ಹಿಂದೂ ಮುಖಂಡನ ಕಣ್ಣಲ್ಲಿ ನೀರು ತರಿಸಿದ್ದಾರಲ್ಲಾ. ಇವರಿಗೆ ಮಾನ ಮರ್ಯಾದೆ ಇದೆಯಾ? ತೊಗಾಡಿಯಾ ಏನು ರೇಪಿಸ್ಟಾ? ಡ್ರಗ್ಗಿಸ್ಟಾ? ಉಗ್ರವಾದಿಯಾ? ಕೇಂದ್ರ ಸಾರ್ಕಾರ ಅವರನ್ನು ಹತ್ತಿಕ್ಕಲು ಈ ರೀತಿ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಅರೋಪ ಮಾಡಿದರು. ಇದನ್ನೂ ಓದಿ: ಕಾಣೆಯಾಗಿದ್ದ ಪ್ರವೀಣ್ ತೊಗಾಡಿಯಾ ಪಾರ್ಕ್ ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ, ಆಸ್ಪತ್ರೆಗೆ ದಾಖಲು
Advertisement
Advertisement
ಎನ್ ಕೌಂಟರ್ ಪ್ರಕರಣದ ಕುರಿತು ಸಂಪೂರ್ಣವಾಗಿ ತನಿಖೆಯಾಗಬೇಕು. ಪರಿವಾರದ ಒಳಗಡೆಯೇ ಹಿಂದೂವಾದವನ್ನು ಹತ್ತಿಕ್ಕಲಾಗುತ್ತಿದೆ. ತೊಗಾಡಿಯಾ ಅವರ ಕಣ್ಣಲ್ಲಿ ನೀರು ತರಿಸಿದ ಇವರಿಗೆ ಹಿಂದೂಗಳ ಶಾಪ ತಟ್ಟುತ್ತದೆ. 15 ದಿನಗಳ ಹಿಂದೆ ಒಡಿಶಾದ ಭುವನೇಶ್ವರದಲ್ಲಿ ಸಂಘ ಪರಿವಾರದ ಮೀಟಿಂಗ್ ಆಯ್ತು. ಆ ಮೀಟಿಂಗ್ ನಲ್ಲಿ ವಿಹೆಚ್‍ಪಿ ಅಂತರಾಷ್ಟ್ರೀಯ ಅಧ್ಯಕ್ಷ ರಾಘವಲು ಹಾಗೂ ಅಂತರಾಷ್ಟ್ರೀಯ ಕಾರ್ಯಾಧ್ಯಕ್ಷ ತೊಗಾಡಿಯಾ ಅವರನ್ನು ಆ ಸ್ಥಾನಗಳಿಂದ ತೆಗೆಯಲು ಷಡ್ಯಂತ್ರ ಮಾಡಲಾಗಿತ್ತು. ಅಧಿಕಾರದ ಮದ, ಅಧಿಕಾರದ ದರ್ಪದಿಂದ ಅವರಿಗೆ ಮಾನಸಿಕ ಕಿರುಕುಳ ಕೊಡಲಾಗುತ್ತಿದೆ. ತೊಗಾಡಿಯಾ ಅವರನ್ನು ಎನ್‍ಕೌಂಟರ್ ಮಾಡುವ ಷಡ್ಯಂತ್ರ ನಡೆಸಲಾಗುತ್ತಿದೆ ಎಂಬ ಗಂಭೀರ ಆರೋಪವನ್ನ ಪರೋಕ್ಷವಾಗಿ ಕೇಂದ್ರ ಸರ್ಕಾರದ ಮೇಲೆ ಮಾಡಿದರು.
20 ವರ್ಷದ ಹಳೆಯ ಪ್ರಕರಣಗಳನ್ನು ಅವರ ಮೇಲೆ ಹೊರಿಸಲಾಗುತ್ತಿದೆ. ಈ ಕೂಡಲೇ ಕೇಂದ್ರ ಸರ್ಕಾರ ಬೇಷರತ್ ಆಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ರಾಜಸ್ಥಾನದ ಮುಖ್ಯಮಂತ್ರಿ, ಗೃಹಮಂತ್ರಿಯೂ ಕೂಡ ಇದರಲ್ಲಿ ಶಾಮೀಲಾಗಿದ್ದಾರೆ. ತೊಗಾಡಿಯಾ ಅವರ ಜೊತೆಗೆ ಸಮಸ್ತ ಹಿಂದೂ ಸಮುದಾಯ ಇದೆ ಎಂದರು.