ನವದೆಹಲಿ: ದೇಶದ ಹೆಮ್ಮೆ ಮೊದಲ ಯುದ್ಧ ಸ್ಮಾರಕ ನಿರ್ಮಾಣದ ಎಂಬ ಹೆಗ್ಗಳಿಕೆಯನ್ನು ಪಡೆದಿರುವ ಮೋದಿ ಸರ್ಕಾರಕ್ಕೆ ಈ ಯೋಚನೆಯನ್ನು ನೀಡಿದವರು ಕರ್ನಾಟಕದ ಉಡುಪಿ ಜಿಲ್ಲೆಯ ಓಂಕಾರ್ ಎಂಬ ಕುತೂಹಲಕಾರಿ ಅಂಶ ರಿವೀಲ್ ಆಗಿದೆ.
ತಮ್ಮ ಆಡಳಿತಾವಧಿಯ ಅಂತಿಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಮೋದಿ ಈ ಬಗ್ಗೆ ಮಾಹಿತಿ ನೀಡಿದ್ದು, ಯುದ್ಧ ಸ್ಮಾರಕ ನಿರ್ಮಾಣದ ಕಾರ್ಯ ಪೂರ್ಣಗೊಂಡಿದೆ. ಈ ಯುದ್ಧ ಸ್ಮಾರಕ ನಿರ್ಮಾಣ ಮಾಡುವ ಆಲೋಚನೆಯನ್ನು ನೀಡಿದ್ದು, ಕರ್ನಾಟಕದ ಉಡುಪಿ ಮೂಲದವರಾದ ಓಂಕಾರ್ ಎಂಬವರು ಎಂದಿದ್ದಾರೆ.
ನರೇಂದ್ರ ಮೋದಿ ಆ್ಯಪ್ ನಲ್ಲಿ ಈ ಬಗ್ಗೆ ಓಂಕಾರ್ ಅವರು ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದರು. ದೇಶಕ್ಕಾಗಿ ತಮ್ಮ ಪ್ರಾಣ ಅರ್ಪಿಸಿದ ವೀರ ಯೋಧರ ನೆನಪಿಗಾಗಿ ಒಂದು ರಾಷ್ಟ್ರೀಯ ಸ್ಮಾರಕ ಇಲ್ಲ ಎನ್ನುವುದು ತಿಳಿದ ವೇಳೆ ಅಚ್ಚರಿ ಹಾಗೂ ದುಃಖ ಎರಡು ಆಯ್ತು. ಆಗ ಸ್ಮಾರಕ ನಿರ್ಮಾಣ ಮಾಡುವ ಕುರಿತು ನಿಶ್ಚಯ ಮಾಡಿದೆ. ಈಗ ಸ್ಮಾರಕ ನಿರ್ಮಾಣ ಕಾರ್ಯ ಪೂರ್ಣಗೊಂಡು ಉದ್ಘಾಟನೆ ಸಿದ್ಧವಾಗಿದ್ದು, ನನಗೆ ಬಹಳ ಖುಷಿ ನೀಡಿದೆ ಎಂದು ತಿಳಿಸಿದ್ದರು. ಇದನ್ನು ಓದಿ: 60 ವರ್ಷಗಳ ಕನಸು ನನಸು – ಲೋಕಾರ್ಪಣೆಗೊಳ್ಳಲಿದೆ ಯುದ್ಧ ಸ್ಮಾರಕ : ವಿಶೇಷತೆ ಏನು?
ಕಡಿಮೆ ಸಮಯದಲ್ಲಿ ಸ್ಮಾರಕ ನಿರ್ಮಾಣ ಕಾರ್ಯವನ್ನು ಸರ್ಕಾರ ಪೂರ್ಣಗೊಳಿಸಿದ್ದು, ದೇಶಕ್ಕಾಗಿ ಪ್ರಾಣ ಅರ್ಪಿಸಿದ ಯೋಧರಿಗೆ ಸ್ಮಾರಕ ಅರ್ಪಣೆ ಮಾಡುವುದಾಗಿ ನರೇಂದ್ರ ಮೋದಿ ಹೇಳಿದ್ದಾರೆ.
ಹುತ್ಮಾತ ಯೋಧರ ಸ್ಮಾರಕ ಇಂದು ಸೋಮವಾರ ಸಂಜೆ 5 ಗಂಟೆಗೆ ಉದ್ಘಾಟನೆ ಆಗಲಿದ್ದು, ಈ ಕಾರ್ಯಕ್ರಮಕ್ಕೆ ದೇಶದ ಮೂಲೆ ಮೂಲೆ ಇಂದ ಬಂದ ನಿವೃತ್ತ ಯೋಧರು ಸಾಕ್ಷಿಯಾಗಲಿದ್ದಾರೆ. ಅಲ್ಲದೇ ಪ್ರತಿದಿನ ದೇಶಕ್ಕಾಗಿ ಪ್ರಾಣ ಕೊಟ್ಟ ಯೋಧರಿಗೆ ಇಲ್ಲಿ ನಮನ ಸಲ್ಲಿಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾರ್ವಜನಿಕರು ಕೂಡ ಅವಕಾಶ ನೀಡಲಾಗುತ್ತದೆ. ಪುಲ್ವಾಮಾ ದಾಳಿ ಸಂದರ್ಭದಲ್ಲಿ ಯೋಧರನ್ನು ಕಳೆದುಕೊಂಡ ಇಂತಹ ಸಂದರ್ಭದಲ್ಲಿ 40 ಎಕರೆ ಪ್ರದೇಶದಲ್ಲಿ ನಿರ್ಮಾಣ ಆಗಿರುವ ಯೋಧರ ಸ್ಮಾರಕ ಉದ್ಘಾಟನೆ ಆಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv