ಹಾಸನ: ಇಲ್ಲಿನ (Hassan) ಲೋಕಸಭಾ ಕ್ಷೇತ್ರದ ಕಾಂಗ್ರೆಸ್ (Congress) ಅಭ್ಯರ್ಥಿ ಶ್ರೇಯಸ್ ಪಟೇಲ್ (Shreyas Patel) 41 ಕೋಟಿ ರೂ. ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ. ಇಂದು (ಸೋಮವಾರ) ನಾಮಪತ್ರ ಸಲ್ಲಿಕೆ ವೇಳೆ ಸಲ್ಲಿಸಿರುವ ಅಫಿಡವಿಟ್‍ನಲ್ಲಿ ತಮ್ಮ ಸ್ಥಿರ ಹಾಗೂ ಚರಾಸ್ತಿ ವಿವರವನ್ನು ಅವರು ದಾಖಲಿಸಿದ್ದಾರೆ.
1.25 ಲಕ್ಷ ರೂ. ನಗದು ಹೊಂದಿರುವ ಶ್ರೇಯಸ್, ವಿವಿಧ ಬ್ಯಾಂಕ್‍ಗಳಲ್ಲಿ 6.23 ಲಕ್ಷ ರೂ. ಮೊತ್ತದ ಠೇವಣಿ ಹೊಂದಿದ್ದಾರೆ. ಸ್ನೇಹಿತರು ಹಾಗೂ ಬಂಧುಗಳಿಂದ 50 ಲಕ್ಷ ರೂ. ಸಾಲ ಪಡೆದಿದ್ದಾರೆ. ಶ್ರೇಯಸ್ ತಮ್ಮ ಪತ್ನಿಗಿಂತ ಹೆಚ್ಚು ಚಿನ್ನಾಭರಣ ಹೊಂದಿದ್ದು, 59.65 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ ಅವರ ಬಳಿ ಇದೆ. ಎಲ್ಲಾ ಸೇರಿ ಒಟ್ಟು 1.49 ಕೋಟಿ ರೂ. ಮೌಲ್ಯದ ಚರಾಸ್ತಿಯನ್ನು ಹೊಂದಿದ್ದಾರೆ. ಇನ್ನೂ 20 ಎಕರೆ ಕೃಷಿ ಭೂಮಿಯನ್ನೂ ಸಹ ಹೊಂದಿದ್ದಾರೆ. ಇದನ್ನೂ ಓದಿ: 410 ಕೋಟಿ ಒಡೆಯ ಸ್ಟಾರ್ ಚಂದ್ರು ಹೆಸರಲ್ಲಿ ಒಂದೇ ಒಂದು ಕಾರಿಲ್ಲ
Advertisement
Advertisement
ಬೆಂಗಳೂರು ಹಾಗೂ ಹೊಳೆನರಸೀಪುರದ ವಿವಿಧೆಡೆ ಕೃಷಿಯೇತರ ಭೂಮಿ ಹೊಂದಿದ್ದು, ಒಟ್ಟು 39.58 ಕೋಟಿ ರೂ. ಮೌಲ್ಯದ ಕೃಷಿಯೇತರ ಭೂಮಿ ಹಾಗೂ ವಾಣಿಜ್ಯ ಕಟ್ಟಡದ ಮಾಲೀಕರಾಗಿದ್ದಾರೆ. ಪತ್ನಿ ಹೆಸರಿನಲ್ಲಿ ಬೆಂಗಳೂರಿನಲ್ಲಿ 1.36 ಕೋಟಿ ರೂ. ಬೆಲೆ ಬಾಳುವ ಒಂದು ನಿವೇಶನ ಹಾಗೂ ಮನೆ ಹೊಂದಿದ್ದಾರೆ. ಒಂದು ಇನ್ನೋವಾ ಕಾರು, ಒಂದು ಟ್ರ್ಯಾಕ್ಟರ್ ಹೊಂದಿದ್ದಾರೆ. ತಮ್ಮ ಬಳಿ 65 ಸಾವಿರ ರೂ. ಮೌಲ್ಯದ ಮೊಬೈಲ್ ಹಾಗೂ ಪತ್ನಿ ಬಳಿ 55 ಸಾವಿರ ರೂ. ಬೆಲೆಯ ಮೊಬೈಲ್ ಇದೆ ಎಂದು ಅಫಿಡವಿಟ್‍ನಲ್ಲಿ ಘೋಷಣೆ ಮಾಡಿಕೊಂಡಿದ್ದಾರೆ.
Advertisement
Advertisement
ಅವರ ಪತ್ನಿ ಅಕ್ಷತಾ ಹೆಸರಿನಲ್ಲೂ ಕೋಟಿ ಬೆಲೆಬಾಳುವ ಸ್ಥಿರ ಹಾಗೂ ಚರಾಸ್ತಿ ಇದ್ದು, 3.94 ಲಕ್ಷ ರೂ. ನಗದು ಹಣ ಇದೆ. ಅಕ್ಷತಾ ಅವರ ತಾಯಿ ಅನುಪಮಾ ಅವರಿಂದ 3.64 ಲಕ್ಷ ರೂ. ಹಾಗೂ ವ್ಯಕ್ತಿಯೊಬ್ಬರಿಂದ 88 ಲಕ್ಷ ರೂ. ಸಾಲ ಪಡೆದಿದ್ದಾರೆ. ಹಾಗೆಯೇ 22 ಲಕ್ಷ ರೂ. ಬೆಲೆ ಬಾಳುವ 450 ಗ್ರಾಂ ಚಿನ್ನಾಭರಣ ಹಾಗೂ 1 ಕೆಜಿ ಬೆಳ್ಳಿ, 31,14,917 ರೂ. ಮೌಲ್ಯದ ಚರಾಸ್ತಿ ಒಡತಿಯಾಗಿದ್ದಾರೆ. ಒಟ್ಟು 1.68 ಕೋಟಿ ಚರ ಮತ್ತು ಸ್ಥಿರಾಸ್ತಿ ಇದೆ. ಇದನ್ನೂ ಓದಿ: 2019ರ ಲೋಕಸಭಾ ಚುನಾವಣೆಯಲ್ಲಿ ಏನಾಗಿತ್ತು? – ಗೆದ್ದವರು ಯಾರು? ಸೋತವರು ಯಾರು? – ಇಲ್ಲಿದೆ ಸಂಪೂರ್ಣ ಮಾಹಿತಿ