ಸ್ನೇಹಿತರು ಒಬ್ಬರಿಗೊಬ್ಬರು ಟ್ವೀಟ್ ಮಾಡಬಾರದೇ – ಅಭಿಮಾನಿಗಳಲ್ಲಿ ಶ್ರೇಯಾ ಪ್ರಶ್ನೆ

Public TV
2 Min Read
Shreya Ghoshal AND Parag Agarwal 1

ನವದೆಹಲಿ: ಹತ್ತು ವರ್ಷಗಳ ಹಿಂದೆ ನಾವೆಲ್ಲಾ ಮಕ್ಕಳಾಗಿದ್ದೆವು. ಸ್ನೇಹಿತರು ಒಬ್ಬರಿಗೊಬ್ಬರು ಟ್ವೀಟ್ ಮಾಡಬಾರದಾ ಎಂದು ಶ್ರೇಯಾ ಘೋಷಾಲ್ ಅಭಿಮಾನಿಗಳಲ್ಲಿ ಪ್ರಶ್ನಿಸಿದ್ದಾರೆ.

Shreya Ghoshal AND Parag Agarwal

ಗಾಯಕಿ ಶ್ರೇಯಾ ಘೋಷಾಲ್ ಅವರ ಹಳೆಯ ಟ್ವೀಟ್ ಒಂದು ಇತ್ತೀಚೆಗೆ ವೈರಲ್ ಆದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಟ್ವಿಟ್ಟರ್ ಸಂಸ್ಥೆಯ ಹೊಸ ಸಿಇಒ ಪರಾಗ್ ಅಗರ್ವಾಲ್ ಅವರೊಂದಿಗೆ ಹಂಚಿಕೊಂಡಿದ್ದ ಪೋಸ್ಟ್ ಇತ್ತೀಚೆಗೆ ವೈರಲ್ ಆಗುತ್ತಿದ್ದು, ಶ್ರೆಯಾ ನಾವು ಆ ಸಮಯದಲ್ಲಿ ಮಕ್ಕಳಾಗಿದ್ದೆವು ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶದ ಸರ್ಕಾರಿ ನೌಕರರು, ವಕೀಲರಿಗೆ 1 ರೂ.ಗೆ ಸಿಗಲಿದೆ ಮನೆ

ಹೊಸ ಟ್ವಿಟ್ಟರ್ ಸಿಇಒ ಪರಾಗ್ ಅಗರ್ವಾಲ್ ಅವರೊಂದಿಗೆ ಶ್ರೇಯಾ ಅವರ ಸಂಬಂಧವನ್ನು ನೆಟ್ಟಿಗರು ಅಗೆದು ಹಾಕುತ್ತಿರುವ ಹಿನ್ನೆಲೆಯಲ್ಲಿ ಗಾಯಕಿ ಸ್ಪಷ್ಟನೆ ನೀಡಿದ್ದಾರೆ. 2010ರಲ್ಲಿ ಮೈಕ್ರೋಬ್ಲಾಗಿಂಗ್ ಸೈಟ್ ಹುಟ್ಟಿಕೊಂಡಾಗ ನಾವು ಕೇವಲ ಮಕ್ಕಳು ಎಂದು ಟ್ವೀಟ್ ಮಾಡಿದ್ದಾರೆ.

ಅರೇ.. ನೀವೆಲ್ಲಾ ಹಳೆಯ ಟ್ವೀಟ್‍ಗಳನ್ನು ತೆಗೆಯುತ್ತಿದ್ದೀರಾ! ಆಗಷ್ಟೇ ಟ್ವಿಟ್ಟರ್ ಹುಟ್ಟಿಕೊಂಡಿತ್ತು. ಹತ್ತು ವರ್ಷಗಳ ಹಿಂದೆ ನಾವೆಲ್ಲಾ ಮಕ್ಕಳಾಗಿದ್ದೆವು. ಸ್ನೇಹಿತರು ಒಬ್ಬರಿಗೊಬ್ಬರು ಟ್ವೀಟ್ ಮಾಡಬಾರದಾ? ಇದೆಂಥಾ ಟೈಂ ಪಾಸ್ ನಡೆಯುತ್ತಿದೆ (ಅರೆ ಯಾರ್ ತುಮ್ ಲೋಗ್ ಕಿತ್ನಾ ಬಚ್ಪನ್ ಕಾ ಟ್ವೀಟ್ಸ್ ನಿಕಾಲ್ ರಹೇ ಹೋ! ಟ್ವಿಟ್ಟರ್ ಹ್ಯಾಡ್ ಜಸ್ಟ್ ಲಾಂಚ್ಡ್. 10 ಇಯರ್ಸ್ ಪೆಹೆಲೆ! ವೀ ವೇರ್ ಕಿಡ್ಸ್! ದೋಸ್ತ್ ಏಕ್ ದೂಸ್ರೆ ಕೊ ಟ್ವೀಟ್ ನಹಿ ಕರ್‍ತೆ ಕ್ಯಾ? ಕ್ಯಾ ಟೈಮ್ ಪಾಸ್ ಚಲ್ ರಹಾ ಹೆ ಯಹಾ) ಎಂಬ ತಮಾಷೆಯಾಡಿದ್ದಾರೆ.

ಸೋಮವಾರ ಟ್ವಿಟ್ಟರ್ ಸಿಇಒ ಆಗಿ ನೇಮಕವಾಗಿದ್ದಕ್ಕೆ ಸ್ನೇಹಿತ ಪರಾಗ್ ಅಗರ್ವಾಲ್ ಅವರನ್ನು ಶ್ರೇಯಾ ಅಭಿನಂದಿಸಿದ್ದರು. ಇದಾದ ಬಳಿಕ ಇವರಿಬ್ಬರು ಸ್ನೇಹಿತರು ಎಂಬ ವಿಚಾರದ ಜೊತೆ ಹಳೇಯ ಟ್ವೀಟ್‍ಗಳು ವೈರಲ್ ಆಗಿದ್ದವು.ಇದಾದ ಒಂದು ದಿನದ ಬಳಿಕ ಶ್ರೇಯಾ ಪ್ರತಿಕ್ರಿಯೆ ನೀಡಿದ್ದಾರೆ.

ನೆಟ್ಟಿಗರು ಶ್ರೇಯಾ ಅವರ ಹಳೆಯ ಟ್ವೀಟ್‍ಗಳನ್ನು ಹುಡುಕುವ ಮೂಲಕ ಅವರಿಬ್ಬರ ನಡುವಿನ ಗೆಳೆತನವನ್ನು ಕಂಡುಕೊಂಡಿದ್ದಾರೆ. 2010ರ ಒಂದು ಟ್ವೀಟ್‍ನಲ್ಲಿ ಶ್ರೇಯಾ ಪರಾಗ್ ಅವರನ್ನು ಬಚ್ಪನ್ ಕಾ ದೋಸ್ತ್ (ಬಾಲ್ಯದ ಗೆಳೆಯ) ಎಂದು ಕರೆದಿದ್ದರು. ಇದನ್ನೂ ಓದಿ: ಫೇಮಸ್ ಆಯ್ತು ಅಗರವಾಲ್ ಮೀಮ್ಸ್

ಪರಾಗ್ ಅಗರ್ವಾಲ್ ಸೋಮವಾರ ಟ್ವಿಟ್ಟರ್ ಸಿಇಒ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಶ್ರೇಯಾ, ಅವರ ಪತಿ ಶಿಲಾದಿತ್ಯ, ಪರಾಗ್ ಅಗರ್ವಾಲ್, ಅವರ ಪತ್ನಿ ವಿನೀತ ಒಟ್ಟಿಗೆ ಸುತ್ತಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿದೆ.

Share This Article
Leave a Comment

Leave a Reply

Your email address will not be published. Required fields are marked *