ಹೈದರಾಬಾದ್: ನನಗೆ ಮಕ್ಕಳು ಬೇಡ ಎಂದು ನಿರ್ಧಾರ ಮಾಡಿರುವುದಾಗಿ ಬಹುಭಾಷಾ ನಟಿ ಶ್ರದ್ಧಾ ಶ್ರೀನಾಥ್ ತಿಳಿಸಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಮಾತನಾಡಿ, ನನ್ನ ಅಜ್ಜ-ಅಜ್ಜಿಯರಿಗೆ 15 ಮಂದಿ ಮಕ್ಕಳು. ನಮ್ಮ ಪೋಷಕರಿಗೆ ಇಬ್ಬರು ಮಕ್ಕಳಿದ್ದೇವೆ. ಆದರೆ ನಾನು ಮಕ್ಕಳೇ ಬೇಡ ಎಂಬ ನಿರ್ಣಯ ತೆಗೆದುಕೊಂಡಿದ್ದಾಗಿ ಅವರು ಹೇಳಿದರು. ತನ್ನ ರೀತಿ ಯಾರೂ ನಿರ್ಣಯ ಕೈಗೊಳ್ಳಬೇಡಿ ಎಂದು ಇದೇ ವೇಳೆ ಮನವಿ ಕೂಡ ಮಾಡಿಕೊಂಡಿರುವ ನಟಿ, ನನ್ನ ನಿರ್ಣಯದಂತೆ ನೀವು ತೀರ್ಮಾನ ತೆಗೆದುಕೊಳ್ಳಬೇಡಿ. ನನ್ನ ಜ್ಞಾನ, ಶಿಕ್ಷಣ ಮೇಲೆ ನಾನು ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ಕಾಲ ಬದಲಾಗುತ್ತಿದ್ದರೂ ಮಹಿಳೆಯರ ಮೇಲಿನ ಸಮಾಜದ ದೃಷ್ಠಿ ಮಾತ್ರ ಬದಲಾಗಿಲ್ಲ. ಮಹಿಳೆಯರ ಮೇಲೆ ಅತ್ಯಾಚಾರ ಮಾಡುವುದು ಮಾತ್ರ ಅಪರಾಧವಲ್ಲ. ಇಂದಿಗೂ ಹೆಣ್ಣು ಮಕ್ಕಳು ಪೊಲೀಸ್ ಠಾಣೆಗೆ ತೆರಳಿ ತಮ್ಮ ವಿರುದ್ಧ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ದೂರು ನೀಡಲು ಹಿಂಜರಿಯುತ್ತಿದ್ದಾರೆ. ಅಲ್ಲದೆ ನ್ಯಾಯಾಲಯದಲ್ಲೂ ಇಂತಹ ಪ್ರಕರಣದಲ್ಲಿ ತೀರ್ಪು ಬರುವುದು ಕೂಡ ತಡವಾಗುತ್ತಿದೆ. ಶೋಷಣೆಗೆ ಒಳಗಾದ ಮಹಿಳೆ, ಹೆಣ್ಣು ಮಕ್ಕಳ ಬಳಿ ನಡೆದುಕೊಳ್ಳುವ ರೀತಿಯೂ ಬದಲಾಗಬೇಕಿದೆ ಎಂದು ನಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಮಿಳು, ತೆಲುಗು ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸುವ ಮೂಲಕ ಬಹು ಬೇಡಿಕೆಯ ನಟಿಯಾಗಿರುವ ಶ್ರದ್ಧಾ ಶ್ರೀನಾಥ್ ಅವರು, ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಮಾತನಾಡಿದ್ದಾರೆ. ಶ್ರದ್ಧಾ ಶ್ರೀನಾಥ್, ತಮಿಳು ನಟ ವಿಜಯ್ ಸೇತುಪತಿ ನಟಿಸಿರುವ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿ ಉತ್ತಮ ಪ್ರಶಂಸೆ ಪಡೆದಿತ್ತು. ಸಿನಿಮಾದಲ್ಲಿ ಶ್ರದ್ಧಾರ ನಟನೆ ಮೆಚ್ಚುಗೆಗೆ ಪಾತ್ರವಾಗಿತ್ತು.