ಶ್ರದ್ಧಾ ಕೊಲೆ ಆಕಸ್ಮಿಕ, ಇದರಲ್ಲಿ ಹೊಸದೇನಿಲ್ಲ- ಅಶೋಕ್ ಗೆಹ್ಲೋಟ್ ವಿವಾದಿತ ಹೇಳಿಕೆಗೆ ಬಿಜೆಪಿ ಕಿಡಿ

Public TV
2 Min Read
Ashok Gehlot

ಜೈಪುರ: ದೆಹಲಿಯಲ್ಲಿ ನಡೆದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣ (Shraddha Walkar murder case) ಅದರ ಭೀಕರ ಹಾಗೂ ಭಯಾನಕ ವಿವರಗಳಿಂದ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಆದರೆ ರಾಜಸ್ಥಾನದ ಮುಖ್ಯಮಂತ್ರಿ (Rajasthan CM) ಅಶೋಕ್ ಗೆಹ್ಲೋಟ್ (Ashok Gehlot) ಶ್ರದ್ಧಾ ಹತ್ಯೆ ಆಕಸ್ಮಿಕವಾದುದು, ಇದರಲ್ಲಿ ಹೊಸದೇನಿಲ್ಲ ಎಂದು ಹೇಳಿಕೆ ನೀಡಿದ್ದು, ಇದೀಗ ಭಾರೀ ಟೀಕೆಗೆ ಗುರಿಯಾಗಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅಶೋಕ್ ಗೆಹ್ಲೋಟ್, ಶ್ರದ್ಧಾ ಹತ್ಯೆ ಪ್ರಕರಣ ಒಂದು ಆಕಸ್ಮಿಕವಾಗಿದೆ. ಇದು ಸಾಮಾನ್ಯವಾಗಿದ್ದು, ಹೊಸದೇನೂ ಇದರಲ್ಲಿ ಇಲ್ಲ. ಶತಮಾನಗಳಿಂದಲೂ ಅಂತರ್ಜಾತಿ, ಅಂತರ್ ಧರ್ಮದ ಹೆಸರಿನಲ್ಲಿ ವಿವಾಹಗಳು ನಡೆಯುತ್ತಿವೆ. ಇದರಲ್ಲಿ ಹೊಸದೇನಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

delhi murder 3

ಬಿಜೆಪಿಯವರು (BJP) ಒಂದು ಸಮುದಾಯ, ಒಂದು ಧರ್ಮವನ್ನು ಗುರಿಯಾಗಿಸಿಕೊಂಡಿದ್ದೀರಿ. ಅದರ ಆಧಾರದ ಮೇಲೆ ನಿಮ್ಮ ರಾಜಕೀಯ ದೇಶದೊಳಗೆ ನಡೆಯುತ್ತಿದೆ. ನೀವು ಅದರ ಪ್ರಯೋಜನಗಳನ್ನು ಪಡೆಯುತ್ತೀರಿ. ಜನರನ್ನು ಒಟ್ಟುಗೂಡಿಸುವುದು, ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಗುಂಪುಗಳನ್ನು ಸೃಷ್ಟಿಸುವುದು ತುಂಬಾ ಸುಲಭ. ಬೆಂಕಿ ಹಚ್ಚುವುದು ಸುಲಭವಾದರೆ, ಆ ಬೆಂಕಿಯನ್ನು ನಂದಿಸುವುದು ತುಂಬಾ ಕಷ್ಟ. ಕಟ್ಟಡ ನಿರ್ಮಿಸಲು ತುಂಬಾ ಸಮಯ ಹಿಡಿಯುತ್ತದೆ. ಆದರೆ ಅದನ್ನು ಕೆಡವಲು ಕೇವಲ ಅರ್ಧ ಗಂಟೆ ಸಾಕು ಎಂದು ಬಿಜೆಪಿಯನ್ನು ಟೀಕಿಸಿದ್ದಾರೆ. ಇದನ್ನೂ ಓದಿ: ವೋಟರ್‌ಗೇಟ್‌ ಹಗರಣಕ್ಕೆ ಅಡ್ಡ ಆಗಿತ್ತಾ ಪ್ರಭಾವಿ ಶಾಸಕರ ಕಚೇರಿ?

ಅಶೋಕ್ ಗೆಹ್ಲೋಟ್ ಅವರು ಶ್ರದ್ಧಾ ಹತ್ಯೆ ಪ್ರಕರಣದ ಬಗ್ಗೆ ಬೇಜವಾಬ್ದಾರಿತನದ ಹೇಳಿಕೆ ನೀಡಿರುವುದಕ್ಕೆ ಬಿಜೆಪಿ ಕೆಂಡಾಮಂಡಲವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್ ಪೂನಿಯಾ ಗೆಹ್ಲೋಟ್ ಹೇಳಿಕೆಯನ್ನು ಕಟುವಾಗಿ ಟೀಕಿಸಿದ್ದಾರೆ.

ashok gehlot 1

ಈ ಘಟನೆಯು ಮನಸ್ಥಿತಿಯ ಕದನವಾಗಿದೆ. ಇದು ಆಲೋಚನೆಗಳ ಯುದ್ಧವಾಗಿದೆ. ಲವ್ ಜಿಹಾದ್, ಧಾರ್ಮಿಕ ಪರಿವರ್ತನೆಗಳನ್ನು ಯೋಜಿತ ಪಿತೂರಿಯ ಮೂಲಕ ಮಾಡಲಾಗುತ್ತದೆ. ಇದರಿಂದ ಅತಿ ಹೆಚ್ಚು ಪರಿಣಾಮ ಬೀರಿರುವುದೇ ರಾಜಸ್ಥಾನದಲ್ಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ದಿಢೀರ್ ಕಾಂಗ್ರೆಸ್‌ಗೆ ಗುಡ್‌ಬೈ – 300ಕ್ಕೂ ಹೆಚ್ಚು ಕಾರ್ಯಕರ್ತರು BJP ಸೇರ್ಪಡೆ

ಅಫ್ತಾಬ್ ಪೂನಾವಾಲನೊಂದಿಗೆ (Aftab Poonawala) ಲಿವ್‌ಇನ್ ರಿಲೇಶನ್‌ನಲ್ಲಿದ್ದ ಶ್ರದ್ಧಾ ವಾಕರ್ ಮೇ 18 ರಂದು ಕೊಲೆಯಾಗಿದ್ದಳು. ಅಫ್ತಾಬ್ ಶ್ರದ್ಧಾ ಕತ್ತನ್ನು ಹಿಸುಕಿ ಕೊಂದಿದ್ದು, ಬಳಿಕ ಆಕೆಯ ಮೃತ ದೇಹವನ್ನು 35 ತುಂಡುಗಳನ್ನಾಗಿ ಕತ್ತರಿಸಿ ದೆಹಲಿಯಾದ್ಯಂತ ಕಾಡುಗಳಲ್ಲಿ ಹೂತುಹಾಕಿದ್ದ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *