ಚೆನ್ನೈ: ಭಾರತದ ಯಾವುದೇ ರಚನೆಗೆ ಹಾನಿಯಾಗಿರುವ ಬಗ್ಗೆ ಒಂದೇ ಒಂದು ಫೋಟೋವನ್ನ ತೋರಿಸಲಿ. ವಿದೇಶಿ ಮಾಧ್ಯಮಗಳು (Foreign Media) ಪಾಕಿಸ್ತಾನ ಹೇಳಿದ್ದನ್ನೇ ಮಾಡಿ ಬರೀ ಸುಳ್ಳು ಸುದ್ದಿಗಳನ್ನೇ ಬಿತ್ತರಿಸಿವೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ (Ajit Doval) ಕಿಡಿಕಾರಿದ್ದಾರೆ.
#WATCH | Chennai, Tamil Nadu | Speaking on Operation Sindoor, at IIT Madras, NSA Ajit Doval slams the foreign media for their reportage on the operation.
“Foreign press said that Pakistan did that and this…You tell me one photograph, one image, which shows any damage to any… pic.twitter.com/v13Pr8RuRf
— ANI (@ANI) July 11, 2025
ತಮಿಳುನಾಡಿನ ಐಐಟಿ ಮದ್ರಾಸ್‌ನಲ್ಲಿ (IIT Madras) ನಡೆದ 62ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ದೋವಲ್, ಆಪರೇಷನ್ ಸಿಂಧೂರ (Operation Sindoor) ಕಾರ್ಯಾಚರಣೆಯ ಬಗ್ಗೆ ವಿದೇಶಿ ಮಾಧ್ಯಮಗಳು ಮಾಡಿದ ವರದಿಯನ್ನ ತೀವ್ರವಾಗಿ ಖಂಡಿಸಿದರು. ವಿದೇಶಿ ಮಾಧ್ಯಮಗಳು ಭಾರತೀಯ ಯಾವುದೇ ರಚನೆಗೆ ಹಾನಿಯಾಗಿರುವುದನ್ನು ತೋರಿಸುವಲ್ಲಿ ವಿಫಲವಾಗಿವೆ. ಬರೀ ಸುಳ್ಳು ಸುದ್ದಿಗಳನ್ನೇ ಹರಡಿವೆ ಎಂದು ವಾಗ್ದಾಳಿ ನಡೆಸಿದರಲ್ಲೇ ಭಾರತಕ್ಕೆ (India) ಯಾವುದೇ ಹಾನಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಕೊನೆಗೂ ಭಾರತಕ್ಕೆ ಬಂತು ಟೆಸ್ಲಾ| ಮುಂದಿನ ವಾರ ಶೋರೂಂ ಓಪನ್ – EV ಕಾರಿನ ಬೆಲೆ ಎಷ್ಟು?
ಮೇ 7ರ ಮಧ್ಯರಾತ್ರಿ ಭಾರತೀಯ ಸೇನಾಪಡೆಗಳ (Indian Armed Force) ಕಾರ್ಯಾಚರಣೆಯನ್ನು ಶ್ಲಾಘಿಸಿದ ದೋವಲ್, ನಮ್ಮ ಸಶಸ್ತ್ರ ಪಡೆಗಳು ನಿಖರ ಗುರಿಗಳನ್ನು ಹೊರತುಪಡಿಸಿ ಬೇರೆಲ್ಲಿಯೂ ದಾಳಿ ಮಾಡಲಿಲ್ಲ. ಶತ್ರು ಪ್ರದೇಶದಲ್ಲಿರುವ ಭಯೋತ್ಪಾದಕ ಶಿಬಿರಗಳ ಮೇಲಷ್ಟೇ ದಾಳಿ ಮಾಡಿದವು. ಭಾರತದ ಈ ಪ್ರತೀಕಾರದ ದಾಳಿಯಲ್ಲಿ 100ಕ್ಕೂ ಹೆಚ್ಚು ಉಗ್ರರು ಹತರಾದರು. 23 ನಿಮಿಷಗಳ ಕಾಲ ಸಂಪೂರ್ಣ ಕಾರ್ಯಾಚರಣೆ ನಡೆದಿತ್ತು ಎಂದು ತಿಳಿಸಿದರು. ಇದನ್ನೂ ಓದಿ: ಟೆನ್ನಿಸ್ ತಾರೆಯ ಕೊಲೆಗೆ ಸ್ಫೋಟಕ ಟ್ವಿಸ್ಟ್ – ಮ್ಯೂಸಿಕ್ ಆಲ್ಬಂಗೆ ಸಿಟ್ಟಾಗಿ ಮಗಳ ಹತ್ಯೆ?
ವಿದೇಶಿ ಮಾಧ್ಯಮಗಳು ಪಾಕಿಸ್ತಾನ (Pakistan) ಹೇಳಿದ ಹಾಗೆ ಮಾಡಿವೆ. ಭಾರತ ರಚನೆಗಳಿಗೆ ಹಾನಿಯಾಗಿರುವ ಬಗ್ಗೆ ಒಂದೇ ಒಂದು ಫೋಟೋ ನನಗೆ ತೋರಿಸಲಿ. ಒಂದೇ ಒಂದು ಗಾಜನ್ನು ಸಹ ಒಡೆದಿಲ್ಲ. ವಿದೇಶಿ ಮಾಧ್ಯಮಗಳು ಹಲವು ವಿಷಯಗಳನ್ನ ಪ್ರಕಟಿಸಿವೆ. ಕೆಲವು ಆಯ್ದ ಚಿತ್ರಗಳ ಆಧಾರದ ಮೇಲೆ ಅವರು ಪಾಕಿಸ್ತಾನದ 13 ವಾಯುನೆಲೆಗಳ ಬಗ್ಗೆ ಹಲವು ವಿಷಯಗಳನ್ನ ಹೇಳಿದ್ದಾರೆ. ಆದ್ರೆ ಮೇ 10ರ ಮೊದಲು ಮತ್ತು ನಂತರ ಪಾಕಿಸ್ತಾನದ ಸರ್ಗೋಧಾ, ರಹೀಮ್ ಯಾರ್ ಖಾನ್, ಚಕ್ಲಾಲಾ ಸೇರಿದಂತೆ 13 ವಾಯುನೆಲೆಗಳ ಉಪಗ್ರಹ ಚಿತ್ರಗಳನ್ನು ನೋಡಿದ್ರೆ ಎಲ್ಲವೂ ಸ್ಪಷ್ಟವಾಗುತ್ತದೆ. ಈ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ವಾಯುನೆಲೆಗಳಿಗೆ ಹಾನಿಯಾಗಿರೋದು ಸ್ಪಷ್ಟವಾಗಿದೆ ಎಂದು ಅವರು ವಿವರಿಸಿದರು.
ಮೇ 14 ರಂದು ಪ್ರಕಟವಾದ ಲೇಖನದಲ್ಲಿ ಭಾರತೀಯ ಕ್ಷಿಪಣಿ ದಾಳಿಯಲ್ಲಿ ಪಾಕಿಸ್ತಾನದ ವಾಯುನೆಲೆಗಳು ಹಾನಿಗೊಳಗಾಗಿವೆ ಎಂಬುದನ್ನು ನ್ಯೂಯಾರ್ಕ್ ಟೈಮ್ಸ್ ಒಪ್ಪಿಕೊಂಡಿದೆ. ದಾಳಿಯ ಮೊದಲು ಮತ್ತು ನಂತರದ ಹೈ-ರೆಸಲ್ಯೂಶನ್ ಉಪಗ್ರಹ ಚಿತ್ರಗಳು ಇದಕ್ಕೆ ಕನ್ನಡಿ ಹಿಡಿದಿವೆ ಎಂದು ಹೇಳಿದರು. ಇದನ್ನೂ ಓದಿ: ಕೆನಡಾ ಮೇಲೆ 35% ಸುಂಕ ವಿಧಿಸಿದ ಟ್ರಂಪ್ – ಪ್ರತೀಕಾರಕ್ಕೆ ಮುಂದ್ರಾದ್ರೆ ಇನ್ನಷ್ಟು ಸುಂಕ ವಿಧಿಸುವುದಾಗಿ ವಾರ್ನಿಂಗ್
ಮುಂದುವರಿದು… ತಂತ್ರಜ್ಞಾನ ಮತ್ತು ಯುದ್ಧದ ನಡುವಿನ ಸಂಬಂಧ ಯಾವಾಗಲೂ ಮುಖ್ಯ. ಆಪರೇಷನ್ ಸಿಂಧೂರದ ಬಗ್ಗೆ ನಮಗೆ ಹೆಮ್ಮೆ ಇದೆ. ಈ ಕಾರ್ಯಾಚರಣೆಯ ಸಮಯದಲ್ಲಿ ನಾವು ಸ್ಥಳೀಯ ತಂತ್ರಜ್ಞಾನವನ್ನೇ ಬಳಸಿದ್ದೇವೆ ಅನ್ನೋದು ಮತ್ತೊಂದು ಹೆಮ್ಮೆ. ಗಡಿಯಾಚೆಗಿನ 9 ಉಗ್ರ ನೆಲೆಗಳ ಮೇಲೆ ದಾಳಿ ಮಾಡಲು ನಾವು ನಿರ್ಧರಿಸಿದ್ದೆವು. ಅದರಂತೆ ನಮ್ಮ ಎಲ್ಲಾ ಗುರಿಗಳು ನಿಖರವಾಗಿದ್ದವು ಎಂದು ಶ್ಲಾಘಿಸಿದರಲ್ಲದೇ, ಭಾರತವು ಅಂತಹ ತಂತ್ರಜ್ಞಾನವನ್ನು ಇನ್ನಷ್ಟು ಅಭಿವೃದ್ಧಿಪಡಿಸಬೇಕಾಗಿದೆ ಎಂದು ಸಲಹೆ ನೀಡಿದರು.