– ಶಿಸ್ತು ಕ್ರಮಕ್ಕೆ ಮುಂದಾದ ಕಾಂಗ್ರೆಸ್
ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಶತಾಯಗತಾಯ ಶಿಸ್ತು ಕ್ರಮದ ಚಾಟಿ ಬೀಸಲೇಬೇಕು ಎಂಬ ತೀರ್ಮಾನಕ್ಕೆ ಕಾಂಗ್ರೆಸ್ ನಾಯಕರು ಬಂದಿದ್ದಾರೆ. ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಎರಡು ಬಣದಲ್ಲಿ ಒಬ್ಬೊಬ್ಬರ ಟಾರ್ಗೆಟ್ ಮಾಡಿ ನೋಟಿಸ್ ನೀಡುವುದು ಬಹುತೇಕ ಫಿಕ್ಸ್ ಎನ್ನಲಾಗಿದೆ.
ಸಿದ್ದರಾಮಯ್ಯ ಬಣದಲ್ಲಿ ಸಚಿವರೊಬ್ಬಗೆ ಮತ್ತು ಡಿಕೆಶಿ ಬಣದ ಶಾಸಕರೊಬ್ಬರಿಗೆ ಶೋಕಾಸ್ ನೋಟಿಸ್ ಫಿಕ್ಸ್ ಎನ್ನಲಾಗುತ್ತಿದೆ. ವಾರದೊಳಗೆ ಇಬ್ಬರಿಗೂ ನೋಟಿಸ್ ಕಳುಹಿಸುವ ಸಾಧ್ಯತೆಯಿದೆ. ಇದನ್ನೂ ಓದಿ: ಬೀದರ್ | ಕನ್ನಡ ಕೃಷಿ ಡಿಪ್ಲೊಮಾ ಕೋರ್ಸ್ ಬಂದ್
Advertisement
Advertisement
ಕಾಂಗ್ರೆಸ್ ಅಂತರಿಕ ಭಿನ್ನಾಭಿಪ್ರಾಯಕ್ಕೆ ಮದ್ದು ಅರೆಯಲು ಶೀಘ್ರ ಶಾಸಕಾಂಗ ಪಕ್ಷದ ಸಭೆ ಕರೆಯಲು ಎಐಸಿಸಿಯಿಂದಲೇ (AICC) ಸೂಚನೆ ಬಂದಿದೆ. ಜುಲೈ ಎರಡನೇ ವಾರದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯುವ ಸಾಧ್ಯತೆಯಿದ್ದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಭಾಗವಹಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಉದ್ಯಮಿ ವಿಜಯ್ ಮಲ್ಯ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್
Advertisement
ಹೈಕಮಾಂಡ್ ಸಂದೇಶವನ್ನು ಎಐಸಿಸಿ ನಾಯಕರ ಮೂಲಕವೇ ಶಾಸಕರು ಹಾಗೂ ಸಚಿವರಿಗೆ ಹೇಳಿಸುವುದು ಎಐಸಿಸಿ ಲೆಕ್ಕಾಚಾರ ಎನ್ನಲಾಗಿದೆ. ಅಧಿವೇಶನಕ್ಕೆ ಮೊದಲೇ ಬೆಂಗಳೂರಿನಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆದು ಸಚಿವ ಶಾಸಕರಿಗೆ ಶಿಸ್ತಿನ ಪಾಠ ಹೇಳಲು ಎಐಸಿಸಿ ತೀರ್ಮಾನಿಸಲಾಗಿದೆ ಎನ್ನಲಾಗಿದೆ.
Advertisement