ಬೆಂಗಳೂರು: ಸದನದಲ್ಲಿ ಶಾಸಕರ ಪ್ರಶ್ನೆಗೆ ಉತ್ತರ ನೀಡದ ಹಿನ್ನೆಲೆ 8 ಐಎಎಸ್ ಅಧಿಕಾರಿಗಳಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ (Siddaramaiah) ಸೂಚನೆ ಮೇರೆಗೆ ಸಿಎಸ್ ಶಾಲಿನಿ ರಜನೀಶ್ (Shalini Rajneesh) ಕ್ರಮಕೈಗೊಂಡಿದ್ದಾರೆ. ಇಲಾಖೆ ಅಧಿಕಾರಿಗಳು ಸೂಕ್ತ ಉತ್ತರ ನೀಡದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ. ಸದನದಲ್ಲಿ ರ‍್ಕಾರಕ್ಕೆ ತೀವ್ರ ಮುಜುಗರ ಆಗಿತ್ತು. ನಿನ್ನೆ ಸ್ಪೀಕರ್ ಯು.ಟಿ.ಖಾದರ್ ಕೂಡ ಅಸಮಾಧಾನ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿದ್ದರು. ಹೀಗಾಗಿ, ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ. ಇದನ್ನೂ ಓದಿ: ಅಪರೂಪದಲ್ಲಿ ಅಪರೂಪ| ಸಚಿವರು, ಅಧಿಕಾರಿಗಳ ವಿರುದ್ಧ ಗರಂ – ಸಭಾತ್ಯಾಗ ನಡೆಸಿ ಹೊರನಡೆದ ಸ್ಪೀಕರ್ ಖಾದರ್
ಎಲ್ಲಾ ಇಲಾಖೆ ಅಪರ ಮುಖ್ಯ ಕರ‍್ಯರ‍್ಶಿ, ಪ್ರಧಾನ ಕರ‍್ಯರ‍್ಶಿ, ಕರ‍್ಯರ‍್ಶಿಗಳಿಗೆ ಸಿಎಸ್ ನೋಟಿಸ್ ಜಾರಿ ಮಾಡಿದ್ದಾರೆ. ಒಂದು ವಾರದಲ್ಲಿ ಉತ್ತರ ಕೊಡದೇ ಹೋದರೆ ಯಾಕೆ ಉತ್ತರ ಕಳಿಸಲು ಸಾಧ್ಯವಾಗಿಲ್ಲ ಅಂತ ವಿವರಣೆ ನೀಡಬೇಕು ಎಂದು ತಿಳಿಸಿದ್ದಾರೆ.
8 ಇಲಾಖೆಗಳ ಅಧಿಕಾರಿಗಳಿಗೆ ನೋಟಿಸ್
* ಪಶುಸಂಗೋಪನಾ ಇಲಾಖೆ ಕಾರ್ಯದರ್ಶಿ- ಆರ್.ವಿನೋತ್ ಪ್ರಿಯಾ
* ವಸತಿ ಇಲಾಖೆ ಕಾರ್ಯದರ್ಶಿ- ಮೋಹನ್ ರಾಜ್ ಕೆ.ಪಿ
* ಸಾರಿಗೆ ಇಲಾಖೆ ಕಾರ್ಯದರ್ಶಿ- ಎನ್.ವಿ ಪ್ರಸಾದ್
* ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಕಾರ್ಯದರ್ಶಿ – ಆರ್.ಗೀರಿಶ್
* ಲೋಕಪಯೋಗಿ ಇಲಾಖೆ ಕರ‍್ಯರ‍್ಶಿ- ಅಮ್ಲಾನ್ ಆದಿತ್ಯ ಬಿಸ್ವಾಸ್
* ಕಂದಾಯ ಇಲಾಖೆ- ರಾಜೇಂದರ್ ಕುಮಾರ್ ಕಟಾರಿಯಾ
ಕೂಡಲೇ ಲಿಖಿತ ರೂಪದಲ್ಲಿ ಸ್ಪಷ್ಟನೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬಜೆಟ್ ಅಧಿವೇಶನದಲ್ಲಿ 230 ಪ್ರಶ್ನೆಗಳಿಗೆ ಕೇವಲ 84 ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.
ನಿನ್ನೆ ಯು.ಟಿ ಖಾದರ್ ಕೂಡ ಅಸಮಾಧಾನ ಹೊರಹಾಕಿದ್ದರು. ಸದನ ನಡೆಸೋದು ಮಂತ್ರಿಗಳಿಗಲ್ಲ ಎಂದು ಸದನ ನಿಲ್ಲಿಸಿ ಹೊರ ತೆರಳಿದ್ದರು. ನಂತರ ಸಿಎಂ ಸಿದ್ದರಾಮಯ್ಯ, ಕೆಲ ಸಚಿವರಿಂದ ಸ್ಪೀಕರ್ ಮನವೊಲಿಸಿದ ನಂತರ ಖಾದರ್ ಅಧಿವೇಶನಕ್ಕೆ ಆಗಮಿಸಿದ್ದರು.

