ಬೆಂಗಳೂರು: ಕರ್ನಾಟಕದಲ್ಲಿ ತಮ್ಮ ವಿರುದ್ಧ ಮಾತನಾಡುತ್ತಿರುವ ಬಗ್ಗೆ ಆರ್‌ಎಸ್‌ಎಸ್ (RSS) ಡೋಂಟ್ ಕೇರ್ ಎಂಬ ಸಂದೇಶ ರವಾನಿಸಿದೆ. ಬೆಂಗಳೂರಿನಲ್ಲಿ ಆರ್‌ಎಸ್‌ಎಸ್ ಬಗೆಗಿನ ಹಲವು ಪ್ರಶ್ನೆಗಳಿಗೆ ಸರಸಂಘಚಾಲಕ ಮೋಹನ್ ಭಾಗವತ್ (Mohan Bhagwat) ಖಡಕ್ ಉತ್ತರ ಕೊಟ್ಟಿದ್ದಾರೆ. ಬ್ರಿಟಿಷರ್ ಬಳಿ ಆರ್‌ಎಸ್‌ಎಸ್ ನೋಂದಣಿ ಮಾಡಿಸಬೇಕಿತ್ತಾ? ಮಾಡಿಸಿಲ್ಲ ಅಂತಾ ಎದುರಾಳಿಗಳಿಗೆ ಟಕ್ಕರ್ ಕೊಟ್ಟಿದ್ದಾರೆ. `ಮೆಂಬರ್ ಆಫ್ ದಿ ಹಿಂದೂ ಸೊಸೈಟಿ’ ಆಗಬೇಕು ಅಷ್ಟೇ. ಮುಸ್ಲಿಮರಿಗೂ ಸ್ವಾಗತ ಎಂಬ ಸಂದೇಶ ರವಾನಿಸಿದ್ದಾರೆ.
ಕಳೆದ ಮೂರ್ನಾಲ್ಕು ತಿಂಗಳಿನಿಂದ ಆರ್‌ಎಸ್‌ಎಸ್ ವಿರುದ್ಧ ಕಾಂಗ್ರೆಸ್ ಕಿಡಿ ಕರ್ನಾಟಕದಲ್ಲೇ ಹೆಚ್ಚು ಹೊತ್ತಿಕೊಂಡಿದ್ದು, ಆರ್‌ಎಸ್‌ಎಸ್ ಪಥಸಂಚಲನದಿಂದ ಹಿಡಿದು ಆರ್‌ಎಸ್‌ಎಸ್ ನೋಂದಣಿ ತನಕ ಪ್ರಶ್ನಿಸಿ ಕಾಂಗ್ರೆಸ್ ಅಬ್ಬರಿಸಿತ್ತು. ಇದು ಸಹಜವಾಗಿಯೇ ದೇಶದಲ್ಲಿಯೂ ಸಂಚಲನ, ಪರ-ವಿರೋಧ ಚರ್ಚೆ ಹುಟ್ಟುಹಾಕಿತ್ತು. ಆದರೀಗ ಕರ್ನಾಟಕ ನೆಲದಿಂದಲೇ ದೇಶಕ್ಕೆ ಆರ್‌ಎಸ್‌ಎಸ್ ಸಂದೇಶ ರವಾನಿಸಿದೆ. ಇದನ್ನೂ ಓದಿ: ಆಪರೇಷನ್ ಸಿಂಧೂರದಿಂದ ಕಂಗೆಟ್ಟ ಪಾಕ್ – ಸಂವಿಧಾನಕ್ಕೆ ತಿದ್ದುಪಡಿ ತಂದು ಆಸೀಮ್ ಮುನೀರ್‌ಗೆ ಪ್ರಮುಖ ಹುದ್ದೆ
ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಸಂಘದ 100 ವರ್ಷ ಆಗಿರುವ ಅಂಗವಾಗಿ ಎರಡು ದಿನದಿಂದ ಉಪನ್ಯಾಸ ಕಾರ್ಯಕ್ರಮಗಳು ನಡೆಯುತ್ತಿವೆ. ಎರಡನೇ ದಿನದ ಉಪನ್ಯಾಸದಲ್ಲಿ ಸಂವಾದಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಸಂವಾದದ ವೇಳೆ ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಆರ್‌ಎಸ್‌ಎಸ್ ವಿರುದ್ಧದ ಮಾತುಗಳಿಗೆ ಉತ್ತರ ಕೊಟ್ಟರು. ಆರ್‌ಎಸ್‌ಎಸ್ ನೋಂದಣಿ ಆಗಿಲ್ಲ ಏಕೆ ಎಂಬ ಪ್ರಶ್ನೆಗೆ ಮೋಹನ್ ಭಾಗವತ್ ಉತ್ತರ ಕೊಟ್ಟಿದ್ದಾರೆ. ಈ ಪ್ರಶ್ನೆ ಸಾಕಷ್ಟು ಬರುತ್ತಿದೆ. ಆರ್‌ಎಸ್‌ಎಸ್ ಸ್ಥಾಪನೆ ಆಗಿದ್ದು 1925ರಲ್ಲಿ. ಆಗ ಬ್ರಿಟಿಷರಿದ್ದರು. ನಾವು ಅವರ ಹತ್ತಿರ ಸಂಘವನ್ನು ನೋಂದಣಿ ಮಾಡಿಕೊಳ್ಳಬೇಕಿತ್ತಾ? ನಾವು ಬ್ರಿಟಿಷರ ಹತ್ತಿರ ಸಂಘವನ್ನು ನೋಂದಣಿ ಮಾಡಿಸಲು ನೀವು ನಿರೀಕ್ಷೆ ಮಾಡ್ತೀರಾ? ನಮ್ಮ ಹೋರಾಟ ಬ್ರಿಟಿಷರ ವಿರುದ್ಧ ಇತ್ತು. ಸ್ವಾತಂತ್ರ್ಯ ಬಂದ ನಂತರವೂ ನೋಂದಣಿ ಕಡ್ಡಾಯ ಮಾಡಿಲ್ಲ. ನಮ್ಮದು ಸ್ವತಂತ್ರ ಹಾಗೂ ಕಾನೂನಾತ್ಮಕ ಸಂಘ. ನಮ್ಮದು ಗುರುತಿಸಲ್ಪಡುವ ಸಂಘ. ಆರ್‌ಎಸ್‌ಎಸ್ ಇನ್‌ಕಮ್ ಟ್ಯಾಕ್ಸ್ ಸಹ ಕಟ್ಟುತ್ತಿದೆ. ಗುರುದಕ್ಷಿಣೆ ಹೊರತಾಗಿ ಆದಾಯ ತೆರಿಗೆ ಇಲಾಖೆ, ನಮಗೆ ಟ್ಯಾಕ್ಸ್ ಕಟ್ಟಲು ಸಹ ಹೇಳಿದೆ. ಆರ್‌ಎಸ್‌ಎಸ್ ನಿಷೇಧಿಸಲು 3 ಬಾರಿ ಯತ್ನ ನಡೆದಿದೆ. ಸರ್ಕಾರ ನಮ್ಮನ್ನು ಗುರುತಿಸಿದೆ. ಈ ಬಾರಿ ಕೋರ್ಟ್ ನಿಷೇಧ ಮಾಡುವ ಹುನ್ನಾರವನ್ನು ತಿರಸ್ಕರಿಸಿದೆ. ನಮ್ಮದು ಸಂವಿಧಾನಾತ್ಮಕ ಸಂಘ. ಅದಕ್ಕಾಗಿ ನಮ್ಮ ಸಂಘವನ್ನು ನೋಂದಣಿ ಮಾಡಿಲ್ಲ. ಹಿಂದೂ ಧರ್ಮ ಕೂಡ ನೋಂದಣಿ ಆಗಿಲ್ಲ ಅಂದಿದ್ದಾರೆ ಮೋಹನ್ ಭಾಗವತ್. ಇದನ್ನೂ ಓದಿ: ಕೊಡಗು | ಅರಣ್ಯ ಇಲಾಖೆ ಸಿಬ್ಬಂದಿಯಿಂದಲೇ ರೈತನ ಏಲಕ್ಕಿ ತೋಟ ನಾಶ!
ಇನ್ನು ಸಂಘದಲ್ಲಿ ಮುಸ್ಲಿಂರನ್ನು ಸೇರಿಸಿಕೊಳ್ಳಲು ಅವಕಾಶ ಇದೆಯಾ? ಸಂಘದಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಮಕ್ಕಳಿಗೆ ಶಿಕ್ಷಣ ಸಂಸ್ಥೆಗಳ ಸ್ಥಾಪಿಸುವ ವಿಚಾರ ಇದೆಯಾ? ಎಂಬ ಪ್ರಶ್ನೆಗೆ ಮೋಹನ್ ಭಾಗವತ್ ಉತ್ತರಿಸಿದ್ದಾರೆ. ಮೆಂಬರ್ ಆಫ್ ದಿ ಹಿಂದೂ ಸೊಸೈಟಿ’ ಆಗಬೇಕು ಅಷ್ಟೇ. ಮುಸ್ಲಿಮರಿಗೂ ಸ್ವಾಗತ ಅಂತಾ ಸ್ಪಷ್ಟಪಡಿಸಿದ್ದಾರೆ. ಸಂಘದಲ್ಲಿ ಜಾತಿ, ಲಿಂಗ, ಮುಸ್ಲಿಂ, ಕ್ರೈಸ್ತ, ಬ್ರಾಹ್ಮಣ, ಶೈವ ಎಂಬ ಪಂಥಗಳಿಗೆ ಅವಕಾಶ ಇಲ್ಲ. ಬರೀ ಹಿಂದೂಗಳಿಗೆ ಮಾತ್ರವೇ ಅವಕಾಶ. ಯಾವುದೇ ಧರ್ಮದವರು ಶಾಖೆಗೆ ಬರಬಹುದು. ಆದರೆ ಶಾಖೆಗೆ ಬರುವವರು ತಮ್ಮ ಧರ್ಮವನ್ನು ಹೊರಗಿಟ್ಟು, ಭಾರತ ಮಾತೆಯ ಮಕ್ಕಳಾಗಿ ಬರಬೇಕು. `ಮೆಂಬರ್ ಆಫ್ ದಿ ಹಿಂದೂ ಸೊಸೈಟಿ’ ಮುಸ್ಲಿಂ, ಕ್ರೈಸ್ತ ಯಾರು ಬೇಕಾದರೂ ಶಾಖೆಗೆ ಬರಬಹುದು. ನೀವು ಹಿಂದೂ ಸಮಾಜವನ್ನು ಒಪ್ಪಿಕೊಂಡು ಶಾಖೆಗೆ ಬರಬೇಕು. ನೀವು ಯಾವ ಧರ್ಮದವರು ಅಂತಾನು ನಾವು ಕೇಳಲ್ಲ ಎಂದು ಮೋಹನ್ ಭಾಗವತ್ ಸ್ಪಷ್ಟಪಡಿಸಿದರು. ಇದನ್ನೂ ಓದಿ: Anekal | ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರ ದುರ್ಮರಣ
ಇದೇ ವೇಳೆ ಕರ್ನಾಟಕದಲ್ಲಿ ನಡೆಯುತ್ತಿರುವ ಆರ್‌ಎಸ್‌ಎಸ್ ವಿರುದ್ಧದ ಕೂಗಿಗೆ ಮೋಹನ್ ಭಾಗವತ್ ತೀಕ್ಷ್ಣ ಉತ್ತರ ನೀಡಿದ್ದಾರೆ. ನಾವು ಎಲ್ಲದಕ್ಕೂ ಉತ್ತರಿಸಿ ಸಮಯ ಹಾಳು ಮಾಡಲ್ಲ, ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಬೇಕೆಂದಿಲ್ಲ. ನಮಗೆ ಮಾಡಲು ಬೇಕಾದಷ್ಟು ಇನ್ನೂ ಕೆಲಸಗಳಿವೆ ಅಂತಾ ತಿರುಗೇಟು ಕೊಟ್ಟಿದ್ದಾರೆ. ನಮಗೆ ಮಾಡಲು ಬೇಕಾದಷ್ಟು ಕೆಲಸಗಳು ಇವೆ. ಎಲ್ಲದಕ್ಕೂ ಉತ್ತರಿಸುತ್ತಾ ಸಮಯ ಹಾಳು ಮಾಡುವುದಿಲ್ಲ. ನಾವು ಅವರನ್ನು ಹೆಚ್ಚು ಪ್ರಶ್ನೆ ಕೇಳಲು ಯಾಕೆ ಉತ್ತೇಜಿಸಬೇಕು? ವರ್ಷ ಕಳೆದಂತೆ ಟೀಕೆಗಳು ನಮ್ಮನ್ನು ಇನ್ನಷ್ಟು ಪ್ರಖ್ಯಾತಿಗೊಳಿಸುತ್ತವೆ. ಕರ್ನಾಟಕದಲ್ಲಿ ನಾವು ಈಗ ಅದಕ್ಕೆ ಸಾಕ್ಷಿ ಆಗುತ್ತಿದ್ದೇವೆ. ಪ್ರಶ್ನೆಗಳಿಗೆ ಉತ್ತರಿಸುವುದು ವಿಷಯ ಅಲ್ಲ. ನಾವು ನಮ್ಮ ಕೆಲಸ ಮಾಡುತ್ತಿದ್ದೇವೆ. ಎಲ್ಲವೂ ಗೊತ್ತಾದ ಬಳಿಕವು ಅವರು ನಮ್ಮ ಕೆಲಸಗಳಿಗೆ ಡಿಸ್ಟರ್ಬ್ ಮಾಡಲು ಬಯಸುತ್ತಾರೆ. ಆದರೆ ಅದಕ್ಕೆ ನಾವು ಪ್ರತಿಕ್ರಿಯಿಸಬಾರದು ಅಂತಾ ಮೋಹನ್ ಭಾಗವತ್ ಹೇಳಿದರು. ಇದನ್ನೂ ಓದಿ: ಭೀಮಾ v/s ಕ್ಯಾಪ್ಟನ್ ಫೈಟ್ – ಕಾಳಗದಲ್ಲಿ ಒಂದು ದಂತ ಕಳೆದುಕೊಂಡ ಭೀಮಾ

