ಮೈಸೂರು: 2010 ರಲ್ಲೇ ನಾನು ಸಿಎಂ ಆಗಬೇಕಿತ್ತು. ಆಗ ಅವಕಾಶ ಕೈ ತಪ್ಪಿತ್ತು ಎಂದು ಎಂದು ಮಾಜಿ ಸಚಿವ ಸಿ.ಎಚ್. ವಿಜಯಶಂಕರ್ (Vijay Shankar) ಹೇಳಿದ್ದಾರೆ.
ಮೇಘಾಲಯದ ನೂತನ ರಾಜ್ಯಪಾಲರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಜೊತೆ ವಿಜಯಶಂಕರ್ ಮಾತನಾಡಿದರು.
Advertisement
2010 ರಲ್ಲಿ ಯಡಿಯೂರಪ್ಪ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗ ಅವರು ನನ್ನ ಹೆಸರನ್ನು ಸಿಎಂ ಹುದ್ದೆಗೆ ಶಿಫಾರಸ್ಸು ಮಾಡಿದ್ರು. ಆದರೆ ಆಗ ಆ ಸ್ಥಾನ ಕೈ ತಪ್ಪಿತು.14 ವರ್ಷಗಳ ಅಧಿಕಾರದ ವನವಾಸದ ನಂತರ ಈಗ ಪಕ್ಷ ನನಗೆ ದೊಡ್ಡ ಹುದ್ದೆ ನೀಡಿದೆ ಎಂದರು. ಇದನ್ನೂ ಓದಿ: ರಾಜಸ್ಥಾನದಿಂದ ಬೆಂಗಳೂರಿಗೆ ಬಂದಿದ್ದು ಮೇಕೆ ಮಾಂಸ?
Advertisement
Advertisement
ಪಕ್ಷ ಬಿಟ್ಟು ಹೋಗಿ ರಾಜಕೀಯವಾಗಿ ತಪ್ಪು ನಿರ್ಧಾರ ಮಾಡಿದ್ದೆ. ಅದು ರಾಜಕೀಯದಲ್ಲಿ ಸಹಜ ಕೂಡ ಎಂದು ಹೇಳಿದರು.
Advertisement
ಶನಿವಾರ ವಿಜಯ್ ಶಂಕರ್ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ಅವರು ಮೇಘಾಲಯದ (Meghalaya) ರಾಜ್ಯಪಾಲರನ್ನಾಗಿ ನೇಮಿಸಿದ್ದಾರೆ.
1998, 2004 ರಲ್ಲಿ ವಿಜಯ್ ಶಂಕರ್ ಬಿಜೆಪಿಯಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆ ಆಗಿದ್ದರು. 2019ರಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದ ವಿಜಯ್ ಶಂಕರ್ ಅವರು ಪ್ರತಾಪ್ ಸಿಂಹ ವಿರುದ್ಧ ಸೋತಿದ್ದರು. ಮರಳಿ ಬಿಜೆಪಿಗೆ ಬಂದಿದ್ದ ವಿಜಯ್ ಶಂಕರ್ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದರು.