ಭಾರತದಲ್ಲಿ ಹೆಚ್ಚು ಮಂದಿ ಆಲೂಗಡ್ಡೆಯನ್ನು (Potato) ಇಷ್ಟಪಡುತ್ತಾರೆ. ಸಾಂಬಾರ್, ಪಲ್ಯ, ಹುರಿಯಲು, ಬಜ್ಜಿ ಹೀಗೆ ಹಲವಾರು ವಿಧಗಳಲ್ಲಿ ಆಲೂಗಡ್ಡೆಯನ್ನು ಆಹಾರವಾಗಿ ಸೇವಿಸುತ್ತಾರೆ.
ಮಧುಮೇಹ ಅಥವಾ ಸಕ್ಕರೆ ಕಾಯಿಲೆ (Diabetes) ಇರುವವರು ತಾವು ಸೇವಿಸುವ ಆಹಾರದ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ. ಈ ಆಹಾರ ಸೇವಿಸಬೇಕೋ ಅಥವಾ ಬೇಡವೋ ಅಂತಾ ಯೋಚಿಸುತ್ತಾರೆ. ಅಷ್ಟೇ ಅಲ್ಲ, ಮಧುಮೇಹಿಗಳು ಆಲೂಗಡ್ಡೆ ಸೇವಿಸುವ ಬಗ್ಗೆಯೂ ತುಂಬಾ ಗೊಂದಲ ಭಾವನೆ ಹೊಂದಿದ್ದಾರೆ. ಇದನ್ನೂ ಓದಿ: ಎದೆನೋವು ಬಂದ್ರೆ ಗ್ಯಾಸ್ಟ್ರಿಕ್ ಅಂತಾ ನಿರ್ಲಕ್ಷಿಸಬೇಡಿ – ಹೃದಯಾಘಾತ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವೈದ್ಯರು ಹೇಳೋದೇನು?
ಡಯಾಬಿಟಿಸ್ ಇರುವವರು ಆಲೂಗಡ್ಡೆ ತಿನ್ನಬಹುದೇ ಅಥವಾ ಬೇಡವೆ? ತಿಂದರೆ ಏನಾಗಬಹುದು? ತಿನ್ನುವುದಾದರೆ ಯಾವ ಪ್ರಮಾಣದಲ್ಲಿ ತಿನ್ನಬೇಕು ಎಂಬೆಲ್ಲ ಪ್ರಶ್ನೆಗಳಿಗೆ ಇತ್ತೀಚೆಗೆ ನಡೆದ ಸಂಶೋಧನೆಯೊಂದು ಉತ್ತರ ನೀಡಿದೆ.
ಮಧುಮೇಹಿಗಳು ಆಲೂಗಡ್ಡೆಯಿಂದ ಯಾಕೆ ದೂರ ಇರುತ್ತಾರೆ?
ಮಧುಮೇಹ ಇರುವವರು ತಾವು ಸೇವಿಸುವ ಆಹಾರದಲ್ಲಿನ ಕಾರ್ಬೋಹೈಡ್ರೇಟ್‌ನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ರಕ್ತದಲ್ಲಿನ ಸಕ್ಕರೆ ಮಟ್ಟ ಅಧಿಕವಾಗುತ್ತದೆ. ಕಾರ್ಬೋಹೈಡ್ರೇಟ್ ಸಮೃದ್ಧ ಮೂಲವಾಗಿರುವ ಆಲೂಗಡ್ಡೆಯು ಸಕ್ಕರೆಯ ಅಸಮತೋಲನ ಉಂಟುಮಾಡುತ್ತದೆ. ಹೀಗಾಗಿ ಮಧುಮೇಹ ರೋಗಿಗಳು ಯಾವಾಗಲೂ ಅದರಿಂದ ದೂರವಿರುತ್ತಾರೆ. ಇದನ್ನೂ ಓದಿ: ಎಕ್ಕದ ಗಿಡದಿಂದ ಆರೋಗ್ಯಕ್ಕೆ ಸಿಗುತ್ತೆ ಹಲವಾರು ಪ್ರಯೋಜನ
ಮಧುಮೇಹಕ್ಕೆ ಯಾವ ಪದಾರ್ಥ ಕಾರಣ?
ಆಲೂಗಡ್ಡೆ ಫ್ರೈಸ್/ಚಿಪ್ಸ್, ಬೇಯಿಸಿದ, ಹುರಿದ ಮತ್ತು ಹಿಸುಕಿ ತಯಾರಿಸಿದ ಆಲೂಗಡ್ಡೆ ಪದಾರ್ಥಗಳ ಸೇವನೆಯು ಮಧುಮೇಹಕ್ಕೆ ಕಾರಣವಾಗುತ್ತೆ ಎಂದು ಅಧ್ಯಯನವು ತಿಳಿಸಿದೆ. ಇಂತಹ ಪದಾರ್ಥಗಳ ಸೇವನೆಯ ವಿಚಾರವಾಗಿ ಮಧುಮೇಹಿಗಳು ಎಚ್ಚರಿಕೆ ವಹಿಸಬೇಕು.
ಆಲೂಗಡ್ಡೆಯಲ್ಲಿ ಪೊಟ್ಯಾಸಿಯಮ್ ಮತ್ತು ಬಿ ವಿಟಮಿನ್ ಸಮೃದ್ಧವಾಗಿವೆ. ಮಧುಮೇಹ ಹೊಂದಿರುವವರು, ಆಲೂಗಡ್ಡೆಯ ಅಂಶವು ರಕ್ತದಲ್ಲಿನ ಗ್ಲೂಕೋಸ್ ಮಟ್ಟದ ಮೇಲೆ ಪರಿಣಾಮ ಬೀರುವ ವಿಚಾರವನ್ನು ಅರಿಯಬೇಕು. ಆಲೂಗಡ್ಡೆಗಳು ಹೆಚ್ಚಿನ ಕಾರ್ಬೋಹೈಡ್ರೇಟ್ ಆಹಾರವಾಗಿದ್ದು, ಅದು ರಕ್ತದಲ್ಲಿನ ಗ್ಲೂಕೋಸ್ ಮಟ್ಟದಲ್ಲಿ ಅಸಮತೋಲ ಉಂಟು ಮಾಡುತ್ತದೆ. ಇದನ್ನೂ ಓದಿ: ಈ ಕ್ರಮ ಅನುಸರಿಸಿದ್ರೆ ʼಆಲ್‌ಝೈಮರ್ʼ ರೋಗ ತಡೆಗಟ್ಟಬಹುದು
ಮಧುಮೇಹಿಗಳು ಆಲೂಗಡ್ಡೆ ಸೇವಿಸುವಂತಿಲ್ಲವೇ?
ಮಧುಮೇಹಿಗಳು ಸಂಪೂರ್ಣವಾಗಿ ಆಲೂಗಡ್ಡೆ ಸೇವಿಸುವುದನ್ನು ಬಿಡಬೇಕು ಅಂತಾ ಸಂಶೋಧನೆ ಹೇಳುವುದಿಲ್ಲ. ಮಿತ ಪ್ರಮಾಣದಲ್ಲಿ ಆಹಾರದಲ್ಲಿ ಆಲೂಗಡ್ಡೆ ಸೇರಿಸಿ ಸೇವಿಸುವುದು ಒಳಿತು. ತರಕಾರಿ ಜೊತೆ ನಿಗದಿತ ಪ್ರಮಾಣದಲ್ಲಿ ಆಲೂಗಡ್ಡೆಯನ್ನು ಸೇರಿಸಿ ತಿಂದರೆ ತೊಂದರೆಯಿಲ್ಲ ಎಂದು ಹೇಳುತ್ತದೆ ಸಂಶೋಧನೆ.