ಬೆಂಗಳೂರು: ಮೊಟ್ಟೆ (Egg) ದರ ಏರಿಕೆಯಾಗಿದ್ದು, ಸರ್ಕಾರಿ ಶಾಲೆಗಳಲ್ಲಿ (Govt Schools) ಹೆಚ್ಚುವರಿ ಹಣ ಹೊಂದಿಸಲಾಗದೆ ಮೊಟ್ಟೆಗೆ ಕೊಕ್ ನೀಡಲಾಗಿದೆ.
ಮಾರುಕಟ್ಟೆಯಲ್ಲಿ ಮೊಟ್ಟೆ ದರ 2-3 ರೂ. ಏರಿಕೆಯಾಗಿದೆ. ಮೊಟ್ಟೆ ದರ ಏರಿಕೆ ಆಗಿದ್ದರಿಂದ ಶಾಲೆಗಳಲ್ಲಿ ಹಣಕಾಸು ಕೊರತೆ ಉಂಟಾಗುತ್ತಿದೆ. ಮೊಟ್ಟೆ ಖರೀದಿಗೆ ಸರ್ಕಾರ ಅನುದಾನ ಹೆಚ್ಚಳ ಮಾಡಿಲ್ಲ. ಈ ಬಗ್ಗೆ ಪ್ರಸ್ತಾವನೆ ಹೋದರೂ ಸರ್ಕಾರ ಅದಕ್ಕೆ ಗ್ರೀನ್ ಸಿಗ್ನನ್ ಕೊಟ್ಟಿಲ್ಲ. ಇದರಿಂದ ಶಿಕ್ಷಕರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಅಲ್ಲದೇ ಶಾಲಾ ಮಕ್ಕಳಿಗೆ ಕೇವಲ ಬಾಳೆಹಣ್ಣನ್ನು ಕೊಟ್ಟು ಶಿಕ್ಷಕರು ಕೈತೊಳೆದುಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಶುದ್ಧವಿದ್ದ ರಾಜಕೀಯ, ಡಿಕೆಶಿ ಸಿಎಂ ಆದ ಬಳಿಕ ಕಲುಷಿತವೇ? – ಶ್ರೀರಾಮುಲು
ರಾಜ್ಯದಲ್ಲಿ 1-10ನೇ ತರಗತಿವರೆಗಿನ ಮಕ್ಕಳಿಗೆ 6 ದಿನ ಸರ್ಕಾರ ಮೊಟ್ಟೆ ಕೊಡುತ್ತಿದೆ. ಸುಮಾರು 55 ಲಕ್ಷ ಮಕ್ಕಳಿಗೆ ನಿತ್ಯ ಮೊಟ್ಟೆ ಶಿಕ್ಷಣ ಇಲಾಖೆ ಮೊಟ್ಟೆ ಕೊಡುತ್ತಿದೆ. ಇದಕ್ಕಾಗಿ ಶಾಲಾ ಹಂತದಲ್ಲಿ ಮೊಟ್ಟೆ ಖರೀದಿಗೆ 6 ರೂ. ಕೊಡಲಾಗುತ್ತಿದೆ.
ಗ ಮಾರುಕಟ್ಟೆಯಲ್ಲಿ ಮೊಟ್ಟೆ ದರ 8-9 ರೂ.ಗೆ ಏರಿಕೆಯಾಗಿದೆ. ಮೊಟ್ಟೆ ದರ ಏರಿಕೆ ಆದರೋ ಹೆಚ್ಚುವರಿ ಹಣವನ್ನು ಸರ್ಕಾರ ನೀಡುತ್ತಿಲ್ಲ. ಹೀಗಾಗಿ ಮೊಟ್ಟೆಗೆ ಹಣ ಭರಿಸಲಾಗದೇ ಶಿಕ್ಷಕರು ಹೈರಾಣಾಗಿದ್ದಾರೆ. ಇದನ್ನೂ ಓದಿ: ಕೆಪಿಎಸ್‍ಸಿ ಹಗರಣದ ಸಿಬಿಐ ತನಿಖೆಗೆ ಬಿಜೆಪಿ ಆಗ್ರಹ
