– ರೋಗಿಗಳು ಬಂದರೆ ಚಿಕಿತ್ಸೆ ಕಷ್ಟ
ಬೆಂಗಳೂರು: ಇಲ್ಲಿನ ಶಿವಾಜಿನಗರದಲ್ಲಿರುವ (Shivajinagara) ಚಕರ ಸರ್ಕಾರಿ ಆಸ್ಪತ್ರೆಯಲ್ಲಿ (Charaka Super Speciality Hospital) ವೈದ್ಯರ ಕೊರತೆ ಇದ್ದು, ಸರ್ಕಾರಿ ರಜೆ ಎಂದು ಮಧ್ಯಾಹ್ನದ ನಂತರ ಓಪಿಡಿ ಬಂದ್ ಮಾಡಲಾಗುತ್ತಿದೆ. ಇದರಿಂದ ರೋಗಿಗಳು ಬಂದರೆ ಚಿಕಿತ್ಸೆ ಪಡೆಯುವುದು ಕಷ್ಟವಾಗಿದೆ.
ಶಿವಾಜಿನಗರದಲ್ಲಿ ಹೊಸದಾಗಿ ಚರಕ ಆಸ್ಪತ್ರೆಯನ್ನು ನಿರ್ಮಾಣ ಮಾಡಿದ್ದಾರೆ. ಸುಸಜ್ಜಿತವಾಗಿ ಸುಂದರವಾಗಿ ಯಾವ ಖಾಸಗಿ ಆಸ್ಪತ್ರೆಗೂ ಕಡಿಮೆ ಇಲ್ಲ ಎನ್ನುವ ರೀತಿಯಲ್ಲಿ ಇದೆ. ಆದರೆ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದೆ. ಅದರಲ್ಲೂ ಸರ್ಕಾರಿ ರಜೆ ಬಂದಾಗ ಓಪಿಡಿ (ಹೊರ ರೋಗಿಗಳ ವಿಭಾಗ) ಕ್ಲೋಸ್ ಮಾಡುತ್ತಾರೆ. ಗುರುವಾರ ಗಾಂಧಿ ಜಯಂತಿ ಹಿನ್ನೆಲೆ ಕಾರ್ಯಕ್ರಮ ಇದ್ದ ಕಾರಣ ಮಧ್ಯಾಹ್ನದ ವೇಳೆ ವೈದ್ಯರೇ ಇರಲಿಲ್ಲ. ಓಪಿಡಿ ಕೊಠಡಿಯಲ್ಲಿ ವೈದ್ಯರಿಲ್ಲ. ರೋಗಿಗಳು ಬಂದರೆ ಚಿಕಿತ್ಸೆಯು ಸಿಗುತ್ತಿಲ್ಲ. ಇದನ್ನೂ ಓದಿ: ಅಗತ್ಯ ಪೌಷ್ಟಿಕ ಆಹಾರ ವಿತರಣೆಗೆ ಮಿಲೆಟ್ಸ್ ಖರೀದಿ ಹೆಚ್ಚಳ – ಪ್ರಹ್ಲಾದ್ ಜೋಶಿ
ಇಲ್ಲಿ ಸೆಕ್ಯೂರಿಟಿ, ವೈದ್ಯಕೀಯ ಸಿಬ್ಬಂದಿ ಇದ್ದಾರೆ ಅಷ್ಟೇ. ಆದರೆ ಡಾಕ್ಟರ್ ಇಲ್ಲ. ಈ ಆಸ್ಪತ್ರೆಯಲ್ಲಿ ಉಚಿತವಾಗಿ ಹೃದಯ ಚಿಕಿತ್ಸೆ, ಪ್ಲಾಸ್ಟಿಕ್ ಸರ್ಜರಿ, ನ್ಯೂರೋ ಸರ್ಜರಿ, ನೆಫ್ರೋ ನ್ಯೂರಾಲಜಿ ಸೇರಿದಂತೆ ಹಲವು ಚಿಕಿತ್ಸೆ ಲಭ್ಯವಿದೆ. ರೋಗಿಗಳಿಗೆ ಅನುಕೂಲ ಆಗುತ್ತದೆ. ಆದರೆ ರಜೆ ದಿನಗಳಲ್ಲಿ ಓಪಿಡಿ ಇರುವುದಿಲ್ಲ. ದಿನದ 24 ಗಂಟೆ ಓಪಿಡಿ ಇಲ್ಲದಿರುವುದಕ್ಕೆ ಕಾರಣ ವೈದ್ಯರ ಕೊರತೆ ಎಂದು ಹೇಳಲಾಗುತ್ತಿದೆ. ಸುಸಜ್ಜಿತವಾಗಿ ಆಸ್ಪತ್ರೆ ಇದೆ. ಆದರೆ ವೈದ್ಯಕೀಯ ಸಿಬ್ಬಂದಿ ಇಲ್ಲ. ಇದನ್ನೂ ಓದಿ: ಭವಾನಿ ರೇವಣ್ಣಗೆ ಬಿಗ್ ರಿಲೀಫ್ – ಜಾಮೀನು ಅರ್ಜಿ ವಜಾ ಮಾಡಲು ನಿರಾಕರಿಸಿದ ಸುಪ್ರೀಂ
ವೈದ್ಯಕೀಯ ಶಿಕ್ಷಣ ಇಲಾಖೆ, ಸಚಿವರು ಕೂಡಲೇ ಶಿವಾಜಿನಗರದಲ್ಲಿ ಇರುವ ಚರಕ ಆಸ್ಪತ್ರೆಗೆ ವೈದ್ಯರ ನೇಮಕ ಮಾಡಿ ಓಪಿಡಿ ಬಂದ್ ಮಾಡದಂತೆ ಕ್ರಮ ವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಯಾದಗಿರಿ | ಮಳೆಯ ಅವಾಂತರಕ್ಕೆ ಶೆಡ್ ಗೋಡೆ ಕುಸಿದು ವೃದ್ಧೆ ಸಾವು