ಅಂಗಡಿ ಮಾಲೀಕರೇ ಎಚ್ಚರವಾಗಿರಿ – ನಿಮ್ಮನ್ನು ಬೇರೆ ಕಡೆ ಸೆಳೆದು ದೋಚ್ತಾರೆ ಹಣ

Public TV
1 Min Read
Shop owners be careful thieves will lure you elsewhere and steal your money Nelamangala Bengaluru 2

ಬೆಂಗಳೂರು: ಅಂಗಡಿ ಮಾಲೀಕರೇ (Shop Owner) ಎಚ್ಚರವಾಗಿರಿ. ನಿಮ್ಮನ್ನು ಬೇರೆ ಕಡೆ ಸೆಳೆದು ಕಳ್ಳತನ (Theft) ಮಾಡುವ ಜಾಲ ಈಗ ಸಕ್ರಿಯವಾಗಿದೆ.

ನೆಲಮಂಗಲ (Nelamangala) ತಾಲೂಕಿನ ಡಾಬಸ್‌ಪೇಟೆಯಲ್ಲಿ ಮಾಲೀಕನ ಗಮನವನ್ನು ಬೇರೆ ಕಡೆ ಸೆಳೆದು‌ ಇಬ್ಬರು ಕಳ್ಳರು (Thief) ಕಳ್ಳತನ ಎಸಗಿದ್ದಾರೆ.

ಕುಮಾರ್.ವಿ ಎಂಬವರು ಶಿವಗಂಗೆ ವೃತ್ತದ ಬಳಿ ಎಸ್ ವಿ ಎಸ್ ಹೆಸರಿನ ಪ್ರಾವಿಜನ್ ಸ್ಟೋರ್ ಹಾಕಿದ್ದಾರೆ. ಜೂನ್‌ 6 ರಂದು ಹಾಡಹಗಲೇ ಇಬ್ಬರು ಕಳ್ಳರು ಕೈಚಳಕ ತೋರಿ 48 ಸಾವಿರ ರೂ. ಕದ್ದು ಪರಾರಿಯಾಗಿದ್ದಾರೆ. ಖತರ್ನಾಕ್ ಕಳ್ಳರ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಡಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಶಿಕೋಹ್‌ಪುರ ಭೂ ವ್ಯವಹಾರ ಕೇಸ್‌ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ವಿರುದ್ಧ ED ಚಾರ್ಜ್‌ಶೀಟ್

Shop owners be careful thieves will lure you elsewhere and steal your money Nelamangala Bengaluru

ಕೃತ್ಯ ಹೇಗೆ?
ಕಳ್ಳರು ಮೊದಲು ಒಬ್ಬನೇ ಮಾಲೀಕ ಇರುವ ಅಂಗಡಿಗೆ ಬರುತ್ತಾರೆ. ಸಾಮಾನ್ಯವಾಗಿ ಅಂಗಡಿಯ ಬಾಗಿಲಿನ ಹೊರಭಾಗದಲ್ಲೂ ವಸ್ತುಗಳನ್ನು ನೇತು ಹಾಕಲಾಗಿರುತ್ತದೆ. ಇದನ್ನೂ ಓದಿ:ಯುಪಿಯಲ್ಲಿ ಯೋಗಿ ಆದಿತ್ಯನಾಥ್‌ ಸಿಎಂ ಆದ ನಂತರ 15,000 ಎನ್‌ಕೌಂಟರ್‌ 238 ಮಂದಿ ಹತ್ಯೆ

ಈ ಅಂಗಡಿಗಳನ್ನೇ ಗುರಿಯಾಗಿಸಿದ ಇಬ್ಬರು ಕಳ್ಳರ ಪೈಕಿ ಓರ್ವ ಹೊರಗಡೆಯಲ್ಲಿ ನೇತು ಹಾಕಿದ ವಸ್ತು ಖರೀದಿಸಲು ಬರುತ್ತಾನೆ. ಈ ವೇಳೆ ಮಾಲೀಕ ಹೊರಗಡೆ ಬಂದು ಆತನಿಗೆ ಆ ವಸ್ತುವಿನ ಬೆಲೆಯ ಬಗ್ಗೆ ವಿವರ ನೀಡುತ್ತಿರುತ್ತಾನೆ. ಈ ಸಂದರ್ಭದಲ್ಲೇ ಅಲ್ಲೇ ಇದ್ದ ಮತ್ತೊಬ್ಬ ಕಳ್ಳ ಅಂಗಡಿಯ ಒಳಗಡೆ ನುಗ್ಗಿ ಡ್ರಾಯರ್‌ ಒಳಗೆ ಕೈ ಹಾಕಿ ಹಣವನ್ನು ಕದ್ದು ಪರಾರಿಯಾಗಿದ್ದಾನೆ.

Share This Article