ಬೆಂಗಳೂರು: ಕೊಡಿಗೆಹಳ್ಳಿಯಲ್ಲಿ (Kodigehalli) ಚಿನ್ನದ ಅಂಗಡಿ (Jewellary Shop) ಮಾಲೀಕನ ಮೇಲೆ ಶೂಟೌಟ್ (Shootout) ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಖತರ್ನಾಕ್ ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ.
ಖಾನಾ ಪಂಡಿತ್, ಆಶು ಪಂಡಿತ್, ಮೋಸೆ ಅಲಿಯಾಸ್ ಬಂಟಿ ಹಾಗೂ ಸೂರಜ್ ಎಂಬವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಖದೀಮರು ಸಣ್ಣ ಸಣ್ಣ ಆಭರಣದ ಅಂಗಡಿಗಳನ್ನು ಮಾತ್ರ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದರು. ದೊಡ್ಡ ದೊಡ್ಡ ಅಂಗಡಿಗಳಲ್ಲಿ ಸಾಕಷ್ಟು ಜನರು ಕೆಲಸ ನಿರ್ವಹಿಸುತ್ತಾರೆ. ಸಣ್ಣ ಸಣ್ಣ ಅಂಗಡಿಗಳಲ್ಲಿ ಒಬ್ಬರು, ಇಬ್ಬರು ಮಾತ್ರ ಕೆಲಸ ಮಾಡುವುದರಿಂದ ಅಂತಹ ಅಂಗಡಿಗಳನ್ನು ಟಾರ್ಗೆಟ್ ಮಾಡುತ್ತಿದ್ದರು. ಇದನ್ನೂ ಓದಿ: ನಾನು ಅಮೆರಿಕ ಅಧ್ಯಕ್ಷನಾಗಿ ಆಯ್ಕೆಯಾಗದಿದ್ದರೆ ದೇಶದಲ್ಲಿ ರಕ್ತಪಾತವಾಗುತ್ತೆ: ಟ್ರಂಪ್
Advertisement
Advertisement
ಪ್ರಕರಣ ಸಂಬಂಧ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಇನ್ನು ಘಟನೆ ಸಂಬಂಧ ಆರೋಪಿಗಳು ಯಡವಟ್ಟು ಮಾಡಿದ್ದು, ಶೂಟೌಟ್ ವೇಳೆ ತಮ್ಮದೇ ಗ್ಯಾಂಗ್‌ನ ಸದಸ್ಯ ಸೂರಜ್ ಎಂಬಾತನಿಗೆ ಗುಂಡು ಹಾರಿಸಿದ್ದಾರೆ. ಆಶು ಪಂಡಿತ್ ಮಾಡಿದ ಯಡವಟ್ಟಿಗೆ ಸೂರಜ್ ಗಂಟಲಿಗೆ ಗುಂಡೇಟು ಬಿದ್ದಿದೆ. ಸದ್ಯ ಸೂರಜ್ ಗ್ವಾಲಿಯರ್‌ನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದನ್ನೂ ಓದಿ: ಬೆಂಗಳೂರಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಲಕ್ಷ ಲಕ್ಷ ಹಣ ಸೀಜ್
Advertisement
ಆಶು ಪಂಡಿತ್ ಹಾಗೂ ಖಾನಾ ಪಂಡಿತ್ ಮೇಲೆ 20ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ. ಕಳೆದ ವಾರವಷ್ಟೇ ಇದೇ ರೀತಿಯಾಗಿ ಮುಂಬೈನಲ್ಲಿ ಕಳ್ಳತನ ಮಾಡಿ ಅಲ್ಲಿಂದ ಎಸ್ಕೇಪ್ ಆಗಿದ್ದರು. ಇದೀಗ ನಾಲ್ವರ ಪೈಕಿ ಮೂವರನ್ನು ಕರೆತಂದು ವಿಚಾರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಮುಖಂಡನ ಮೇಲೆ ಹಲ್ಲೆ – ಗುಬ್ಬಿ ಶಾಸಕ ಶ್ರೀನಿವಾಸ್ ವಿರುದ್ಧ ಎಫ್‍ಐಆರ್
Advertisement
ಎರಡು ಬೈಕ್‌ಗಳಲ್ಲಿ ಬಂದ ನಾಲ್ಕು ಮಂದಿ ದುಷ್ಕರ್ಮಿಗಳಲ್ಲಿ, ಇಬ್ಬರು ಇಳಿದು ಗುಂಡಿನ ದಾಳಿ ಮಾಡಿದ್ದಾರೆ. ಈ ವೇಳೆ ಅಂಗಡಿ ಮಾಲೀಕ ಅಪ್ಪುರಾಮ್ ಎಂಬವರ ಹೊಟ್ಟೆಗೆ ಗುಂಡು ತಗುಲಿದೆ. ಅಲ್ಲದೇ ಅಂತರಾಮ್ ಎಂಬವರ ಕಾಲಿಗೆ ಗುಂಡು ತಗುಲಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪ್ಪುರಾಮ್ ಸ್ಥಿತಿ ಗಂಭೀರವಾಗಿದೆ. ಇದನ್ನೂ ಓದಿ: ಉಜ್ಬೇಕಿಸ್ತಾನ್ ಮಹಿಳೆ ಕೊಲೆ ಕೇಸ್; ಹಣದಾಸೆಗೆ ನಡೆದಿತ್ತು ಕೃತ್ಯ – ಕೇರಳದಲ್ಲಿ ಇಬ್ಬರ ಬಂಧನ