ಕೊಲ್ಕತ್ತಾ: ಟ್ರೈನಿ ವೈದ್ಯೆ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ವಿಚಾರವಾಗಿ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ (Mamata Banerjee) ವಿರುದ್ಧ ನಾಲಿಗೆ ಹರಿಬಿಟ್ಟಿದ್ದ ದ್ವಿತೀಯ ಬಿಕಾಂ ವಿದ್ಯಾರ್ಥಿನಿಯನ್ನು ಕೊಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ.
ಕೊಲ್ಕತ್ತಾದ (Kolkata) ಆರ್.ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಅತ್ಯಾಚಾರ ಹಾಗೂ ಹತ್ಯೆಗೀಡಾದ 31 ವರ್ಷದ ಸ್ನಾತಕ್ಕೋತ್ತರ ತರಬೇತಿ ವೈದ್ಯೆಯ ಗುರುತು ಹಾಗೂ ಫೋಟೋವನ್ನು ವಿದ್ಯಾರ್ಥಿ ಬಹಿರಂಗ ಪಡಿಸಿದ್ದಾರೆ ಎಂದು ಕೊಲ್ಕತ್ತಾ ಪೊಲೀಸರು ಆರೋಪಿಸಿದ್ದಾರೆ. ಇದನ್ನೂ ಓದಿ: ಸದ್ಯಕ್ಕೆ ಸಿಎಂ ಸಿದ್ದರಾಮಯ್ಯ ಸೇಫ್
Advertisement
ಕೃತಿ ಶರ್ಮಾ ಬಂಧಿತ ವಿದ್ಯಾರ್ಥಿ. ಈಕೆ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ `ಕೃತಿ ಸೋಶಿಯಲ್’ (kirtisocial) ಎಂಬ ಖಾತೆಯನ್ನು ನಿರ್ವಹಿಸುತ್ತಿದ್ದಳು ಎಂದು ಪೊಲೀಸರಿಂದ ತಿಳಿದು ಬಂದಿದೆ. ಸಿಎಂ ಮಮತಾ ಬ್ಯಾನರ್ಜಿಯನ್ನ ಇಂದಿರಾಗಾಂಧಿ (Indira Gandhi) ಮಾದರಿಯಲ್ಲೇ ಹತ್ಯೆ ಮಾಡಬೇಕು ಎಂದು ಕರೆ ನೀಡಿದ್ದರು. ಇದಕ್ಕೆ ಸಂಬಂಧಪಟ್ಟಂತೆ 2 ಪೋಸ್ಟ್ ಗಳನ್ನೂ ಹಾಕಿದ್ದಳು ಎಂದು ಪೊಲೀಸರು ಆರೋಪಿಸಿದ್ದಾರೆ. ಈ ಪೋಸ್ಟ್ ಗಳು ಪ್ರಚೋದನಕಾರಿ, ಅಶಾಂತಿ ಉಂಟುಮಾಡುವಲ್ಲಿ ಹಾಗೂ ದ್ವೇಷ ಭಾವನೆ ಮೂಡಿಸುವಂತಿದೆ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯಪಾಲರ ವಿರುದ್ಧ ಸುದ್ದಿಗೋಷ್ಠಿ – ಸಿಎಂ ಬೆಂಬಲಿಗನಿಗೆ ಹೃದಯಾಘಾತ, ಸಾವು
Advertisement
Advertisement
ಇದಕ್ಕೂ ಮುನ್ನ ಘಟನೆಗೆ ಸಂಬಂಧಿಸಿದಂತೆ ಮತ್ತೋರ್ವ ಯುವಕನನ್ನು ಬಂಗಾಳ (Bengal) ಪೊಲೀಸರು ಬಂಧಿಸಿದ್ದರು. ಸಾದ್ನಿಕ್ ಲಾಹಾ (23) ಬಂಧಿತ ಆರೋಪಿಯಾಗಿದ್ದಾನೆ. ಈತ ಪಾಲಿಟೆಕ್ನಿಕ್ ವಿದ್ಯಾರ್ಥಿಯಾಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ತೃಣಮೂಲ ಕಾಂಗ್ರೆಸ್(Congress) (ಟಿಎಂಸಿ) ನಾಯಕನನ್ನು ಗುರಿಯಾಗಿಸಿಕೊಂಡಿದ್ದಾನೆ. ವಿದ್ಯಾರ್ಥಿ ಮಮತಾ ಬ್ಯಾನರ್ಜಿ ಬಗ್ಗೆ ಅವಹೇಳನ ವಿಚಾರಗಳನ್ನು ಮಾತನಾಡಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ. ಇದನ್ನೂ ಓದಿ: ಬೆಸ್ಕಾಂ ಎಡವಟ್ಟು; 1 ತಿಂಗಳಿಗೆ ಬರೋಬ್ಬರಿ 5.86 ಲಕ್ಷ ರೂ. ವಿದ್ಯುತ್ ಬಿಲ್ – ಹೌಹಾರಿದ ಮನೆ ಮಾಲೀಕ