ಬೆಂಗಳೂರು: ಗುಂಡಿ ಮುಚ್ಚುವ ಕಾಮಗಾರಿ ಹಿನ್ನೆಲೆಯಲ್ಲಿ ಇದೇ ತಿಂಗಳ 26 ರಿಂದ ಮೈಸೂರು ರಸ್ತೆ ಫ್ಲೈಓವರ್ (ಸಿರ್ಸಿ ಸರ್ಕಲ್) ಮುಚ್ಚಲಿದ್ದು, ವಾಹನ ಸವಾರರು ಮುಂದಿನ 4 ತಿಂಗಳು ಪರ್ಯಾಯ ಮಾರ್ಗ ನೋಡಿಕೊಳ್ಳಬೇಕಿದೆ.
ಮೈಸೂರು ರಸ್ತೆ, ಬಸವನಗುಡಿ, ಮೆಜೆಸ್ಟಿಕ್, ಗೋರಿಪಾಳ್ಯ ಮಾರ್ಗವಾಗಿ ಸಂಚರಿಸಲು ಬೆಂಗಳೂರಿನ ಸಿರ್ಸಿ ಫ್ಲೈಓವರ್ ಬಳಸುತ್ತಿದ್ದ ವಾಹನ ಸವಾರರು ನೋಡಲೇಬೇಕಾದ ಸುದ್ದಿ ಇದಾಗಿದೆ. ಫ್ಲೈಓವರ್ ಮೇಲೆ ಬಿದ್ದಿರುವ ಗುಂಡಿಗಳನ್ನು ಮುಚ್ಚುವ ಕಾಮಗಾರಿ ಹಿನ್ನೆಲೆಯಲ್ಲಿ ಇದೇ ತಿಂಗಳ 27 ರಂದು ಫ್ಲೈಓವರ್ ಬಂದ್ ಆಗಲಿದೆ. ಈ ಮೂಲಕ ವಾಹನ ಸಂಚಾರಕ್ಕೆ ಬ್ರೇಕ್ ಬೀಳಲಿದೆ.
Advertisement
Advertisement
ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಟೆಕ್ಕಿ ಟಾರ್ ಶೀಟ್ ಅಳವಡಿಸಲಾಗುತ್ತದೆ. ಮೂರು ಮಿಲಿ ಮೀಟರ್ ಗಾತ್ರದ ಸಣ್ಣ ಡಾಂಬಾರ್ ಶೀಟ್ ಹಾಕಿ ಕಾಂಕ್ರಿಟ್ ಮೇಲ್ಭಾಗದಲ್ಲಿ ಡಾಂಬರೀಕರಣ ಮಾಡಲಾಗುತ್ತದೆ. ಇನ್ನು ಈ ಕಾಮಗಾರಿಗೆ 4 ತಿಂಗಳ ಸಮಯ ಕೇಳಿದ್ದು, 2 ತಿಂಗಳಲ್ಲಿ ಮುಗಿಸುವ ವಿಶ್ವಾಸವಿದೆ ಎಂದು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
Advertisement
ಕಳೆದ 4 ವರ್ಷಗಳ ಹಿಂದೆ ಫ್ಲೈಓವರ್ ಡಾಂಬರೀಕರಣ ಮಾಡಲಾಗಿತ್ತು. ಗುಂಡಿ ಬಿದ್ದಿದೆ ಎಂದು 3 ತಿಂಗಳ ಹಿಂದೆಯಷ್ಟೇ ಗುಂಡಿ ಮುಚ್ಚುವ ಕೆಲಸವೂ ಆಗಿದೆ. ಈಗ ಮತ್ತೆ 4 ಕೋಟಿ 50 ಲಕ್ಷ ವೆಚ್ಚದಲ್ಲಿ ಮತ್ತೆ ಕಾಮಗಾರಿ ಕೈಗೆತ್ತಿಕೊಂಡಿದೆ.
Advertisement
4 ಹಂತದಲ್ಲಿ ಫ್ಲೈಓವರ್ ಬಂದ್ ಆಗಲಿದೆ. ಮೊದಲು ರಾಯನ್ ಸರ್ಕಲ್ ನಿಂದ ಮೈಸೂರು ರಸ್ತೆವರೆಗೂ ಬಂದ್ ಮಾಡಲಾಗುತ್ತದೆ. ಮತ್ತೆ ಟೌನ್‍ಹಾಲ್ ಭಾಗದಿಂದ ರಾಯನ್ ಸರ್ಕಲ್‍ವರೆಗೂ ಕಾಮಗಾರಿ ಮಾಡಲಾಗುತ್ತದೆ. ಇತ್ತ ಮೂರನೇ ಹಂತದಲ್ಲಿ ಮೈಸೂರು ರಸ್ತೆಯಿಂದ ಮಾರುಕಟ್ಟೆವರೆಗೂ ಬಂದ್ ಮಾಡಲಾಗುತ್ತದೆ. ಕಡೆಯದಾಗಿ ಕೆ.ಆರ್.ಮಾರುಕಟ್ಟೆಯಿಂದ ಟೌನ್ ಹಾಲ್ ತಲುಪುವ ಫ್ಲೈಓವರ್ ತಲುಪುವ ಕಡೆಯ ಭಾಗದವರೆಗೂ ಡಾಂಬರೀಕರಣ ಕಾಮಗಾರಿ ನಡೆಯಲಿದೆ. ಹೀಗಾಗಿ ವಾಹನ ಸವಾರರು ಮುಂದಿನ 4 ತಿಂಗಳೂ ಪರ್ಯಾಯ ಮಾರ್ಗ ನೋಡಿಕೊಳ್ಳಬೇಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv