ಖ್ಯಾತನಟಿ ಅಮಲಾರನ್ನು ಮಂಚಕ್ಕೆ ಕರೆದ ವ್ಯಕ್ತಿಗೆ ಹೈಕೋರ್ಟ್ ಶಾಕ್

Public TV
1 Min Read
amala paul 1

ನ್ನಡದಲ್ಲಿ ಕಿಚ್ಚ ಸುದೀಪ್ ನಟನೆಯ ಹೆಬ್ಬುಲಿ ಚಿತ್ರದಲ್ಲಿ ನಟಿಸಿರುವ ಅಮಲಾ ಪೌಲ್, ಲೈಂಗಿಕ ಕಿರುಕುಳಕ್ಕೆ ಒಳಗಾದ ಘಟನೆ ಇದೀಗ ಮತ್ತೆ ಸುದ್ದಿಯಾಗಿದೆ. ಈ ಘಟನೆಗೆ ಕುರಿತಂತೆ ತಮಗೂ ಮತ್ತು ಘಟನೆಗೂ ಯಾವುದೇ ಸಂಬಂಧವಿಲ್ಲ. ಹಾಗಾಗಿ ಪ್ರಕರಣವನ್ನು ವಜಾಗೊಳಿಸಿ ಎಂದು ಚೆನ್ನೈನ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ಇಬ್ಬರು ಉದ್ಯಮಿಗಳ ಅರ್ಜಿಯನ್ನೇ ಮಾನ್ಯ ಕೋರ್ಟ್ ವಜಾಗೊಳಿಸಿ ಶಾಕ್ ಕೊಟ್ಟಿದೆ.

amala paul 3

ಅದು 2018ನೇ ಇಸವಿ. ಈ ವೇಳೆಯಲ್ಲಿ ಅಮಲಾ ಪೌಲ್ ಅವರು ಮಲೇಶಿಯಾದಲ್ಲಿ ಚಿತ್ರೀಕರಣವಾಗುತ್ತಿದ್ದ ಡಾನ್ಸ್ ಶೋವನ್ನು ನಡೆಸಿಕೊಡಲು ಅವರು ಒಪ್ಪಿಕೊಂಡಿದ್ದರು. ಹೀಗಾಗಿ ಚೆನ್ನೈನಲ್ಲಿರುವ ಶ್ರೀಧರ್ ಎನ್ನುವವರ ಮಾಲೀಕತ್ವದಲ್ಲಿ ನಡೆಯುತ್ತಿದ್ದ ಸ್ಟುಡಿಯೋದಲ್ಲಿ ರಿಹರ್ಸಲ್ ಮಾಡುತ್ತಿದ್ದರು. ರಿಹರ್ಸಲ್ ಮಾಡುವ ವೇಳೆ ಇವರಿಗೆ ಅಳಗೇಶನ್ ಎನ್ನುವವರು ಪರಿಚವಾದರು. ಈ ವೇಳೆಯಲ್ಲಿ ಮಲೇಶಿಯಾಗೆ ಹೋಗುವಾಗ ದಾರಿ ಮಧ್ಯ ಉದ್ಯಮಿಯೊಬ್ಬರ ಜೊತೆ ಡಿನ್ನರ್ ಪಾರ್ಟಿ ಮತ್ತು ಲೈಂಗಿಕ ಆಸೆ ತೀರಿಸುತ್ತೀರಾ ಎಂದು ಕೇಳಿದ್ದರಂತೆ. ಇದನ್ನೂ ಓದಿ:ಬುದ್ದಿಜೀವಿ ವಲಯಕ್ಕೆ ನಟ ಚೇತನ್ ‘ಚಮಚ’ ಅಂದಿದ್ದು ಯಾಕೆ ಮತ್ತು ಯಾರಿಗೆ?

amala paul 2

ಈ ಘಟನೆಯಿಂದ ಆಘಾತಕ್ಕೊಳಗಾದ ಅಮಲಾ ಅವರು ಶ್ರೀಧರ್ ಮತ್ತು ಅಳಗೇಶ್ ಇಬ್ಬರೂ ಸೆಕ್ಸ್ ರಾಕೆಟ್ ತಂಡದವರು ಎಂದು ದೂರು ದಾಖಲಿಸಿದ್ದರು. ಉದ್ಯಮಿಯಿಬ್ಬರ ಹೆಸರನ್ನೂ ದೂರಿನಲ್ಲಿ ದಾಖಲಿಸಿದ್ದರು. ಭಾಸ್ಕರ್ ಮತ್ತು ಶ್ರೀಧರ್ ಬಂಧನವಾಗಿತ್ತು. ಇದೀಗ ಉದ್ಯಮಿಗಳ ಬಾಕಿ ಪ್ರಕರಣವನ್ನು ರದ್ದುಗೊಳಿಸುವಂತೆ ಉದ್ಯಮಿಗಳು ಅರ್ಜಿ ಸಲ್ಲಿಸಿದ್ದರು. ಇದೀಗ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

Live Tv

Share This Article
Leave a Comment

Leave a Reply

Your email address will not be published. Required fields are marked *