ಬೆಂಗಳೂರು: ಹೊಸ ವರ್ಷದ ಆರಂಭದಲ್ಲೇ ಬಿಎಂಟಿಸಿ ವಜ್ರ ಬಸ್ (BMTC Vajra Bus) ಪ್ರಯಾಣಿಕರಿಗೆ ಶಾಕ್ ನೀಡಿದೆ. ಗುರುವಾರದಿಂದ ದೂರದ ಬಿಎಂಟಿಸಿ ವಜ್ರ ಪ್ರಯಾಣದ ದರ ಹೆಚ್ಚಳವಾಗಿದೆ. ಈ ಬಗ್ಗೆ ಬೆಂಗಳೂರು (Bengaluru) ಮಹಾನಗರ ಸಾರಿಗೆ ಸಂಸ್ಥೆ ಆದೇಶ ಹೊರಡಿಸಿದೆ.
ಜನವರಿ 1 ರಿಂದ ಹವಾ ನಿಯಂತ್ರಿತ ಬಸ್‌ನ ದೈನಂದಿನ, ಮಾಸಿಕ ಪಾಸ್‌ಗಳ ದರವನ್ನು ಏರಿಕೆ ಮಾಡಲಾಗಿತ್ತು. ಜನವರಿ 5 ರಿಂದ ದೂರದ ಪ್ರಯಾಣ ದರ ಕೂಡ ಹೆಚ್ಚಳವಾಗಿದೆ. 20 ಕಿ.ಮೀ ಗಿಂತ ದೂರದ ಪ್ರಯಾಣದದರದಲ್ಲಿ ಏರಿಕೆಯಾಗಿದೆ. ಇದನ್ನೂ ಓದಿ: 86ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹಾವೇರಿ ನಗರ ಸಜ್ಜು- ಶುಕ್ರವಾರದಿಂದ 3 ದಿನಗಳ ಕಾಲ ಕನ್ನಡ ಹಬ್ಬ
Advertisement
Advertisement
20 ಕಿ.ಮೀ ವಯಸ್ಕರ ಪ್ರಯಾಣಕ್ಕೆ ಈ ಹಿಂದೆ 45 ರೂ. ಇತ್ತು. ಗುರುವಾರದಿಂದ 20 ಕಿ.ಮೀ ವಯಸ್ಕರ ಪ್ರಯಾಣಕ್ಕೆ 50 ರೂ. ಆಗಿದೆ. 21 ಕಿ.ಮೀ ವಯಸ್ಕರ ಪ್ರಯಾಣಕ್ಕೆ ಈ ಹಿಂದೆ 50 ರೂ. ಇದ್ದು, ಗುರುವಾರದಿಂದ 21 ಕಿ.ಮೀ ವಯಸ್ಕರ ಪ್ರಯಾಣಕ್ಕೆ 55 ರೂ. ಆಗಿದೆ. ಇದನ್ನೂ ಓದಿ: ಭೀಕರ ರಸ್ತೆ ಅಪಘಾತ- ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ: ಗೋವಿಂದ ಕಾರಜೋಳ ಘೋಷಣೆ
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k