ಹಾವೇರಿ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನ (Kannada Sahitya Sammelan) ಕ್ಕೆ ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ಸಜ್ಜಾಗಿದೆ. ಜನವರಿ 6, 7 ಮತ್ತು 8 ರಂದು ನಡೆಯುವ ಈ ಅದ್ದೂರಿ ಕನ್ನಡ ಹಬ್ಬಕ್ಕೆ ಭರ್ಜರಿ ಸಿದ್ಧತೆ ನಡೆಸಲಾಗಿದೆ.
Advertisement
ಹಾವೇರಿಯ ಹೊರವಲಯದ ಅಜ್ಜಯ್ಯ ಗುಡಿಯ ಹತ್ತಿರ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ. ಜರ್ಮನ್ (German Technology) ತಂತ್ರಜ್ಞಾನವನ್ನ ಬಳಿಸಿ ಪ್ರಧಾನ ವೇದಿಕೆ ಹಾಗೂ ಪುಸ್ತಕ ಮಳಿಗೆ, ವಸ್ತು ಪ್ರದರ್ಶನ ಮಾಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಹಾವೇರಿ ಜಿಲ್ಲಾಡಳಿತ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ.
Advertisement
Advertisement
ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಲಕ್ಷಾಂತರ ಭಾಗಿಯಾಗುವ ಸಾಧ್ಯತೆ ಇದೆ. ಪ್ರತಿ ದಿನ 1.5 ಲಕ್ಷ ಜನರಿಗೆ ಊಟ ಹಾಗೂ 70 ಸಾವಿರ ಜನರಿಗೆ ಉಪಹಾರ ವ್ಯವಸ್ಥೆ ಮಾಡಲಾಗಿದೆ. ಸಮ್ಮೇಳನಕ್ಕೆ ಬರುವ ಪ್ರತಿಯೊಬ್ಬ ಕನ್ನಡ ಅಭಿಮಾನಿಗಳಿಗೆ ಹೊಟ್ಟೆ ತುಂಬ ಬಗೆ ಬಗೆಯಾದ ಊಟದ ವ್ಯವಸ್ಥೆ ನೀಡಲು ಭರದ ಸಿದ್ಧತೆ ನಡೆದಿದೆ. ಇದನ್ನೂ ಓದಿ: ನಮ್ಮ ಮೀಸಲಾತಿಗೆ ಕನ್ನ- ಸರ್ಕಾರದ ವಿರುದ್ಧ ಬ್ರಾಹ್ಮಣ ಮಹಾಸಭಾ ಕಿಡಿ
Advertisement
ಸಮ್ಮೇಳನಕ್ಕೆ ಬರುವ ಸಾಹಿತ್ಯಾಭಿಮಾನಿಗಳಿಗೆ ಉತ್ತರ ಕರ್ನಾಟಕ (Uttara Karnataka) ಶೈಲಿಯಲ್ಲಿ ಭರ್ಜರಿ ಊಟ ಮಾಡಲಾಗುತ್ತೆ. 60 ಸಾವಿರ ಜನರಿಗೆ ಬೆಳಗ್ಗೆ ಉಪಹಾರಕ್ಕೆ ಉಪ್ಪಿಟ್ಟು, ಸೀರಾ, ಬೆಲ್ಲದ ಟೀ, 1.5 ಲಕ್ಷ ಜನರಿಗೆ ಮಧ್ಯಾಹ್ನ ಊಟ, ಶೇಂಗಾ ಹೋಳಿಗೆ, ಬದನೆಕಾಯಿ ಪಲ್ಯಾ, ಚಪಾತಿ, ವೈಟ್ ರೈಸ್, ಸಾಂಬಾರ್, ಉಪ್ಪಿನ ಕಾಯಿ, ಶೇಂಗಾ ಚಟ್ನಿ ಮತ್ತು ಮೊಸರನ್ನು ನೀಡಲಾಗುವುದು. ಇದನ್ನೂ ಓದಿ: ಸರ್ಕಾರ ನಿಗದಿಪಡಿಸಿದ ದರಕ್ಕೆ ಓಲಾ, ಉಬರ್ ಆಕ್ಷೇಪ – ಅಧಿಸೂಚನೆಗೆ ಹೈಕೋರ್ಟ್ ತಡೆ
60 ಸಾವಿರ ಜನರಿಗೆ ರಾತ್ರಿ ಊಟಕ್ಕೆ ಹೆಸರು ಬೇಳೆ, ಪಾಯಸ, ಪುಳಿಯೋಗರೆ, ವೈಟ್ ರೈಸ್, ಸಾಂಬಾರ್, ಉಪ್ಪಿನಕಾಯಿಯನ್ನು ಸಿದ್ಧಪಡಿಸಲಾಗುತ್ತೆ. ಹೀಗೆ ಮೂರು ದಿನವೂ ಬಗೆಬಗೆಯ ಅಡುಗೆ ಮಾಡಲು ಸುಮಾರು 4 ಸಾವಿರ ಬಾಣಸಿಗರ ತಂಡ ಸಜ್ಜಾಗಿದೆ. ಒಟ್ಟಾರೆ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹಾವೇರಿ ಮುಧುವಣಗಿತ್ತಿಯಂತೆ ಸಜ್ಜಾಗಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k