‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟ 62 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಹೀಗಿರುವಾಗ ಭಾನುವಾರದ ಪಂಚಾಯಿತಿಯಲ್ಲಿ ಜನ ವೋಟ್ ಮಾಡಿ ಶೋಭಾರನ್ನು (Shobha Shetty) ಸೇವ್ ಮಾಡಿದ್ದರೂ ಕೂಡ ತಾವು ದೊಡ್ಮನೆ ಆಟ ಕ್ವೀಟ್ ಮಾಡೋದಾಗಿ ಹೇಳಿದ್ದರು. ಶೋಭಾ ಮನವಿಗೆ ಸುದೀಪ್ (Sudeep) ಸಮ್ಮತಿ ನೀಡಿದರು. ಇದೀಗ ಮತ್ತೆ ನಟಿ ಉಲ್ಟಾ ಹೊಡೆದಿದ್ದಾರೆ. ‘ಬಿಗ್ ಬಾಸ್’ ನಾನು ಹೊರಗೆ ಹೋಗಲ್ಲ ಎಂದು ಹೈಡ್ರಾಮಾ ಮಾಡಿದ್ದಾರೆ.
Advertisement
ಮನೆಯಿಂದ ಹೊರ ಹೋಗಲು ನಿರ್ಧಾರ ಮಾಡಿದ ಶೋಭಾ ಶೆಟ್ಟಿಗೆ ಕಿಚ್ಚ ಸುದೀಪ್, ಬುದ್ಧಿ ಹೇಳಿ ಉಳಿಸಿಕೊಳ್ಳುವ ಪ್ರಯತ್ನ ಮಾಡಿದರು. ನಿರ್ಧಾರದಿಂದ ಹಿಂದೆ ಸರಿಯದ ಕಾರಣ, ಶೋಭಾ ಶೆಟ್ಟಿಗೆ ಬಿಗ್ ಬಾಸ್ ಮನೆಯ ಮುಖ್ಯದ್ವಾರ ಓಪನ್ ಆಗಿದೆ. ಆದರೆ ಕಿಚ್ಚ ಸುದೀಪ್ ಎಪಿಸೋಡ್ ಮುಗಿದ ಮೇಲೆ ಮನೆಯಲ್ಲಿ ಏನೆಲ್ಲ ಆಯ್ತು ಅನ್ನೋ ಕುತೂಹಲ ಹೆಚ್ಚಾಗಿದೆ. ಇದೀಗ ವಾಹಿನಿ ಹೊಸ ಪ್ರೋಮೋವೊಂದು ಶೇರ್ ಮಾಡಿದೆ. ಇದನ್ನೂ ಓದಿ:ಉಪೇಂದ್ರ ನಟನೆಯ ‘ಯುಐ’ ವಾರ್ನರ್ ರಿಲೀಸ್
Advertisement
Advertisement
ಅದರಲ್ಲಿ ಶೋಭಾ ಶೆಟ್ಟಿ ಮತ್ತೆ ಮನೆಯಲ್ಲಿ ಇರುವ ಬಗ್ಗೆ ಮಾತನಾಡಿದ್ದಾರೆ. ಒಂದು ವಾರ ಇದ್ದು ನನ್ನನ್ನು ನಾನು ಪ್ರೂವ್ ಮಾಡಿಕೊಳ್ಳಲಿಲ್ಲ ಅಂದರೆ ಕ್ಷಮಿಸಿಕೊಳ್ಳಲ್ಲ ಎಂದು ಕಣ್ಣೀರು ಇಟ್ಟಿದ್ದಾರೆ. ಆಗ ಬಿಗ್ ಬಾಸ್, ಶೋಭಾ ನೀವು ಈ ಕೂಡಲೇ ಮನೆಯ ಮುಖ್ಯದ್ವಾರದಿಂದ ಹೊರಬರಬೇಕು ಎಂದು ಆಜ್ಞೆ ಮಾಡಿದ್ದಾರೆ.
Advertisement
View this post on Instagram
ಕಣ್ಣೀರು ಇಡುತ್ತಲೇ ಹೊರ ಬರುವ ಶೋಭಾ, ಯಾರೆಲ್ಲ ನನಗೆ ವೋಟ್ ಮಾಡಿದ್ದಿರೋ, ನಿಮ್ಮೆಲ್ಲರಿಗೂ ನೋವು ಕೊಡಬೇಕು ಅನ್ನೋ ಉದ್ದೇಶ ನನ್ನದಲ್ಲ. ದಯವಿಟ್ಟು ನನ್ನ ತಪ್ಪನ್ನು ಕ್ಷಮಿಸಿಬಿಡಿ. ಬಿಗ್ ಬಾಸ್ ನನಗೆ ಹೋಗಬೇಕು ಅನಿಸ್ತಿಲ್ಲ ಎಂದು ಬಿಗ್ ಬಾಸ್ ಮನೆಗೆ ನಮಸ್ಕಾರ ಮಾಡಿದ್ದಾರೆ.