ಲೇಹ್: ಡಿಆರ್‌ಡಿಒ ಸಂಸ್ಥೆ ಲಡಾಖಿನಲ್ಲಿ ಹಮ್ಮಿಕೊಂಡಿದ್ದ ಕಿಸಾನ್ ಮೇಳದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪಾಲ್ಗೊಂಡಿದ್ದರು. ಈ ವೇಳೆ ಲಡಾಕ್‍ನ ನಿಮ್ಮು ಪ್ರದೇಶಕ್ಕೆ ಭೇಟಿಕೊಟ್ಟಿದ್ದಾರೆ.
Advertisement
ಉಡುಪಿ ಚಿಕ್ಕಮಗಳೂರು ಸಂಸದೆ ಕೇಂದ್ರ ಕೃಷಿ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಡಿಆರ್‌ಡಿಒ ನಡೆಸಿರುವ ರಾಷ್ಟ್ರ ಮಟ್ಟದ ಕೃಷಿ ಮೇಳ ಮತ್ತು ಕೃಷಿ ಉಪಕರಣಗಳ ಮಾಹಿತಿ ಕಾರ್ಯಾಗಾರದಲ್ಲಿ ಭಾಗಿಯಾಗಿದ್ದಾರೆ. ಆಧುನಿಕ ಮತ್ತು ಪಾರಂಪರಿಕ ಕೃಷಿ ಪದ್ಧತಿಗಳ ಬಗ್ಗೆ ರೈತರಿಗೆ ಅಧಿಕಾರಿಗಳು ಜನಪ್ರತಿನಿಧಿಗಳು ಚರ್ಚೆ ಮಾಡಿದ್ದಾರೆ.
Advertisement
Advertisement
ಲಡಾಕ್ ಪ್ರವಾಸ ಸಂದರ್ಭ ಸಚಿವೆ ಶೋಭಾ ಕರಂದ್ಲಾಜೆ ಸಿಂಧೂ ನದಿಯ ಸಂಗಮ ಸ್ಥಳಕ್ಕೆ ಭೇಟಿಕೊಟ್ಟಿದ್ದಾರೆ. ಸಿಂಧೂ ನದಿಯ ತಟದಲ್ಲಿ ಕೆಲಕಾಲ ಕುಳಿತು ನದಿ ಹರಿವಿನ ಸೌಂದರ್ಯವನ್ನು ಕಣ್ತುಂಬಿಕೊಂಡಿದ್ದಾರೆ. ಇದನ್ನೂ ಓದಿ: ರೈಲ್ವೆ ನಿಲ್ದಾಣದಲ್ಲಿ ಕಿಡ್ನ್ಯಾಪ್ ಆಗಿದ್ದ ಮಗು ಬಿಜೆಪಿ ಕಾರ್ಪೊರೇಟರ್ ಮನೆಯಲ್ಲಿ ಪತ್ತೆ
Advertisement
ಹಿಂದೂ ಪುರಾಣಗಳಲ್ಲಿ ಉಲ್ಲೇಖಿತ ಪವಿತ್ರ ನದಿಗಳಲ್ಲಿ ಒಂದಾದ, ಸಿಂಧೂ ನದಿಯ ಸಂಗಮ ಸ್ಥಳಕ್ಕೆ ಭೇಟಿ ನೀಡುವ ಅವಕಾಶ ಒದಗಿ ಬಂತು. ಲೇಹ್ – ಲಡಾಖಿನ, ನಿಮ್ಮು ಎಂಬ ಪ್ರದೇಶದಲ್ಲಿ ಪವಿತ್ರ ಸಿಂಧೂ ನದಿಯು ಜಂಸ್ಕಾರ (Zanskar) ನದಿಯೊಂದಿಗೆ ಸಂಗಮಗೊಳ್ಳುತ್ತದೆ. ಸರ್ಕಾರಿ ಕಾರ್ಯಕ್ರಮ ಸಂದರ್ಭ ಈ ಪವಿತ್ರ ಸ್ಥಳಕ್ಕೆ ಭೇಟಿಯಾಗುವ ಅವಕಾಶ ಸಿಕ್ಕಿತು ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಇದನ್ನೂ ಓದಿ: ಚಿಕ್ಕಬಳ್ಳಾಪುರದ ಅಂಡರ್‌ಪಾಸ್‌ನಲ್ಲಿ ಲಾರಿ ಪಲ್ಟಿ – ಚಾಲಕನ ಎರಡೂ ಕಾಲು ಕಟ್