LatestMain PostNational

ರೈಲ್ವೆ ನಿಲ್ದಾಣದಲ್ಲಿ ಕಿಡ್ನ್ಯಾಪ್ ಆಗಿದ್ದ ಮಗು ಬಿಜೆಪಿ ಕಾರ್ಪೊರೇಟರ್ ಮನೆಯಲ್ಲಿ ಪತ್ತೆ

ಲಕ್ನೋ: ಕಳೆದ ವಾರ ಮಥುರಾ ರೈಲ್ವೆ ನಿಲ್ದಾಣದಲ್ಲಿ ತಂದೆ-ತಾಯಿಯ ಪಕ್ಕದಿಂದ ಮಲಗಿದ್ದ ಏಳು ತಿಂಗಳ ಮಗು ಕಿಡ್ನ್ಯಾಪ್‌ ಆಗಿತ್ತು. ಇದೀಗ ಈ ಮಗು ಫಿರೋಜಾಬಾದ್‍ನ ಬಿಜೆಪಿ ಕಾರ್ಪೊರೇಟರ್ ಮನೆಯಲ್ಲಿ ಪತ್ತೆಯಾಗಿದೆ. ಈ ಮೂಲಕ ಮಕ್ಕಳನ್ನು ಕದ್ದು ಮಾರಾಟ ಮಾಡುವ ದಂಧೆಯನ್ನು ಪೊಲೀಸರು ಭೇದಿಸಿದ್ದಾರೆ.

POLICE JEEP

ಬಿಜೆಪಿಯ ವಿನಿತಾ ಅಗರ್ವಾಲ್ ಮತ್ತು ಅವರ ಪತಿ ತಮಗೆ ಗಂಡು ಮಗು ಬೇಕು ಎಂಬ ಕಾರಣಕ್ಕೆ ಇಬ್ಬರು ವೈದ್ಯರಿಗೆ 1.8 ಲಕ್ಷ ರೂಪಾಯಿ ನೀಡಿ ಬಾಲಕನನ್ನು ಖರೀದಿಸಿದ್ದರು. ದಂಪತಿಗೆ ಈಗಾಗಲೇ ಮಗಳಿದ್ದಾಳೆ. ಮಗುವನ್ನು ಪ್ಲಾಟ್‍ಫಾರ್ಮ್‍ನಿಂದ ಎತ್ತಿಕೊಂಡು ಹೋಗುವಾಗ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ವ್ಯಕ್ತಿ ಸೇರಿದಂತೆ ಎಂಟು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಕುರಿತಂತೆ ಪತ್ರಿಕಾಗೋಷ್ಠಿ ನಡೆಸಿದ ಮಥುರಾ ರೈಲ್ವೆ ಪೊಲೀಸರು, ನಂತರ ಮಗುವನ್ನು ತಾಯಿಗೆ ಹಸ್ತಾಂತರಿಸಿ, ಸಂತಸಗೊಂಡರು. ಮತ್ತೊಂದೆಡೆ 500 ರೂ. ನೋಟುಗಳ ಕಂತೆಯನ್ನು ಬಂಧಿತ ವೈದ್ಯರಿಂದ ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಮಲಗಿದ್ದ ತಾಯಿಯ ಪಕ್ಕದಿಂದ ಮಗು ಕದ್ದು ಓಡಿದ – ಖತರ್ನಾಕ್ ಕಳ್ಳನ ವೀಡಿಯೋ ವೈರಲ್

ನಂತರ ಈ ಬಗ್ಗೆ ಪ್ರತಿಕ್ರಿಯಿಸಿದ ಹಿರಿಯ ಪೊಲೀಸ್ ಅಧಿಕಾರಿ ಮೊಹಮ್ಮದ್ ಮುಷ್ತಾಕ್, ಹಣಕ್ಕಾಗಿ ಕಳ್ಳಸಾಗಣೆಯಲ್ಲಿ ತೊಡಗಿರುವ ಗ್ಯಾಂಗ್ ಅಪಹರಣವನ್ನು ನಡೆಸಿದೆ. ಮಗುವನ್ನು ಕದ್ದಿರುವ ವ್ಯಕ್ತಿ ದೀಪ್ ಕುಮಾರ್ ಎಂದು ತಿಳಿದುಬಂದಿದೆ. ಆತ ನೆರೆಯ ಹತ್ರಾಸ್ ಜಿಲ್ಲೆಯಲ್ಲಿ ಆಸ್ಪತ್ರೆಯನ್ನು ನಡೆಸುತ್ತಿರುವ ಇಬ್ಬರು ವೈದ್ಯರನ್ನು ಒಳಗೊಂಡಿರುವ ಗ್ಯಾಂಗ್‍ನ ಭಾಗವಾಗಿದ್ದಾನೆ. ಇತರ ಕೆಲವು ಆರೋಗ್ಯ ಕಾರ್ಯಕರ್ತರು ಸಹ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ.

ನಾವು ಮಗುವನ್ನು ಯಾರ ಮನೆಯಲ್ಲಿರಿಸಿದ್ದಾರೆ ಎಂದು ವಿಚಾರಣೆ ನಡೆಸಿದಾಗ, ಕಾರ್ಪೋರೇಟರ್ ಮನೆಯಲ್ಲಿ ಪತ್ತೆಯಾಗಿದೆ. ಅವರು ನಮಗೆ ಒಬ್ಬಳೇ ಮಗಳು ಇರುವುದರಿಂದ ಒಬ್ಬ ಮಗ ಬೇಕು ಎಂದು ಕೇಳಿದ್ದಾರೆ. ಅದಕ್ಕಾಗಿ ಆರೋಪಿಗಳೊಂದಿಗೆ ವಿನಿತಾ ಅಗರ್ವಾಲ್ ದಂಪತಿ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಲಿಫ್ಟ್ ನಿಂತಿದ್ದಕ್ಕೆ ಸೆಕ್ಯೂರಿಟಿ ಗಾರ್ಡ್, ಲಿಫ್ಟ್ ಆಪರೇಟರ್‌ಗೆ ಕಪಾಳಕ್ಕೆ ಬಾರಿಸಿದ ಉದ್ಯಮಿ

ಈ ಘಟನೆ ಹಾಗೂ ಬಂಧಿತ ಕಾರ್ಪೊರೇಟರ್ ಬಗ್ಗೆ ಬಿಜೆಪಿಯಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆಗಸ್ಟ್ 23ರಂದು ರಾತ್ರಿ ಮಥುರಾ ರೈಲು ನಿಲ್ದಾಣದ ಪ್ಲಾಟ್‍ಫಾರ್ಮ್‍ನಲ್ಲಿ ವ್ಯಕ್ತಿಯೋರ್ವ ತನ್ನ ತಾಯಿಯೊಂದಿಗೆ ಮಲಗಿದ್ದ ಮಗುವನ್ನು ಕದ್ದು ಪರಾರಿಯಾಗಿದ್ದನು. ಮೊದಲಿಗೆ ಎಲ್ಲರೂ ಮಲಗಿರುವುದನ್ನು ಗಮನಿಸಿದ ವ್ಯಕ್ತಿ ಒಂದೆರಡು ಬಾರಿ ಸುತ್ತಲೂ ಓಡಾಡಿದ್ದಾನೆ. ನಂತರ ಮತ್ತೆ ಹಿಂದಿರುಗಿ ಬಂದು ಮಗುವನ್ನು ನಿಧನವಾಗಿ ಎತ್ತಿಕೊಂಡು ಅಲ್ಲಿಂದ ಓಡಿ ಹೋಗಿದ್ದನು. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

Live Tv

Leave a Reply

Your email address will not be published. Required fields are marked *

Back to top button