ಬೆಂಗಳೂರು: ನಗರದ ಹೆಚ್‍ಎಎಲ್ ನೌಕಕರೊಂದಿಗೆ ರಾಹುಲ್ ಗಾಂಧಿ ನಡೆಸುತ್ತಿರುವ ಸಭೆ, ಸಂವಾದ ಅನಧಿಕೃತವಾಗಿದ್ದು, ಈ ಮೂಲಕ ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ಗೊಂದಲ ನಿರ್ಮಾಣ ಮಾಡಲು ಆಗಮಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷ ಅಷ್ಟೇ. ಆದರೆ ಇಂದು ನಡೆಯುವ ಸಭೆ ಅನಧಿಕೃತ ಎಂದು ಹೆಚ್‍ಎಎಲ್ ನೌಕರರೇ ಹೇಳಿದ್ದಾರೆ. ಅಲ್ಲದೇ ನಿಷೇಧಿತ ಪ್ರದೇಶದಲ್ಲಿ ಅವರು ಸಂವಾದ ನಡೆಸುತ್ತಿದ್ದು, ಮೀನ್ಸ್ ಸ್ಕ್ವೈಯರ್ ನಿಷೇಧಿತ ಪ್ರದೇಶ. ಇಲ್ಲಿ ಯಾವುದೇ ಪ್ರತಿಭಟನೆ, ಸಭೆ, ಸಂವಾದಗಳನ್ನ ನಡೆಸುವಂತಿಲ್ಲ ಎಂದು ಹೇಳಿದರು.
Advertisement
Advertisement
ರಾಹುಲ್ ಗಾಂಧಿ ರಫೇಲ್ ಒಪ್ಪಂದವನ್ನು ಮುಂದಿಟ್ಟುಕೊಂಡು ಸಭೆ ನಡೆಸುತ್ತಿದ್ದಾರೆ. ಯಾವ ಪುರುಷಾರ್ಥಕ್ಕಾಗಿ ಸಂವಾದ ನಡೆಸ್ತಿದ್ದಾರೆ? ಹೆಚ್‍ಎಎಲ್ ನೌಕರರ ಸಭೆ ಕರೆಯುವ ಅಧಿಕಾರ ರಾಹುಲ್ ಗಾಂಧಿಗೆ ಎಲ್ಲಿದೆ? ಈ ಸಂವಾದ ಮೂಲಕ ಭಾರತೀಯ ಸೈನ್ಯದ ಮಾನಸಿಕಯನ್ನು ಕುಗ್ಗಿಸುವ ಪ್ರಯತ್ನ ರಾಹುಲ್ ಗಾಂಧಿ ಅವರು ಮಾಡುತ್ತಿದ್ದಾರೆ ಎಂದು ಟೀಕಿಸಿದರು.
Advertisement
ಸೈನ್ಯಕ್ಕೆ ಬೇಕಾದ ಅಗತ್ಯ ವಸ್ತುಗಳು ನಮ್ಮಲ್ಲಿ ಕಳೆದ 70 ವರ್ಷಗಳಲ್ಲಿ ಸರಿಯಾಗಿ ಪೂರೈಕೆ ಮಾಡಿಲ್ಲ. ಆದರೆ ಈಗ ಸರ್ಕಾರದ ರಫೇಲ್ ಯುದ್ಧ ವಿಮಾನ ಖರೀದಿಸಿದರೆ ಸಂಶಯ ಹುಟ್ಟು ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಈ ಹಿಂದೆ ಸೈನ್ಯಕ್ಕೆ ಬೇಕಾದ ಶಸ್ತ್ರಾಸ್ತ್ರಗಳನ್ನು ಖರೀದಿಸಲು ತಡೆದವರು ಯಾರು? ದೇಶದಲ್ಲಿ ಹಾಗೂ ರಾಜ್ಯದಲ್ಲಿ ಹಲವಾರು ಕಂಪನಿಗಳು ಮುಚ್ಚಿದ ಕೀರ್ತಿ ಕಾಂಗ್ರೆಸ್‍ಗೆ ಸಲ್ಲಬೇಕು ಎಂದರು.
Advertisement
ಇದೇ ವೇಳೆ ಸಿಎಂ ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧವೂ ಆರೋಪ ಮಾಡಿದ ಸಂಸದೆ, ಸಿಎಂ ತಮ್ಮ ತಪ್ಪು ಮುಚ್ಚಿಟ್ಟುಕೊಳ್ಳಲು ದಿನಕ್ಕೊಂದು ವಿಚಾರ ಹೇಳುತ್ತಿದ್ದಾರೆ. ಸಿಎಂ ಕುಮಾರಸ್ವಾಮಿ ತಮ್ಮ ಆಡಳಿತದ ಅರ್ಧದಷ್ಟು ಸಮಯ ದೇವಸ್ಥಾನಗಳಲ್ಲಿ ಕಳೆದಿದ್ದಾರೆ. ಬಾಕಿ ಅರ್ಧದಷ್ಟು ಸಮಯ ಕೇವಲ ಭರವಸೆ ನೀಡುವಲ್ಲಿ ಸರ್ಕಾರ ಕಳೆದಿದೆ. ಮೈತ್ರಿ ಸರ್ಕಾರದಲ್ಲಿ ಯಾವ ಮಂತ್ರಿ ಯಾವ ಖಾತೆ ನಿರ್ವಹಿಸುತ್ತಿದ್ದಾರೆ ಎಂಬುದು ಹಲವರಿಗೆ ಗೊತ್ತಿಲ್ಲ. ಎನ್ ಮಹೇಶ್ ರಾಜೀನಾಮೆ ನೀಡುವ ಪರಿಸ್ಥಿತಿ ಏಕೆ ನಿರ್ಮಾಣ ಆಯ್ತು? ಅಪವಿತ್ರ ಮೈತ್ರಿ ಎಂದು ಮಹೇಶ್ ರಾಜೀನಾಮೆ ಸ್ಪಷ್ಟಪಡಿಸಿದೆ. ಕಾಂಗ್ರೆಸ್ ದೇಶದಲ್ಲಿ ಮುಳುಗುತ್ತಿರುವ ಹಡಗು. ಮಹಾಘಟಬಂಧನ ಕರ್ನಾಟಕದಲ್ಲಿಯೇ ಹುಟ್ಟಿ ಕರ್ನಾಟಕದಲ್ಲಿಯೇ ಅಂತ್ಯ ಕಂಡಿದೆ. ರಾಹುಲ್ ಗಾಂಧಿ ತಮ್ಮ ಸಂವಾದದಲ್ಲಿ ಕರ್ನಾಟಕದಲ್ಲಿ ಏನು ಪ್ರಗತಿ ಆಗಿದೆ ಆಗಿದೆ ಎಂಬ ಬಗ್ಗೆ ಮಾತನಾಡಬೇಕು ಎಂದು ಆಗ್ರಹಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv